ಬೆಳೆಹಾನಿಗೆ ಸೂಕ್ತ ಪರಿಹಾರ ಕೊಡುವಂತ ಬುದ್ಧಿ ಕೊಡಮ್ಮ : ಹಾಸನಾಂಬೆಯಲ್ಲಿ ಬೇಡಿಕೊಂಡ ರೈತರು

ಹಾಸನ : ಹಾಸನಾಂಬೆ ದರ್ಶನಕ್ಕೆ ಭಕ್ತ ಮಹಾಸಾಗರವೇ ಹರಿದುಬಂದಿದೆ. ಇಂದು ಹಾಸನಾಂಬೆ ಮುಖ್ಯದ್ವಾರದಲ್ಲಿ ನೂರಾರು ರೈತರು ವಿನೂತನ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಬೆಳೆದ ಬೆಳೆಯನ್ನೇ ತಲೆಯಮೇಲೆ ಬುಟ್ಟಿಯಲ್ಲಿಟ್ಟುಕೊಂಡು ಹಾಸನಾಂಬ ದೇವಿಗೆ ನೈವೇದ್ಯ ತಂದ ರೈತರು ವಿಶೇಷ ಪತ್ರ ದೇವಿಯ ಮುಂದೆ ಇಟ್ಟು ಬೇಡಿದರು.ಕಳಸ, ಬುಟ್ಟಿಯಲ್ಲಿ ಬೆಳೆದ ಬೆಳೆ ಹೊತ್ತು ಬಂದ ನೂರಾರು ರೈತರು ದೇವಿಗೆ ವಿಶೇಷವಾಗಿ ಬರೆದು ತಂದಿದ್ದ ಪತ್ರ ಸಮರ್ಪಿಸಿದರು. ಕಾಲ ಕಾಲಕ್ಕೆ ಮಳೆ ಬೀಳುವಂತೆ ಮಾಡಮ್ಮ, ಉತ್ತಮ ಬೀಜ, ಗೊಬ್ಬರ ಸಿಗುವಂತೆ ಮಾಡಮ್ಮ, ಬಳಿಕ ಈ ಸರ್ಕಾರಕ್ಕೆ ಬೆಳೆಹಾನಿಗೆ ಸೂಕ್ತ ಪರಿಹಾರ ಕೊಡುವಂತಹ ಬುದ್ಧಿ ಕೊಡಮ್ಮ ಹಾಸನಾಂಬೆಯಲ್ಲಿ ಸಂಗ್ರಹವಾದ ಹಣವನ್ನು ರೈತರಿಗೆ ಪರಿಹಾರವಾಗಿ ಕೊಡುವಂತೆ ಮಾಡಮ್ಮ, ಹಾಸನ ಅಧಿಕಾರಿಗಳು ಪಡೆಯುವುದು ನಿಲ್ಲಿಸುವಂತೆ ಮಾಡಮ್ಮ ಎಂದು ಬೇಡಿದರು. ಈ ವೇಳೆ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಸುದ್ದಿಗಳು

ಜೀವ ವೈವಿಧ್ಯವನ್ನು ಉಳಿಸಲು ಉರಗ ಅತ್ಯವಶ್ಯ: ಮ.ನ. ಪ್ರಸನ್ನ ಕುಮಾರ್ ಹೇಳಿಕೆ
ಮದ್ದೂರು : ಉರಗಗಳು ಭೂಮಿಯ ಮೇಲಿನ ಪ್ರಮುಖ ಜೀವಿಗಳಲ್ಲಿ ಒಂದಾಗಿದ್ದು ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಮತ್ತು ಜೀವ ವೈವಿಧ್ಯ…
◷ 06/11/2026
ಬೋಳುಗುಡ್ಡ ಕ್ಯಾಂಪ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಗುಂಡ್ಲುಪೇಟೆ : ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬೋಳುಗುಡ್ಡ ಕ್ಯಾಂಪ್ಗ…
◷ 06/11/2026
ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ತಪ್ಪಿದೆ : ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ
ಕೊಪ್ಪಳ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ತಪ್ಪಿದ್ದು, ಹಣಕಾಸು ನಿರ್ವಹಣೆ ಮಾಡಲು ಸಾ…
◷ 06/11/2026
ರಾಹುಲ್ ಗಾಂಧಿಯಿಂದ ಅರಾಜಕತೆ ಸೃಷ್ಟಿಸಲು ಅನಗತ್ಯ ಯತ್ನ : ಗೌರವ್ ಭಾಟಿಯಾ ವಾಗ್ದಾಳಿ
ಮಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅನಗತ್ಯವಾಗಿ ಅರಾಜಕತೆ ಸೃಷ್ಟಿಸಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ಬ…
◷ 06/11/2026
