ವಿನಯ್ ದೊಡ್ಡಕೊಪ್ಪಲು  ಕೆ. ಆರ್.ನಗರ : ಕಷ್ಟ ಬಂದರೆ ಸಾಕು ಮಾರುದ್ದ ನಿಲ್ಲುವ ಬಂದುಗಳ ನಡುವೆ ಮೃತ ಪಟ್ಟ ಸ್ನೇಹಿತನ ಕುಟುಂಬಕ್ಕೆ ನೆರವಿನ ಹಸ್ತ ಚಾಚುವ ಸ್ನೇಹಿತರು ಕಷ್ಟಕ್ಕೆ ಜೀವ ಕೊಡುವ ಸ್ನೇಹ ಇಂದಿಗೂ ಜೀವಂತವಾಗಿದೆ ಎಂಬುದನ್ನು  ಸ್ನೇಹಿತರು ಸಾಕ್ಷಿಕರಿಸಿದ್ದಾರೆ   ತಮ್ಮೊಂದಿಗೆ ಒಂದೇ ಶಾಲೆಯಲ್ಲಿ ಓದಿಕೊಂಡಿದ್ದ ಸ್ನೇಹಿತ ಜೊತೆಯಲಿ ಇಲ್ಲ ಅಲ್ಲದೇ ತಮಗೆ ಸಹಾಯ ಮಾಡಿ ಎಂದು ಆ ಕುಟುಂಬವು ಕೇಳಲಿಲ್ಲ ಅಸಲಿಗೆ ಇಂತಹ ಸ್ನೇಹಿತರಿದ್ದಾರೆ ಅಂತಲೂ ಆ ಕುಟುಂಬಸ್ಥರಿಗೆ ಗೊತ್ತಿಲ್ಲ ಆದರೂ ತಮ್ಮ ನಡುವೆ ಇಲ್ಲದ ಸ್ನೇಹಿತನಿಗಾಗಿ ಒಂದಾದ ಗೆಳೆಯರು ಆ ಕುಟುಂಬಕ್ಕೆ ನೆರವು ನೀಡಿದ್ದಾರೆ.  ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದ ಹರಕಥೆ ದಾಸರಾದ ದಿ. ಗೋವಿಂದಯ್ಯ ಅವರ ಪುತ್ರ ಎಚ್.ಜಿ.ಕಾಂತರಾಜು(42) ಅವರು ಕಳೆದ ಅ.13 ರಂದು ಮೃತ ಪಟ್ಟಿದ್ದರು ಮೊದಲೇ ತಂದೆ ಕಳೆದು ಕೊಂಡಿದ್ದ ಇವರ ಕುಟುಂಬದವರು ಇದ್ದ ಒಬ್ಬ ಮಗನನ್ನು ಕಳೆದು ಕೊಂಡು ಇವರ ಕುಟುಂಬಕ್ಕೆ ಬರ ಸಿಡಿಲು ಬಡಿದಂತೆ ಅಗಿತ್ತು        ಇದರಿಂದ ಇವರ ತಾಯಿ ಮತ್ತು ಮದುವೆ ಅಗದ  ಓರ್ವ ಸಹೋದರಿ ( ಇನ್ನೊರ್ವ ಸಹೋದರಿ ಮದುವೆ ಅಗಿದ್ದು) ಕಾಂತ ರಾಜು ನಿಧನ ದಿಂದ ದಿಕ್ಕು ತೋಚದಂತೆ ಅಗಿದೆ  ಇಂತಹ ಸಂದರ್ಭದಲ್ಲಿ ಇವನ ಜೊತೆ ವ್ಯಾಸಂಗ ಮಾಡಿದ್ದ ಸ್ನೇಹಿತರು ಸ್ನೇಹಿತನ ಕುಟುಂಬಕ್ಕೆ ನೆರವಿನ ಹಸ್ತ ಚಾಚುವ ಮೂಲಕ ಅಗಲಿದ ಸ್ನೇಹಕ್ಕೆ ಕಂಬನಿ ಮಿಡಿದಿದ್ದಾರೆ.  ರಂಗಭೂಮಿ ಕಲಾವಿದರಾಗಿದ್ದ   ಕಾಂತರಾಜು ನಿಧನರಾದ ಬಳಿಕ ಇವರ ಮನೆಯ ಸ್ಥಿತಿಗತಿ ಗಮನಿಸಿದ ಇವನ ಜೊತೆ ಬಾಲ್ಯದ ಶಿಕ್ಷಣ ಕಳೆದ ಚಿಕ್ಕಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ನೇಹಿತರು ಮತ್ತು ಪ್ರೌಡಶಿಕ್ಷಣ ಕಳೆದ ಹೊಸೂರಿನ ಶ್ರೀರಾಮ ಪ್ರೌಡಶಾಲೆಯ ಸ್ನೇಹಿತರು ಇವರ ಕುಟುಂಬಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದ್ದು ವಾಟ್ಸ್ ಅಪ್ ಗ್ರೂಪ್. ಕಾಂತರಾಜು ಜೊತೆ ಓದಿದ  ಚಿಕ್ಕಕೊಪ್ಪಲು ಶಾಲೆಯ 1991-97 ರ ವರೆಗಿನ ಬ್ಯಾಚಿನ ಗೆಳೆಯರು ಬಾಲ್ಯದ ಗೆಳೆಯರ ಸಮ್ಮಿಲನ ಹೆಸರಿನಲ್ಲಿ ಮತ್ತು 2008 ರಿಂದ 2001 ತನಕ ಪ್ರೌಡಶಾಲೆ ಓದಿದ ಗೆಳೆಯರು ಮಾಡಿಕೊಂಡ ಶ್ರೀರಾಮ ಪ್ರೌಡ ಶಾಲೆಯ ಹೊಸೂರು ವಾಟ್ಸ್ ಅಪ್ ಗ್ರೂಪ ನಲ್ಲಿ  ಇವನ ಕುಟುಂಬಕ್ಕೆ ಆರ್ಥಿಕ ನೆರವು ಕೂರಿತು ಹಾಕಿದ  ಸಂದೇಶಕ್ಕೆ ಸ್ನೇಹಿತ-ಸ್ನೇಹಿತೆಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.  ಚಿಕ್ಕಕೊಪ್ಪಲು ಶಾಲೆಯ ಗೆಳೆಯರು 20 ಸಾವಿರ ರೂಪಾಯಿ ಮತ್ತು ಶ್ರೀರಾಮ ಪ್ರೌಡಶಾಲೆಯವರು 26,500 ರೂಗಳಂತೆ ಒಟ್ಟು 46,500 ರೂಗಳನ್ನು ಸಂಗ್ರಹ ಮಾಡಿ ಮೃತ ಕಾಂತರಾಜು ಅವರ ತಾಯಿ ಸರೋಜಮ್ಮ  ಅವರ ಕೈಗೆ ಹಸ್ತಾಂತರ ಮಾಡಿದಾಗ ಅವರ ಕಣ್ಣಗಳು ನೀರು ಅದವು     ಒಟ್ಟಿನಲ್ಲಿ ಅಧುನಿಕತೆ ಬೆಳೆದಂತೆ  ಸ್ನೇಹ ಮತ್ತು ಕುಟಂಬಗಳ ಸಂಬಂಧವೇ ದೂರವಾಗಿ ಹೋಗುತ್ತಿರುವ ನಡುವೆ 20 ವರ್ಷಗಳ ಹಿಂದೆ ತಮ್ಮ ಜೊತೆ ಓದಿ ಇವಾಗ ನಿಧನರಾದ ಸ್ನೇಹಿತನ  ಕುಟುಂಬಕ್ಕಾಗಿ ಸ್ನೇಹಿತ- ಸ್ನೇಹಿತೆಯರು ಒಂದುಗೂಡಿ ಆರ್ಥಿಕ ನೆರವಿನ ಹಸ್ತ ಚಾಚುವ ಮೂಲಕ ಸ್ನೇಹಕ್ಕೆ ಅರ್ಥ ಕೊಟ್ಟ ಇವರೆಡು ಬ್ಯಾಂಚಿನ ಗೆಳೆಯರು ಇತರೆ ಗೆಳೆಯರಿಗೆ ಮಾದರಿಯಾಗಿದ್ದು ಇವರ ಕಾರ್ಯವನ್ನು‌  ರಾಜ್ಯಧರ್ಮ ಅಭಿನಂದಿಸಿದೆ.