<b>ಬೆಂಗಳೂರು</b> : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕೆಎಂಎಫ್‌ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು<b> </b> ಭೇಟಿಯಾಗಿ, ಹಾಲಿನ ದರ ಹೆಚ್ಚಳದ ನಿರ್ಧಾರಕ್ಕೆ ಧನ್ಯವಾದಗಳನ್ನು ತಿಳಿಸಿದರು.ರಾಜ್ಯ ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಲೀಟರ್ ಹಾಲಿಗೆ ರೈತರಿಗೆ ನೀಡುವ ಖರೀದಿ ದರದಲ್ಲಿ ₹7 ಹೆಚ್ಚಳ ಮಾಡಲಾಗಿದ್ದು, ಗ್ರಾಹಕರಿಗೆ ಅನ್ವಯಿಸುವ ಎಂಆರ್‌ಪಿ ದರದಲ್ಲಿಯೂ ಪ್ರತಿ ಲೀಟರ್‌ಗೆ ₹8 ಹೆಚ್ಚಳ ಮಾಡಲಾಗಿದೆ. ಇದರಿಂದ ರಾಜ್ಯದ ಸುಮಾರು 11 ಲಕ್ಷ ಹೈನುಗಾರ ರೈತ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಅವರ ಆರ್ಥಿಕ ಸಬಲೀಕರಣಕ್ಕೆ ಮತ್ತಷ್ಟು ಬಲ ದೊರೆಯಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಗಿ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.ಈ ಸಂದರ್ಭದಲ್ಲಿ ಸಚಿವರಾದ   ಲಕ್ಷ್ಮಣ ಸವದಿ,   ಪುಟ್ಟರಂಗಶೆಟ್ಟಿ, ಶಾಸಕರಾದ   ಕೆ.ವೈ.ನಂಜೇಗೌಡ,   ಸಿ.ಪಿ. ಯೋಗೇಶ್ವರ್, ಬಮೂಲ್ ಅಧ್ಯಕ್ಷರಾದ   ಡಿ.ಕೆ. ಸುರೇಶ್, ನನ್ನ ಮುಖ್ಯ ಸಲಹೆಗಾರರಾದ   ಜಿ.ಸಿ. ಚಂದ್ರಶೇಖರ್ ಹಾಗೂ ವಿವಿಧ ಜಿಲ್ಲೆಗಳ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.