ಬೆಂಗಳೂರು: ಇಲ್ಲಿನ  ಜಿಗಣಿ ಬಳಿಯ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಈ ವೇಳೆ ಯೋಗ ಕ್ಷೇತ್ರಕ್ಕೆ ಕರ್ನಾಟಕದವರ ಕೊಡುಗೆ ಅಪಾರ ಎಂದು ಬಣ್ಣಿಸಿರುವ ಅವರು  ವರನಟ ಡಾ. ರಾಜ್‌ಕುಮಾರ್ ಅವರು ಕಲೆಯ ಜೊತೆ ಯೋಗಕ್ಕೂ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.ಯೋಗದ ಮಹತ್ವದ ಕುರಿತು ಮಾತನಾಡಿದ ಅವರು  ಡಾ. ರಾಜ್‌ಕುಮಾರ್ ಅವರ ಶಿಸ್ತಿನ ಜೀವನಶೈಲಿಯನ್ನು ಉಲ್ಲೇಖಿಸಿ  ‘ಯೋಗಕ್ಕೆ ಕರ್ನಾಟಕದವರ ಕೊಡುಗೆ ದೊಡ್ಡದಿದೆ. ವರ ನಟ ಡಾ. ರಾಜ್​ಕುಮಾರ್ ಸಹ ಯೋಗಾಭ್ಯಾಸ ಮಾಡುತ್ತಿದ್ದರು’ ಎಂದು ಮೋದಿ ಶ್ಲಾಘಿಸಿದರು.ಅಣ್ಣಾವ್ರು ತೆರೆಯ ಮೇಲೆ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ಅತ್ಯಂತ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಂಡಿದ್ದರು.  ಯೋಗದ ಮೇಲಿನ ಅವರ ನಿರಂತರ ಒಲವು ಹಾಗೂ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.ಹೆಚ್.ವಿ. ಶೇಷಾದ್ರಿ ಅವರನ್ನು ನೆನಪಿಸಿಕೊಂಡಾಗ ಮೊದಲು ನೆನಪಾಗುವುದು ಅವರ ಸರಳ ಸ್ವಭಾವ. ದೊಡ್ಡ ವ್ಯಕ್ತಿತ್ವ ಮತ್ತು ಅಪಾರ ಅನುಭವ ಹೊಂದಿದ್ದರೂ ಅವರ ನಡೆನುಡಿಯಲ್ಲಿ ವಿನಯವಿತ್ತು. ತಾವು ಹಿಂದೆಯೇ ಉಳಿದು ಇತರರನ್ನು ಮುಂದೆ ತರುವುದು, ಜನರನ್ನು ಒಗ್ಗೂಡಿಸಿ ದೇಶಕ್ಕಾಗಿ ಅವರನ್ನು ಸಿದ್ಧಪಡಿಸುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು. ಇದು ಅವರ ಜೀವನದ ಪ್ರಮುಖ ಕಾರ್ಯವಾಗಿತ್ತು ಎಂದು ಮೋದಿ ಸ್ಮರಿಸಿದ್ದಾರೆ. ಮಗುವಿನ ಆರೈಕೆಗಾಗಿ ತಾಯಿ ಇಡೀ ರಾತ್ರಿ ನಿದ್ರಿಸದೆ ಮಗುವಿನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ಯಾವುದೇ ಸ್ವಾರ್ಥವಿಲ್ಲದೆ ದುಡಿಯುತ್ತಾಳೆ. ಇದೇ ಭಾವನೆಯನ್ನು ಸಮಾಜದ ಕಡೆಗೂ ವಿಸ್ತರಿಸಿದರೆ ಸಮಾಜಕ್ಕೆ ಅಪಾರ ಒಳಿತಾಗುತ್ತದೆ ಎಂದು ಶೇಷಾದ್ರಿ ಅವರು ಆಗಾಗ್ಗೆ ಉದಾಹರಣೆ ನೀಡುತ್ತಿದ್ದರು ಎಂದಿದ್ದಾರೆ. ಹೆಚ್.ವಿ. ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನವನ್ನು ಹಲವು ವರ್ಷಗಳ ಕಾಲ ತಾವು ಪಡೆದಿದ್ದಾಗಿ ತಿಳಿಸಿದ ಪ್ರಧಾನಿ ಮೋದಿ, ಅವರೊಂದಿಗೆ ಕಳೆದ ಕ್ಷಣಗಳು ಮತ್ತು ಅವರು ಹೇಳುತ್ತಿದ್ದ ಮಾತುಗಳು ಇಂದಿಗೂ ತಮ್ಮ ಪಾಲಿಗೆ ಅಮೂಲ್ಯ ನೆನಪು ಎಂದು ತಿಳಿಸಿದ್ದಾರೆ. ಯೋಗ ಮಹತ್ವ ಪಡೆದುಕೊಂಡಿದೆ. ಕ್ರೀಡೆಗಳ ಪಟ್ಟಿಗೆ ಯೋಗವನ್ನೂ ಸೇರಿಸಲಾಗಿದೆ ಎಂದು ಅವರು ನಾನು ಎಕ್ಸಫರ್ಟ್‌ ಯೋಗಪಟುವಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.