ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಈ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ವಿವಿಧ ಯೋಜನೆ / ಕಾರ್ಯಗಳಿಗೆ ಚಾಲನೆ ನೀಡಲು ನಿರ್ಧರಿಸಿದ್ದಾರೆ.‌ ಬಿಡಿಎ ಸ್ವಾಧೀನದ ಜಾಗಗಳಲ್ಲಿ ಮನೆಗಳ ಸಕ್ರಮ ಶುಲ್ಕದಲ್ಲಿ ಸರ್ಕಾರ ಭಾರೀ ಇಳಿಕೆ ಮಾಡಲಾಗಿದೆ. ಶುಲ್ಕದಲ್ಲಿ ಶೇ. 50ರಷ್ಟು ಭಾರೀ ರಿಯಾಯಿತಿ ನೀಡುವ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೈಗೊಂಡಿದ್ದಾರೆ. ಬಿಡಿಎ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಬಿಡಿಎ ರೂಪಿಸಿರುವ ಯೋಜನೆಗಳು ಯೋಜನೆಗಳು, ನೀಲ ನಕ್ಷೆ ಇವುಗಳ ಬಗ್ಗೆ ಬಿಡಿಎ ಕಚೇರಿಯಲ್ಲಿ ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸಮಗ್ರ ಪರಿಶೀಲನೆ ನಡೆಸಿ ಬಿಡಿಎ ಭೂಸ್ವಾಧೀನಕ್ಕೊಳಪಟ್ಟ ಜಾಗಗಳಲ್ಲಿ 12ವರ್ಷಗಳ ಹಿಂದೆ (10.07.2008ರ ಪೂರ್ವದಲ್ಲಿ) ನಿರ್ಮಿಸಲಾದ ಮನೆಗಳನ್ನು ಸಕ್ರಮಗೊಳಿಸಲು ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ನಿಯಮ38(ಡಿ) ಅಡಿ ಮನೆಗಳ ಸಕ್ರಮ ಅಕ್ರಮ ಮಾಡಿ ಸಕ್ರಮ ಶುಲ್ಕದಲ್ಲಿ ಶೇಕಡ 50ರಷ್ಟು ವಿನಾಯಿತಿ ನೀಡುವಂತೆ ಸೂಚಿಸುವ ಮೂಲಕ ನಾಗರಿಕರಿಗೆ ದೀಪಾವಳಿಯ ಕೊಡುಗೆ ನೀಡಿದ್ದಾರೆ ನಾಗರಿಕರಿಗೆ ಭರ್ಜರಿ ನೆಮ್ಮದಿ ನೀಡುವ ಸಲುವಾಗಿ ಮಾರ್ಗಸೂಚಿ ಮೌಲ್ಯದ ದರವನ್ನು ಗಣನೀಯವಾಗಿ ಇಳಿಕೆ ಮಾಡಿದ್ದಾರೆ.