ಕುರಿಗಾಹಿಗಳ ಮೇಲಿನ ಶೂಟೌಟ್ ಪ್ರಕರಣ ,ಆರೋಪಿಗಳು ವಶಕ್ಕೆ : ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ

ಮೈಸೂರು : ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 06 ರಂದು ನಡೆದಿದ್ದ ಕುರಿಗಾಹಿಗಳ ಮೇಲಿನ ಶೂಟೌಟ್ ಪ್ರಕರಣದ ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಿಂದ ಹುಣಸೂರು ಭಾಗಕ್ಕೆ ಬಂದಿದ್ದ ಮೂರು ಕುರಿಗಾಹಿ ಕುಟುಂಬ ಬಂದಿತ್ತು. ನ.6 ರಂದು ಬೆಳಿಗ್ಗೆ 1 ಗಂಟೆ ಸುಮಾರಿಗೆ ಕುರಿ ಕಳ್ಳತನಕ್ಕೆ ಮೂವರು ಹೊಂಚು ಹಾಕುತ್ತಿದ್ದರು.ಮೂವರು ಅಪರಿಚರ ಪ್ರಶ್ನೆ ಮಾಡಿದಾಗ ಭೇಟೆಯಾಡುವುದಕ್ಕೆ ಬಂದಿದ್ದೇವೆ ಎಂದಿದ್ದರು. ಅವರನ್ನು ಕುರಿಗಾಹಿಗಳು ಹಿಡಿಯಲು ಹೋದ ವೇಳೆ. ಸಿಂಗಲ್ ಬ್ಯಾರಲ್ ಗನ್ ನಿಂದ ಶೂಟ್ ಮಾಡಿ ತಪ್ಪಿಸಿಕೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಡಿಎಸ್.ಪಿ ಹುಣಸೂರು ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿ ಮೊಬೈಲ್ ಹಾಗೂ ಬೈಕ್ ಸಿಕ್ಕಿತ್ತು. ಮಾಹಿತಿ ಆಧರಿಸಿ ಎಲ್ಲಾ ಆಯಾಮದಲ್ಲಿ ತನಿಖೆ ಕೈಗೊಂಡಿದ್ದೆವು.ಪ್ರಕರಣದ ಮೂರು ಆರೋಪಿಗಳ ವಶಕ್ಕೆ ಪಡೆಯಲಾಗಿದೆ. ಪ್ರಮೋದ್ (28) , ಶ್ಯಾಮಭೋಗನಹಳ್ಳಿ ಹುಣಸೂರು ತಾಲ್ಲೂಕು. ಸುದೀಪ ಸಿ.ವಿ ಚೌತಿ ಗ್ರಾಮ , ಪಿರಿಯಾಪಟ್ಟಣ ತಾಲ್ಲೂಕು, ದೇವರಾಜು ಹಿಂಡಗೂಡ್ಲು ಗ್ರಾಮ, ಹುಣಸೂರು ತಾಲ್ಲೂಕು ಆರೋಪಿಗಳು. ಕೃತ್ಯಕ್ಕೆ ಬಳಸಿದ ಗನ್ ರಾಮಕೃಷ್ಣ ಎಂಬವರ ಲೈಸೆನ್ಸ್ ಬಂದೂಕಾಗಿದ್ದು ಅವರನ್ನು ಸಹ ತನಿಖೆಗೆ ಒಳಪಡಿಸಲಾಗುವುದು. ಪ್ರಕರಣದ ಆರೋಪಿ ಪ್ರಮೋದ್ ಮೇಲೆ ಈ ಹಿಂದೆ ಮಾರಣಾಂತಿಕ ಹಲ್ಲೆ ಕೇಸ್ ದಾಖಲಾಗಿದೆ. ಮತ್ತೊಬ್ಬ ಆರೋಪಿ ಸುದೀಪ್ ಸುಲಿಗೆ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರಗಿದ್ದ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಎಂದರು.ನಂಜನಗೂಡು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿ ಇದು ಕೇರಳದ ಎರ್ನಾಕುಲಂ ನಲ್ಲಿ ದಾಖಲಾದ ಪ್ರಕರಣ. ಡಾನಿಷ್ ಎಂಬಾತ ಅಲೆಪ್ಪಿ ಊರಿನವನು.ಆತ ವಿದೇಶದಲ್ಲಿ ವ್ಯಾಸಂಗ ಮಾಡಿಕೊಂಡು ಬಂದಿದ್ದ.ಕಳೆದ ಎರಡು ವರ್ಷಗಳಿಂದ ನಂಜನಗೂಡಿನ ಬಳಿ ತೋಟ ಭೋಗ್ಯಕ್ಕೆ ತೆಗೆದುಕೊಂಡು ಬಾಳೆ ಹಣ್ಣು ವ್ಯಾಪಾರ ಮಾಡುತ್ತಿದ್ದ.ಕಳೆದ 6 ತಿಂಗಳಿಂದ ನಂಜನಗೂಡಿನಲ್ಲಿ ಮನೆ ಮಾಡಿದ್ದ. ಆತನ ಬಳಿ ಮಾದಕ ವಸ್ತು ಸಿಕ್ಕಿದೆ.ಬೆಂಗಳೂರಿನಿಂದ ಮಾದಕವಸ್ತು ತೆಗೆದುಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾನೆ. ಕೇರಳ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ. ಆತ ಕೇರಳದವನು.ಕೇರಳ ರಾಜ್ಯದ ಹಲವರು ನಮ್ಮಲ್ಲಿ ತೋಟ ಮಾಡಿಕೊಂಡಿದ್ದಾರೆ.ಈತ ಸಹ ಅದೇ ರೀತಿ ತೋಟ ಮಾಡಿ ಇಂತಹ ಕೆಲಸ ಮಾಡುತ್ತಿದ್ದ.ಈಗಾಗಲೇ ಆತ ಭೋಗ್ಯ ಮಾಡಿಕೊಂಡಿದ್ದ ತೋಟ ಮತ್ತು ಮನೆ ಪರಿಶೀಲನೆ ಮಾಡಿದ್ದೇವೆ. ಏನು ಪತ್ತೆಯಾಗಿಲ್ಲ.ಎಲ್ಲ ರೀತಿಯ ತನಿಖೆಯಾಗುತ್ತಿದೆ.800 ಎಂಎಲ್ ಆಷೀಷ್ ಆಯಿಲ್, 7.78 ಎಂಡಿಎಂಎ ಸಿಕ್ಕಿದೆ. ಕಳೆದ 6 ತಿಂಗಳಿಂದ ಆತ ಯಾರ್ಯಾರ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಬಾಳೆಗೊನೆಯಲ್ಲಿ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.ಮುಂದಿನ ದಿನಗಳಲ್ಲಿ ಆತನನ್ನು ನಾವು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತೇವೆ.ಆತ ತೋಟದಲ್ಲಿ ಗಾಂಜಾ ಬೆಳೆದಿಲ್ಲ ಅಥವಾ ಇಲ್ಲಿ ಶೇಖರಣೆ ಮಾಡಿಲ್ಲ ಎಂದರು.
ಸಂಬಂಧಿತ ಸುದ್ದಿಗಳು

ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ ನನ್ನ ಭಾಷಣ ಕಟ್! : ಕೃಷ್ಣಬೈರೇಗೌಡ
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ ಎಂದು ತಮ್ಮ ಅಸಮಾಧಾನವನ್ನು ಸಚಿವ ಕೃ…
◷ 12/11/2026
1000 ಕೋಟಿಯತ್ತ ದಾಪುಗಾಲಿಟ್ಟ `ರಾಮಾಯಣ ಭಾಗ1’
ಮುಂಬೈ : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ನಿತೇಶ್ ತಿವಾರಿ ನಿರ್ದೇಶನದ `ರಾಮಾಯಣ’ ಬಾಕ್ಸ್ ಆಫೀಸ್ ಭರ್ಜರಿ…
◷ 12/11/2026
ಹೊಗೆ ಉಗುಳುತ್ತಿರುವ ಕೆಎಸ್ಆರ್ಟಿಸಿ ಬಸ್ : ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಅಧಿಕಾರಿಗಳು?
ಗುಂಡ್ಲುಪೇಟೆ : ವಾಯುಮಾಲಿನ್ಯ ತಡೆಗಟ್ಟಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗು…
◷ 12/11/2026
ನ.15ರಂದು ರಾಜ್ಯದಲ್ಲಿ 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆ ಪೂರ್ವಭಾವಿ ಪರೀಕ್ಷೆ: ಕಟ್ಟುನಿಟ್ಟಿನ ಸೂಚನೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ನವೆಂಬರ್ 15ರಂದು ರಾಜ್ಯದಲ್ಲಿ 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ನಡೆಯಲಿರುವ ಪೂರ್ವಭಾವಿ ಪರೀಕ್ಷೆಗೆ ಸಂಬಂಧಿ…
◷ 12/11/2026
