Thursday, May 7, 2026
Google search engine

Homeರಾಜಕೀಯಸಿಎಂ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ : ಕೆ.ಎನ್.ರಾಜಣ್ಣ

ಸಿಎಂ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಲಿ : ಕೆ.ಎನ್.ರಾಜಣ್ಣ

ಮೈಸೂರು : ಹೈಕಮಾಂಡ್ ಸಿಎಂಗೆ ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಕೊಡಲಿ, ಇಲ್ಲ ಬದಲಾವಣೆ ಮಾಡುತ್ತೀವಿ ಅಂತ ಆದ್ರೂ ಹೇಳಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಸಿಎಂ ಬದಲಾಗುತ್ತಾರೆ ಅಂತಾನೂ ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಸಿಎಂಗೆ ನೀವು ಪರಿಪೂರ್ಣ ಸ್ವತಂತ್ರರು ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಆದರೂ ಕೊಡಲಿ. ಇಲ್ಲ ಬದಲಾವಣೆ ಮಾಡುತ್ತೇವೆ ಎಂಬುದಾದರೂ ಹೇಳಲಿ. ಎರಡು ಬಿಟ್ಟು ಬರಿ ಗೊಂದಲವೇ ಇದ್ದರೆ ಅದು ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಹೈಕಮಾಂಡ್ ಅತಿ ಬೇಗ ಜಾಗರೂಕವಾಗಿ ನಿರ್ಧಾರ ಕೈಗೊಳ್ಳಲಿ. ನಿರ್ಧಾರ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಡಿ.ಕೆ.ಶಿವಕುಮಾರ್‌ಗೆ ಆಸೆ ಇರುವುದು ಸಹಜ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಹೀಗಾಗಿ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ. ಅದು ತಪ್ಪು ಕೂಡ ಅಲ್ಲ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular