ಮೈಸೂರು :  ಮೃಗಾಲಯದ ಪ್ರಾಣಿಗಳ ಆರೈಕೆ ಮತ್ತು ಪೋಷಣೆಗೆ ಅನುಕೂಲವಾಗುವಂತೆ, ಪ್ರಾಣಿಗಳಿಗೆ ಆಹಾರ ವಿತರಣೆಗಾಗಿ ಅದ್ವೈತ್ ಹೋಂಡಾ, ಮೈಸೂರು ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನೀಡಲಾದ ವಾಹನವನ್ನು ಸಂಸದ ಯದುವೀರ್‌ ಅವರು ಉದ್ಘಾಟಿಸಿ ಸೇವೆಗೆ ಸಮರ್ಪಿಸಿದರು.ವನ್ಯಜೀವಿಗಳ ಸಂರಕ್ಷಣೆ ಹಾಗೂ ಪ್ರಾಣಿ ಕಲ್ಯಾಣದ ಉದ್ದೇಶದಿಂದ ಸಂಸ್ಥೆಯು ತೋರಿರುವ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ ಎಂದು ಸಂಸದರು ಇದೇ ವೇಳೆ ತಿಳಿಸಿದರು. ಈ ಸಂದರ್ಭ ಶಾಸಕ ಟಿ.ಎಸ್.ಶ್ರೀವತ್ಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.