ಪ್ರಧಾನಿ ಮೋದಿ 'ದಿಮಾಗಿ ನಕ್ಸಲ್' ಹೇಳಿಕೆಗೆ ತೇಜಸ್ವಿ ಯಾದವ್ ತಿರುಗೇಟು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ರಾಷ್ಟ್ರೀಯ ಜನತಾ ದಳದ (RJD) ನಾಯಕ ತೇಜಸ್ವಿ ಯಾದವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಭಾರೀ ವಾಗ್ದಾಳಿ ನಡೆಸಿದ್ದಾರೆ.ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, "ದೇಶದಿಂದ ನಿರುದ್ಯೋಗವನ್ನು ಏಕೆ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ? ನೀವು ಹಣದುಬ್ಬರವನ್ನು 4 ಪಟ್ಟು ಹೆಚ್ಚಿಸಿದ್ದೀರಿ. ಚೀನಾ ನಿರಂತರವಾಗಿ ನಮ್ಮ ದೇಶದೊಳಗೆ ನುಗ್ಗುತ್ತಲೇ ಇದೆ" ಎಂದು ಹರಿಹಾಯ್ದರು. "ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ಡಾಲರ್ ಬಲಗೊಳ್ಳುತ್ತಿದೆ. ಬಿಹಾರದಲ್ಲಿ ನೀವು ಏಕೆ ಕಾರ್ಖಾನೆಗಳನ್ನು ಸ್ಥಾಪಿಸಲಿಲ್ಲ? ಇವೆಲ್ಲದರ ಬಗ್ಗೆ ನೀವು ಗಮನ ಹರಿಸಿದ್ದರೆ, ಇಂದು ನೀವು ಯಾರನ್ನು 'ದಿಮಾಗಿ ನಕ್ಸಲ್' ಎಂದು ಕರೆಯುತ್ತಿದ್ದೀರೋ, ಅವರು ಇಂದು ನಿಮ್ಮನ್ನು ಪ್ರಶ್ನಿಸುತ್ತಿರಲಿಲ್ಲ" ಎಂದು ತೇಜಸ್ವಿ ಯಾದವ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಂಬಂಧಿತ ಸುದ್ದಿಗಳು

ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಕೊಡಲಿ : ಜಿಟಿಡಿ ಹೇಳಿಕೆ
ಹಾಸನ: ಹಾಸನಾಂಬೆ ರಾಜಕಾರಣಿಗಳಿಗೆ ಅಭಿವೃದ್ಧಿ ಬಗ್ಗೆ ಚರ್ಚಿಸುವ ಸದ್ಬುದ್ಧಿಯನ್ನು ಕೊಡಲಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇ…
◷ 09/11/2026
ಸಿಸಿಬಿ ಪೊಲೀಸ್ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಬೆಂಗಳೂರು : ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಕೃಪಾ ಆಳ್ವಾ ಹಾಜರಾದರು. ಇವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರು…
◷ 09/11/2026
ಭಾರತ-ಮ್ಯಾನ್ಮಾರ್ ಮೊದಲ ತ್ರಿ-ಸೇವಾ ವಿಪತ್ತು ತುರ್ತು ಪರಿಹಾರ ಅಭ್ಯಾಸ ‘ರಾಹತ್ ಮಿತ್ರ’ ಚೆನ್ನೈನಲ್ಲಿ ಯಶಸ್ವಿ ಸಮಾಪ್ತಿ
ಚೆನ್ನೈ : ಭಾರತ ಮತ್ತು ಮ್ಯಾನ್ಮಾರ್ ರಕ್ಷಣಾ ಪಡೆಗಳ ನಡುವೆ ಆಯೋಜಿಸಲಾದ ಮೊದಲ ದ್ವಿಪಕ್ಷೀಯ ತ್ರಿ-ಸೇವಾ ಮಾನವೀಯ ನೆರವು ಮತ್ತು ವಿಪತ್…
◷ 09/11/2026
ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಯದುವೀರ್
ಮೈಸೂರು : ಮೈಸೂರು–ಬೆಂಗಳೂರು ಹೆದ್ದಾರಿಯ ಮಣಿಪಾಲ್ ಆಸ್ಪತ್ರೆ ಸಮೀಪದ ಕೆಂಪೇಗೌಡ ವೃತ್ತದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ನಿರ್ಮಾಣ …
◷ 09/11/2026
