ಹಾಸನ: ವರ್ಷಕ್ಕೊಮ್ಮೆ ದರ್ಶನ ಕುರುಣಿಸುವ ಹಾಸನದ ತಾಯಿ ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಇಂದು ಹನ್ನೊಂದನೇ ದಿನ. ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಉಳಿದ ದಿನಗಳಿಗಿಂತ ಇಂದು ಭಕ್ತರ ಸಂಖ್ಯೆ ಕೊಂಚ ಕಡಿಮೆಯಾಗಿದೆ. ನ.11ರ ನಂತರ ದೇವಾಲಯದ ಬಾಗಿಲು ಮುಚ್ಚಲಿದ್ದು, ಅಲ್ಲಿಯವರೆಗೂ ಸಾರ್ವಜನಿಕ ದರ್ಶನಕ್ಕೆ ಅನುಮತಿ ನೀಡಲಾಗಿದೆ.ಇಂದು ಜನರು ಕಡಿಮೆ ಇರುವುದರಿಂದ ಧರ್ಮ ದರ್ಶನದ ಸಾಲಿನಲ್ಲಿ ಭಕ್ತರು ಶೀಘ್ರ ದರ್ಶನ ಪಡೆಯುತ್ತಿದ್ದಾರೆ. 1000, 300 ರೂ. ವಿಶೇಷ ದರ್ಶನದ ಸಾಲುಗಳಿಗಿಂತ ಧರ್ಮ ದರ್ಶನದ ಸಾಲಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ದರ್ಶನ ಪಡೆಯುತ್ತಿದ್ದಾರೆ.ಇಂದು ಮಧ್ಯಾಹ್ನ 2 ಗಂಟೆಯವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶವಿತ್ತು, ಮಧ್ಯಾಹ್ನ . 3.30 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರಂತರ ದರ್ಶನ ಪಡೆಯಬಹುದಾಗಿದೆ. ಇಂದು ಕೂಡ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆಯಲಿದ್ದಾರೆ. ಈ ಬಾರಿ ದೇವಾಲಯಯದ ಗರ್ಭಗುಡಿ ಬಾಗಿಲುಗಳು ನ.11ಕ್ಕೆ ಮುಚ್ಚಲಿವೆ. ನ.10ರವರೆಗೂ ಜನಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.