ರಕ್ಷಣಾ ಉದ್ಯಮದ ಪ್ರತಿನಿಧಿಗಳನ್ನು ಭೇಟಿಯಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್

ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್ ಅವರು ತಮ್ಮ ಚೆಕ್ ಗಣರಾಜ್ಯದ ಅಧಿಕೃತ ಭೇಟಿಯ ಸಂದರ್ಭದಲ್ಲಿ ಅಲ್ಲಿನ ರಕ್ಷಣಾ ಉದ್ಯಮದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಎರಡೂ ದೇಶಗಳ ರಕ್ಷಣಾ ಉದ್ಯಮಗಳ ನಡುವಿನ ಪರಸ್ಪರ ಬಾಂಧವ್ಯವನ್ನು ಬಲಪಡಿಸುವುದು ಹಾಗೂ ರಕ್ಷಣಾ ಕೈಗಾರಿಕಾ ಸಹಕಾರವನ್ನು ವಿಸ್ತರಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು.ಈ ಸಭೆಯಲ್ಲಿ ಅಂತರ್-ಸರ್ಕಾರಿ ಸಹಕಾರ ಸಂಸ್ಥೆಯ (AMOS) ಉಪ ಮಹಾನಿರ್ದೇಶಕರು, ಜೆಕ್ ಗಣರಾಜ್ಯದ ರಕ್ಷಣಾ ಮತ್ತು ಭದ್ರತಾ ಉದ್ಯಮ ಸಂಘದ (AOBP) ಉಪಾಧ್ಯಕ್ಷರು ಹಾಗೂ ಚೆಕ್ ರಕ್ಷಣಾ ಉದ್ಯಮದ ಪ್ರತಿನಿಧಿಗಳು ಭಾಗವಹಿಸಿದ್ದರು.ಈ ಭೇಟಿಯ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಭಾರತೀಯ ಸೇನೆ, "ಸೇನಾಧ್ಯಕ್ಷ ಜನರಲ್ ಧೀರಜ್ ಸೇಠ್ ಅವರು ಚೆಕ್ ಗಣರಾಜ್ಯದ ಅಧಿಕೃತ ಭೇಟಿಯ ವೇಳೆ AMOS, AOBP ಉಪಾಧ್ಯಕ್ಷರು ಮತ್ತು ಚೆಕ್ ರಕ್ಷಣಾ ಉದ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಈ ಮಾತುಕತೆಯು ರಕ್ಷಣಾ ಕೈಗಾರಿಕಾ ಸಾಮರ್ಥ್ಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲು, ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಭಾರತ-ಚೆಕ್ ಗಣರಾಜ್ಯದ ನಡುವೆ ಉದ್ಯಮ ಮಟ್ಟದ ಸಂಬಂಧಗಳನ್ನು ಗಟ್ಟಿಗೊಳಿಸಲು ಉತ್ತಮ ಅವಕಾಶ ಒದಗಿಸಿತು" ಎಂದು ತಿಳಿಸಿದೆ. ಅಲ್ಲದೆ, ಈ ಭೇಟಿಗಳು ಭಾರತ-ಚೆಕ್ ರಕ್ಷಣಾ ಸಹಕಾರವನ್ನು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿವೆ ಎಂದು ಸೇನೆ ಹೇಳಿದೆ.ಇದಕ್ಕೂ ಮುನ್ನ, ಗುರುವಾರದಂದು ಜನರಲ್ ಸೇಠ್ ಅವರು ಚೆಕ್ ಗಣರಾಜ್ಯದ ಉಪ ವಿದೇಶಾಂಗ ಸಚಿವೆ ಮೇರಿ ಚತಾರ್ದೋವಾ ಅವರನ್ನು ಭೇಟಿಯಾದರು. ಕ್ ಗಣರಾಜ್ಯದಲ್ಲಿರುವ ಭಾರತದ ರಾಯಭಾರಿ ರವೀಶ್ ಕುಮಾರ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.ತಮ್ಮ ಪ್ರವಾಸದ ಭಾಗವಾಗಿ ಜನರಲ್ ಸೇಠ್ ಅವರು ಪ್ರಾಗ್ನಲ್ಲಿರುವ ಚೆಕ್ ಸಶಸ್ತ್ರ ಪಡೆಗಳ 'ಜನರಲ್ ಸ್ಟಾಫ್ ಪ್ರಧಾನ ಕಚೇರಿ'ಗೂ ಭೇಟಿ ನೀಡಿದರು. ಅಲ್ಲಿ ನಡೆದ ಔಪಚಾರಿಕ ಸಮಾರಂಭದಲ್ಲಿ, ದೇಶದ ಸೇವೆಗಾಗಿ ತಮ್ಮ ಪ್ರಾಣ ಅರ್ಪಿಸಿದ ವೀರ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು.
ಸಂಬಂಧಿತ ಸುದ್ದಿಗಳು

ಭಾರತ-ಅಮೆರಿಕ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ಬಲ
ಚೆನ್ನೈ : ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಸಹಕಾರಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ, ಅಮೆರಿಕ ನೌಕಾಪಡೆಯ ಪೂರೈಕೆ ಹಡಗು…
◷ 20/11/2026
ಪ್ರಗತಿ ಪರಿಶೀಲನಾ ಸಭೆ : ಅಗತ್ಯ ಸೂಚನೆಗಳನ್ನು ನೀಡಿದ ಡಿಸಿಎಂ ಡಾ.ಜಿ.ಪರಮೇಶ್ವರ್
ಬೆಂಗಳೂರು: ಇಂದು ವಿಕಾಸಸೌಧದಲ್ಲಿ ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾಧಿಕ…
◷ 20/11/2026
ಭಾರತದಲ್ಲಿ ಚೀತಾ ಸಂರಕ್ಷಣೆಗೆ ಮತ್ತಷ್ಟು ಬಲ : 4 ಹೊಸ ಮರಿಗಳ ಜನನ, ಒಟ್ಟು ಸಂಖ್ಯೆ 62ಕ್ಕೆ ಏರಿಕೆ
ನವದೆಹಲಿ: ಭಾರತದ ಚೀತಾ ಸಂರಕ್ಷಣಾ ಯೋಜನೆಗೆ (Project Cheetah) ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ. ಬೋಟ್ಸ್ವಾನಾದಿಂದ ತರಲಾಗಿದ…
◷ 20/11/2026
ಭಕ್ತ ಕನಕದಾಸರ ಜಯಂತಿ : ಅಗತ್ಯ ಸಿದ್ದತೆಗೆ ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ ಸೂಚನೆ
ಬಳ್ಳಾರಿ : ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ಕೇಂದ್ರದಲ್ಲಿ ನ. 27 ರಂದು ಸಂತ ಶ್…
◷ 19/11/2026
