ಭಾರತದಲ್ಲಿ ಚೀತಾ ಸಂರಕ್ಷಣೆಗೆ ಮತ್ತಷ್ಟು ಬಲ : 4 ಹೊಸ ಮರಿಗಳ ಜನನ, ಒಟ್ಟು ಸಂಖ್ಯೆ 62ಕ್ಕೆ ಏರಿಕೆ

ನವದೆಹಲಿ: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ (Project Cheetah) ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ಬೋಟ್ಸ್‌ವಾನಾದಿಂದ ತರಲಾಗಿದ್ದ ಎರಡೂವರೆ ವರ್ಷದ 'KOMG 3' ಹೆಸರಿನ ಹೆಣ್ಣು ಚೀತಾ ಗುರುವಾರ ಅರಣ್ಯದಲ್ಲಿ ನಾಲ್ಕು ಆರೋಗ್ಯಕರ ಮರಿಗಳಿಗೆ ಜನ್ಮ ನೀಡಿದೆ. ಇದರೊಂದಿಗೆ ದೇಶದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಸಾಧನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೋಟ್ಸ್‌ವಾನಾದಿಂದ ತರಲಾದ ಚೀತಾಗಳ ಪೈಕಿ ಭಾರತದಲ್ಲಿ ಮರಿಗಳಿಗೆ ಜನ್ಮ ನೀಡಿದ ಮೊದಲ ಹೆಣ್ಣು ಚೀತಾ 'KOMG 3' ಆಗಿದೆ ಎಂದು ಅವರು ತಿಳಿಸಿದ್ದಾರೆ. ವಿಶೇಷವೆಂದರೆ, ಈ ಹೆಣ್ಣು ಚೀತಾ ಅರಣ್ಯದಲ್ಲಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕಳೆದ ನಂತರ ನೈಸರ್ಗಿಕ ವಾತಾವರಣದಲ್ಲಿ ಮರಿಗಳಿಗೆ ಜನ್ಮ ನೀಡಿದೆ.2022ರಲ್ಲಿ ಭಾರತದಲ್ಲಿ ಚೀತಾ ಪುನರ್ವಸತಿ ಕಾರ್ಯಕ್ರಮ ಆರಂಭವಾದ ಬಳಿಕ ಅರಣ್ಯ ಪ್ರದೇಶದಲ್ಲಿ ಚೀತಾ ಮರಿಗಳು ಜನಿಸಿರುವ ಎರಡನೇ ದಾಖಲಿತ ಘಟನೆ ಇದಾಗಿದೆ. ಇದಕ್ಕೂ ಮೊದಲು ಸಹ ಇದೇ ಯೋಜನೆಯಡಿ ಅರಣ್ಯದಲ್ಲಿ ಮರಿಗಳು ಜನಿಸಿದ್ದವು. ನಾಲ್ಕು ಹೊಸ ಮರಿಗಳ ಜನನದ ನಂತರ ಭಾರತದಲ್ಲಿ ಚೀತಾಗಳ ಒಟ್ಟು ಸಂಖ್ಯೆ 62ಕ್ಕೆ ತಲುಪಿದ್ದು, ಇದರಲ್ಲಿ 43 ಚೀತಾಗಳು ಭಾರತದಲ್ಲಿಯೇ ಜನಿಸಿವೆ ಎಂದು ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ. ಚೀತಾ ಸಂರಕ್ಷಣಾ ಯೋಜನೆ ಹಾಗೂ ದೇಶದಲ್ಲಿ ಚೀತಾಗಳ ಶಾಶ್ವತ ಸಂತತಿಯನ್ನು ಬೆಳೆಸುವ ಪ್ರಯತ್ನಗಳಿಗೆ ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಅವರು ಬಣ್ಣಿಸಿದ್ದಾರೆ.ಪ್ರತಿಯೊಂದು ಹೊಸ ಜನನವೂ ವನ್ಯಜೀವಿ ಸಂರಕ್ಷಣೆಯ ಭರವಸೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿರುವ ಸಚಿವರು, ವನ್ಯಜೀವಿ ಸಂರಕ್ಷಣೆಗೆ ತಾಳ್ಮೆ, ನಿರಂತರ ಪ್ರಯತ್ನ ಮತ್ತು ಸಾಮೂಹಿಕ ಸಹಭಾಗಿತ್ವ ಅತ್ಯಗತ್ಯ ಎಂದು ಒತ್ತಿ ಹೇಳಿದ್ದಾರೆ.ಇದೇ ವೇಳೆ, ಚೀತಾ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿರುವ ಯೋಜನಾ ವ್ಯವಸ್ಥಾಪಕರು, ಪಶುವೈದ್ಯರು ಮತ್ತು ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿಯನ್ನು ಭೂಪೇಂದ್ರ ಯಾದವ್ ಶ್ಲಾಘಿಸಿದ್ದಾರೆ. ಇವರೆಲ್ಲರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯಿಂದಾಗಿ ಭಾರತದಲ್ಲಿ ಚೀತಾ ಸಂರಕ್ಷಣಾ ಪ್ರಯತ್ನಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಸುದ್ದಿಗಳು

ಭಾರತ-ಅಮೆರಿಕ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ಬಲ
ಚೆನ್ನೈ : ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ, ಅಮೆರಿಕ ನೌಕಾಪಡೆಯ ಪೂರೈಕೆ ಹಡಗು…
◷ 20/11/2026
ಪ್ರಗತಿ ಪರಿಶೀಲನಾ ಸಭೆ : ಅಗತ್ಯ ಸೂಚನೆಗಳನ್ನು ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ್
ಬೆಂಗಳೂರು: ಇಂದು ವಿಕಾಸಸೌಧದಲ್ಲಿ ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕ…
◷ 20/11/2026
ರಕ್ಷಣಾ ಉದ್ಯಮದ ಪ್ರತಿನಿಧಿಗಳನ್ನು ಭೇಟಿಯಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್
ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಅವರು ತಮ್ಮ ಚೆಕ್ ಗಣರಾಜ್ಯದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಅಲ್ಲಿನ ರಕ್ಷಣಾ…
◷ 20/11/2026
ಭಕ್ತ ಕನಕದಾಸರ ಜಯಂತಿ : ಅಗತ್ಯ ಸಿದ್ದತೆಗೆ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೂಚನೆ
ಬಳ್ಳಾರಿ : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಕೇಂದ್ರದಲ್ಲಿ ನ. 27 ರಂದು ಸಂತ ಶ್…
◷ 19/11/2026
