ನವೆಂಬರ್ 5ರಂದು ‘ರಾಮಾಯಣ : ಭಾಗ 1’ ತೆರೆಗೆ
ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು : ಇದೇ ನವೆಂಬರ್ 5ರಂದು ನಿತೇಶ್ ತಿವಾರಿ ನಿರ್ದೇಶನದ, ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ : ಭಾಗ 1’ ತೆರೆ ಕಾಣಲಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಚಿತ್ರದ ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಭಾರತದಲ್ಲಿ ಐದು ಪ್ರದರ್ಶನ ದಿನಾಂಕಗಳ ಮುಂಗಡ ಬುಕಿಂಗ್‌ನಿಂದ ಚಿತ್ರವು ಒಟ್ಟು 73.40 ಕೋಟಿ ರೂ. ಗಳಿಸಿದೆ. ಇದರಲ್ಲಿ ಬ್ಲಾಕ್ ಸೀಟ್ ಗಳನ್ನು ಹೊರತುಪಡಿಸಿದರೆ 58.57 ಕೋಟಿ ಮೊತ್ತದ ಟಿಕೆಟ್‌ಗಳು ಬುಕ್ ಆಗಿವೆ. ಪ್ರೀಮಿಯರ್ ದಿನದ ಮುಂಗಡ ಬುಕಿಂಗ್ 32.41 ಕೋಟಿ ರೂ. ತಲುಪಿದೆ.
ಇದುವರೆಗೆ ದೇಶಾದ್ಯಂತ 60,124 ಪ್ರದರ್ಶನಗಳಿಗೆ 18.67 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿ ತಿಳಿಸಿದೆ.ಮುಂಗಡ ಬುಕಿಂಗ್ ನಲ್ಲಿ ಕರ್ನಾಟಕವೇ ಟಾಪ್ ರಾಜ್ಯವಾರು ಮೊದಲ ದಿನದ ಮುಂಗಡ ಬುಕಿಂಗ್ ಗಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 5.90 ಕೋಟಿ ಮೊತ್ತದ ಟಿಕೆಟ್‌ಗಳು ಬುಕ್ ಆಗಿದ್ದರೆ, ಮಹಾರಾಷ್ಟ್ರದಲ್ಲಿ 5.59 ಕೋಟಿ ಮತ್ತು ದೆಹಲಿಯಲ್ಲಿ 4.34 ಕೋಟಿ ಮೊತ್ತದ ಟಿಕೆಟ್‌ಗಳು ಮಾರಾಟವಾಗಿವೆ. ತೆಲಂಗಾಣ 2.59 ಕೋಟಿ ರೂಪಾಯಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಹಿಂದಿ ಆವೃತ್ತಿಯು ಮುಂಚೂಣಿಯಲ್ಲಿದ್ದು, ಕನ್ನಡ ಆವೃತ್ತಿಯು 3.62 ಕೋಟಿ ಮೊತ್ತದ ಟಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ತೆಲುಗಿನಿಂದ 2.45 ಕೋಟಿ ರೂ. ಗಳಿಸಿದೆ. ತಮಿಳಿನಿಂದ 70.57 ಲಕ್ಷ ಹಾಗೂ ಮಲಯಾಳಂ 22.04 ಲಕ್ಷ ಮೊತ್ತದ ಟಿಕೆಟ್‌ಗಳು ಬುಕ್ ಆಗಿವೆ. ಹಿಂದಿ 3D ಆವೃತ್ತಿಯು 7,973 ಪ್ರದರ್ಶನಗಳ ಮೂಲಕ 14.47 ಕೋಟಿ ಮೊತ್ತದ ಮುಂಗಡ ಬುಕಿಂಗ್ ದಾಖಲಿಸಿದೆ. ಇದು ಮೊದಲ ದಿನದ ಒಟ್ಟು ಮುಂಗಡ ಬುಕಿಂಗ್‌ನ ಸುಮಾರು ಶೇ.45ರಷ್ಟಾಗಿದೆ.
ಸಂಬಂಧಿತ ಸುದ್ದಿಗಳು

50ದಿನ ಪೂರೈಸಿದ ಅಮೆರಿಕಾ ಅಮೆರಿಕಾ2
ಬೆಂಗಳೂರು : ಹಿರಿಯ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ‘ಅಮೆರಿಕಾ ಅಮೆರಿಕಾ 2’ 50 ದಿನ…
◷ 04/11/2026
ಅಗ್ನಿವೀರರ ಸೇವಾ ಅವಧಿ ವಿಸ್ತರಣೆ
ನವದೆಹಲಿ : ಕೇಂದ್ರ ಸರ್ಕಾರ ಅಗ್ನಿವೀರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ‘ಅಗ್ನಿಪಥ್' ಯೋಜನೆಯಡಿ ಸೇನೆಗೆ ಸೇರ್ಪಡೆಗೊಂಡ ಅಗ್ನಿವೀರರ …
◷ 04/11/2026
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿಗೆ ಗಿಫ್ಟ್
ಬೆಂಗಳೂರು : ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ. ತುಟ್ಟಿಭತ್ಯೆಯನ್ನು ಶೇ. 2.50…
◷ 04/11/2026
ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರೆ ಬಸ್ ಪ್ರಯಾಣ ದರ ಇಳಿಸಲು ಸಿದ್ಧ : ಸಿಎಂ ಡಿಕೆಶಿ
ಬೆಂಗಳೂರು : "ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಿದರೆ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲೂ ಬಸ್ ಪ್ರಯಾಣ ದರ ಕಡಿಮೆ…
◷ 04/11/2026
