ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯ ಉದ್ಘಾಟಿಸಿದ ನಮೋ!

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದು ನಗರದಲ್ಲಿ ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಬಳಿಕ ಮಾತನಾಡಿದ ಅವರು ದೇಶದ ವೈಜ್ಞಾನಿಕ ಪ್ರಯಾಣದಲ್ಲಿ ಮೈಸೂರಿನ ಈ ತಾರಾಲಯ ದೊಡ್ಡ ಕೊಡುಗೆ ಆಗಿದೆ. ಅಭೂತಪೂರ್ವವಾದ ಅನುಭವವನ್ನು ಇದು ನೀಡುತ್ತದೆ. ಮತ್ತೊಮ್ಮೆ ಮೈಸೂರಿಗೆ ಆಗಮಿಸಿ ನಿಮ್ಮೆಲ್ಲರ ನಡುವೆ ಇರಲು ನನಗೆ ತುಂಬಾ ಸಂತೋಷವಾಗುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ವಿವೇಕ ಸ್ಮಾರಕ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ನಿಮ್ಮೆಲ್ಲರ ಎದುರು ಬಂದಿದ್ದೆ. ಇಂದು ತಾರಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸಲುವಾಗಿ ನಾವೆಲ್ಲರೂ ಇಲ್ಲಿ ಒಂದಾಗಿ ಸೇರಿದ್ದೇವೆ ಎಂದರು. ಈ ಎರಡೂ ಸಂದರ್ಭಗಳು ಭಾರತದ ಸಂಸ್ಕಾರ ಮತ್ತು ನಮ್ಮ ಸಂಸ್ಕೃತಿಯ ಕುರಿತು ಅತ್ಯಂತ ಆಳವಾದ ಸಂದೇಶವನ್ನು ಸಾರುತ್ತವೆ. ವಿವೇಕಾನಂದರ ಸ್ಮಾರಕವು ನಮ್ಮೊಳಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಅದೇ ರೀತಿ, ಕಾಸ್ಮಾಸ್ ಪ್ಲಾನೆಟೇರಿಯಂಗೆ ಭೇಟಿ ನೀಡಿದಾಗ ನಮ್ಮ ದೃಷ್ಟಿ ಆಕಾಶದತ್ತ ಹರಿಯುತ್ತದೆ. ವಿಶಾಲವಾದ ಬ್ರಹ್ಮಾಂಡವನ್ನು ಅರಿಯಲು, ಅದರ ರಹಸ್ಯಗಳನ್ನು ತಿಳಿದುಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.ಇದು ಭಾರತದಲ್ಲಿ ಆಧ್ಯಾತ್ಮಿಕತೆ ಮತ್ತು ವಿಜ್ಞಾನದ ಪರಂಪರೆಗಳು ಯಾವಾಗಲೂ ಜೊತೆಜೊತೆಯಾಗಿ ಬೆಳೆದು ಬಂದಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.ನಮ್ಮ ಪೂರ್ವಜರು ಆಕಾಶವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ನಕ್ಷತ್ರಗಳು ಮತ್ತು ಗ್ರಹಗಳ ಚಲನೆಯನ್ನು ಅರ್ಥಮಾಡಿಕೊಂಡಿದ್ದರು. ಪಂಚಾಂಗಗಳನ್ನು ರಚಿಸಿದ್ದರು. ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಸಂಭವಿಸುವ ಸಮಯವನ್ನೂ ನಿಖರವಾಗಿ ಲೆಕ್ಕಾಚಾರ ಮಾಡುತ್ತಿದ್ದರು. ಭಾರತದಲ್ಲಿ ಆರ್ಯಭಟ, ಭಾಸ್ಕರಾಚಾರ್ಯರಂತಹ ಅನೇಕ ಮಹಾನ್ ಖಗೋಳ ವಿಜ್ಞಾನಿಗಳು ಜನ್ಮತಾಳಿದ್ದಾರೆ.ಇಂದು ನಮ್ಮ ಬಳಿ ಇರುವಂತಹ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನಗಳು ಅಂದಿನ ಕಾಲದಲ್ಲಿ ಲಭ್ಯವಿರಲಿಲ್ಲ. ಆದರೂ ನಮ್ಮ ಪೂರ್ವಜರು ಅನೇಕ ಮಹತ್ವದ ಸಂಶೋಧನೆಗಳನ್ನು ನಡೆಸಿ, ಅತ್ಯಂತ ಕಠಿಣವಾದ ಗಣಿತದ ಲೆಕ್ಕಾಚಾರಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದರು.ಮೈಸೂರಿನಲ್ಲಿ ಜ್ಞಾನಾನ್ವೇಷಣೆಗೆ ಪ್ರೋತ್ಸಾಹ ನೀಡುವಂತಹ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಪರಂಪರೆ ಬಹಳ ಹಿಂದಿನಿಂದಲೂ ಇದೆ.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿಯೇ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸ್ಥಾಪನೆ ಆಗುವುದರಲ್ಲೂ ಒಡೆಯರ್ ಕುಟುಂಬವು ಮಹತ್ವದ ಪಾತ್ರ ವಹಿಸಿತ್ತು.ಈ ಶಿಕ್ಷಣ ಸಂಸ್ಥೆಗಳು ಹಲವು ತಲೆಮಾರುಗಳ ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಹಾಗೂ ಹೊಸ ಸಾಧನೆಗಳನ್ನು ಮಾಡಲು ಅಮೂಲ್ಯವಾದ ಅವಕಾಶಗಳನ್ನು ಒದಗಿಸಿವೆ ಎಂದರು. ಇಂದು ಭಾರತವು ವಿಜ್ಞಾನ ಕ್ಷೇತ್ರದಲ್ಲಿ ಒಂದರ ನಂತರ ಮತ್ತೊಂದು ಹೊಸ ಸಾಧನೆಗಳನ್ನು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅತ್ಯಾಧುನಿಕ ಕಾಸ್ಮಾಸ್ ಪ್ಲಾನೆಟೇರಿಯಂ ಮೂಲಕ ಮೈಸೂರೂ ಸಹ ಭಾರತದ ವೈಜ್ಞಾನಿಕ ಪಯಣದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸುತ್ತಿದೆ. ಇಂದು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ತಾರಾಲಯವನ್ನು ಯುವಜನತೆ ಮತ್ತು ದೇಶದ ಜನತೆಗೆ ಸಮರ್ಪಿಸಲಾಗುತ್ತಿದೆ. ಇದು ಭಾರತದ ಮೊದಲ ಎಲ್ಇಡಿ ಡೋಮ್ ಪ್ಲಾನೆಟೇರಿಯಂ ಎಂಬುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಇದೀಗ ನನಗೂ ಈ ಪ್ಲಾನೆಟೇರಿಯಂನಲ್ಲಿ ಪ್ರದರ್ಶನವನ್ನು ವೀಕ್ಷಿಸುವ ಸೌಭಾಗ್ಯ ದೊರೆಯಿತು. ಆ ಅನುಭವ ನಿಜಕ್ಕೂ ಅತ್ಯಂತ ಅದ್ಭುತವಾಗಿತ್ತು ಎಂದು ತಿಳಿಸಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಪಾಲರಾದ ಸುಧಾ ಯಾದವ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಬಸವರಾಜ್ ರಾಯರೆಡ್ಡಿ, ಸಂಸದ ಯದುವೀರ್ ಒಡೆಯರ್ ಪಾಲ್ಗೊಂಡರು. ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣೆ ಬಳಿಕ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಗಳು ಆತ್ಮೀಯವಾಗಿ ಮಾತುಕತೆ ನಡೆಸಿ ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಹಾಗೂ ಭವಿಷ್ಯದ ಆವಿಷ್ಕಾರಗಳ ಕುರಿತು ವಿದ್ಯಾರ್ಥಿಗಳ ಆಸಕ್ತಿ ಮತ್ತು ಕುತೂಹಲವನ್ನು ಆಲಿಸಿದರು.
ಸಂಬಂಧಿತ ಸುದ್ದಿಗಳು

ಮೇಕೆದಾಟು ಯೋಜನೆಗೆ ಅನುಮತಿ ಕೊಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ : ಪ್ರಧಾನಿ ಮುಂದೆ ರಾಜ್ಯದ ಬೇಡಿಕೆಗಳನ್ನಿಟ್ಟ ಸಿಎಂ ಡಿ. ಕೆ. ಶಿವಕುಮಾರ್
ಮೈಸೂರು : "ಮೇಕೆದಾಟು ಜಲಾಶಯ ಯೋಜನೆಗೆ ಅಗತ್ಯ ಅನುಮತಿ ನೀಡಬೇಕು. ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿ…
◷ 13/11/2026
ಮನೆ ಮನೆಗೆ ಗ್ಯಾರಂಟಿ ಸಮೀಕ್ಷೆ : ಮೃತಪಟ್ಟವರ ಹೆಸರಿನಲ್ಲಿಯೂ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಪರಿಶೀಲನೆ
ಮೈಸೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿದೆಯೋ ಇಲ್ಲವೇ ಎಂಬುದನ್ನು ಖಚ…
◷ 13/11/2026
ಪಿಎಂ ಸ್ವಾಗತಿಸಿದ ಸಿಎಂ
ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣ…
◷ 13/11/2026
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ
ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2025ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರ…
◷ 13/11/2026
