ಹಾಸನಾಂಬೆ ದರ್ಶನಕ್ಕೆ 8 ಲಕ್ಷ ಭಕ್ತರು: 6.50 ಕೋಟಿ ರೂ. ಆದಾಯ
ನ.6ಕ್ಕೆ ಸಿದ್ದರಾಮಯ್ಯ, ನ.8ಕ್ಕೆ ಡಿಕೆಶಿ ಭೇಟಿ

ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ಆರಂಭವಾದ ದಿನದಿಂದ ನವೆಂಬರ್ 2ರ ಮಧ್ಯಾಹ್ನದವರೆಗೆ ಸುಮಾರು 8 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ವಿಶೇಷ ದರ್ಶನದ 1,000 ಹಾಗೂ 300 ರೂ. ಟಿಕೆಟ್‌ಗಳ ಮಾರಾಟ ಮತ್ತು ಲಾಡು ಮಾರಾಟದಿಂದ ಒಟ್ಟು 6.50 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ದೇವಾಲಯದ ಆವರಣದಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಕೆಲವು ಹೊಸ ಕಾರ್ಯಕ್ರಮಗಳನ್ನು ಸೇರಿಸಿ ಜಾತ್ರೆ ಆಯೋಜಿಸಲಾಗಿದೆ. ಭಕ್ತರಿಗೆ ಸುಗಮವಾಗಿ ದೇವಿ ದರ್ಶನ ಪಡೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ನವೆಂಬರ್ 6ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನವೆಂಬರ್ 8ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಸನಾಂಬೆ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ಆರಂಭವಾದ ಕ್ರೀಡೋತ್ಸವದಲ್ಲಿ ಜನರ ಉತ್ಸಾಹ ಕಂಡು ಸಂತೋಷವಾಗಿದೆ. ಭಕ್ತರು ಸಹಕರಿಸಿ, ಶಾಂತಿ ಮತ್ತು ತಾಳ್ಮೆಯಿಂದ ದೇವಿಯ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು.
ಸಂಬಂಧಿತ ಸುದ್ದಿಗಳು

ಹಾಸನಾಂಬೆ ಭಕ್ತರಿಗೆ ಗುಡ್ನ್ಯೂಸ್: ಕೇವಲ 60 ರೂಪಾಯಿಗೆ ಲಾಡು ಪ್ರಸಾದ ವಿತರಣೆ..!
ಧರ್ಮ ದರ್ಶನಕ್ಕೆ ಬರುವ ಭಕ್ತರಿಗೆ ಲಾಡು ಪ್ರಸಾದವನ್ನು ಗರಿಷ್ಠ 60 ರೂಪಾಯಿಗೆ ವಿತರಿಸುವಂತೆ
◷ 01/11/2026
ಅಗತ್ಯ ವಸ್ತುಗಳ ಬೆಲೆ ಇಳಿಸಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಿ: ಶೋಭಾ ಕರಂದ್ಲಾಜೆ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್…
◷ 02/11/2026
2028ರ ವಿಧಾನಸಭೆ ಚುನಾವಣೆ ಗುರಿ: ಈಗಿನಿಂದಲೇ ಸಿದ್ಧತೆ ಆರಂಭಿಸಲು ಬಿಜೆಪಿ ಮುಖಂಡರಿಗೆ ಹರೀಶ್ ದ್ವಿವೇದಿ ಸೂಚನೆ
ಬೆಂಗಳೂರು: ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತ…
◷ 02/11/2026
ನಂದಿನಿ ಮೊಸರು ಪ್ರತಿ ಲೀಟರ್ಗೆ 2 ರೂ. ಇಳಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ
ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆಗೆ ರಾಜ್ಯಾದ್ಯಂತ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮುಖ್…
◷ 02/11/2026
