ಪಿಂಕ್ ಲೈನ್ ಮೆಟ್ರೋಗೆ ನಮೋ ಚಾಲನೆ : ಮೆಟ್ರೋದಲ್ಲಿ ಪಯಣ

ಬೆಂಗಳೂರು : ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದ್ದಾರೆ. ಎರಡು ಹಂತದಲ್ಲಿ ನಡೆಯುತ್ತಿರುವ ಕಾಳೇನ ಅಗ್ರಹಾರ ದಿಂದ ನಾಗಾವರ ಮೆಟ್ರೋ ಸೇವೆಯಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ತಾವರೆಕೆರೆ ಮೋಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದರು.ಪಿಂಕ್ ಲೈನ್ ಮೆಟ್ರೋಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಬಳಿಕ ನಮ್ಮ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಒಟ್ಟು 6 ಕೋಚ್‌ಗಳ ರೈಲಿನಲ್ಲಿ ಗಣ್ಯರ ಜೊತೆ ಮೋದಿ ಪ್ರಯಾಣ ಬೆಳೆಸಿದರು. ರಾಜ್ಯಪಾಲ ಡಾ. ಸುಧಾ ಯಾದವ್, ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್,ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಪ್ರಯಾಣ ಬೆಳೆಸಿದರು. ಪ್ರಧಾನಿ ಕಾರ್ಯಾಲದ ಅಧಿಕಾರಿಗಳು, ಸಿಬ್ಬಂದಿಗಳು, ರಾಜ್ಯ ಅಧಿಕಾರಿಗಳು ಇದೇ ಮೆಟ್ರೋ ರೈಲಿನಲ್ಲಿ ಮೋದಿ ಜೊತೆ ಪ್ರಯಾಣ ಬೆಳೆಸಿದ್ದಾರೆ. ತಾವರೆಕೆ ಮೆಟ್ರೋ ನಿಲ್ದಾಣದಿಂದ ಬಿಳೇಕಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೋದಿ ಪ್ರಯಾಣ ಬೆಳೆಸಿದರು. ಮೋದಿ ಜೊತೆ ನಾಲ್ವರು ಗಣ್ಯರು ಪ್ರಯಾಣ ಮಾಡಿದ್ದಾರೆ.
ಸಂಬಂಧಿತ ಸುದ್ದಿಗಳು

ಮೇಕೆದಾಟು ಯೋಜನೆಗೆ ಅನುಮತಿ ಕೊಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ : ಪ್ರಧಾನಿ ಮುಂದೆ ರಾಜ್ಯದ ಬೇಡಿಕೆಗಳನ್ನಿಟ್ಟ ಸಿಎಂ ಡಿ. ಕೆ. ಶಿವಕುಮಾರ್
ಮೈಸೂರು : "ಮೇಕೆದಾಟು ಜಲಾಶಯ ಯೋಜನೆಗೆ ಅಗತ್ಯ ಅನುಮತಿ ನೀಡಬೇಕು. ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿ…
◷ 13/11/2026
ಮನೆ ಮನೆಗೆ ಗ್ಯಾರಂಟಿ ಸಮೀಕ್ಷೆ : ಮೃತಪಟ್ಟವರ ಹೆಸರಿನಲ್ಲಿಯೂ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಪರಿಶೀಲನೆ
ಮೈಸೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿದೆಯೋ ಇಲ್ಲವೇ ಎಂಬುದನ್ನು ಖಚ…
◷ 13/11/2026
ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯ ಉದ್ಘಾಟಿಸಿದ ನಮೋ!
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದು ನಗರದಲ್ಲಿ ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯವನ್ನು ಉದ್ಘಾಟಿಸಿದರು.ಬಳಿಕ ಮಾ…
◷ 13/11/2026
ಪಿಎಂ ಸ್ವಾಗತಿಸಿದ ಸಿಎಂ
ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣ…
◷ 13/11/2026
