ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ : "ಯೋಗವು ಭಾರತವನ್ನು ಅರಿಯುವ ಹೆಬ್ಬಾಗಿಲು"

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿನ ‘ಪ್ರಶಾಂತಿ ಕುಟೀರಂ’ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಸಂಸ್ಥೆಯ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಕರ್ನಾಟಕದ ನೆಲವು ಶತಮಾನಗಳಿಂದಲೂ ಯೋಗದ ಕೇಂದ್ರವಾಗಿದೆ. ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದ ಅನೇಕ ಆಚಾರ್ಯರು ಮತ್ತು ವಿದ್ವಾಂಸರು ಇಲ್ಲಿ ಜನ್ಮ ತಾಳಿದ್ದಾರೆ. ನನಗೂ ಇಲ್ಲಿ ಯೋಗದ ಅಸಾಧಾರಣ ಶಕ್ತಿಯನ್ನು ಅನುಭವಿಸುವ ಅವಕಾಶ ಸಿಕ್ಕಿದೆ" ಎಂದರು.ಸಮಗ್ರ ಆರೋಗ್ಯ ವ್ಯವಸ್ಥೆಗೆ ಮೆಚ್ಚುಗೆ:"ಪ್ರಶಾಂತಿ ಕುಟೀರಂನಲ್ಲಿ ಆರಂಭವಾದ ಈ ಪಯಣವು ಇಂದು ಯೋಗ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮತ್ತು ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದುನಿಂತಿದೆ. ಯೋಗದ ಜೊತೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಆಧುನಿಕ ವೈದ್ಯವಿಜ್ಞಾನವನ್ನು ಸಂಯೋಜಿಸಿ ಒಂದು ಸಮಗ್ರ ವೆಲ್‌ನೆಸ್ ವ್ಯವಸ್ಥೆಯನ್ನು (Wellness Ecosystem) ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒತ್ತಡ ನಿರ್ವಹಣೆ ಮತ್ತು ಜೀವನಶೈಲಿಯ ಕಾಯಿಲೆಗಳ ಕುರಿತು ಇಲ್ಲಿ ನಡೆದ ಸಂಶೋಧನೆಗಳು ವಿಶ್ವದಾದ್ಯಂತ ಜನರಿಗೆ ನೆರವಾಗಿವೆ" ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.ಎಚ್.ವಿ. ಶೇಷಾದ್ರಿ ಮತ್ತು ಡಾ. ರಾಜ್‌ಕುಮಾರ್ ಸ್ಮರಣೆ:ಈ ಸಂದರ್ಭದಲ್ಲಿ ಎಚ್.ವಿ. ಶೇಷಾದ್ರಿ ಅವರನ್ನು ಸ್ಮರಿಸಿದ ಮೋದಿ, "ಪ್ರಶಾಂತಿ ಕುಟೀರಂನ ಸುವರ್ಣ ಮಹೋತ್ಸವದ ಜೊತೆಗೆ ನಾವು ಎಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವವನ್ನೂ ಆಚರಿಸುತ್ತಿದ್ದೇವೆ. ‘ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ’ ಎಂಬ ಧ್ಯೇಯಕ್ಕಾಗಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. 'ನಾವು ಸಮಾಜವನ್ನು ನಮ್ಮ ಎರಡು ಕಣ್ಣುಗಳಿಂದ ನೋಡಿದಾಗ, ಸಮಾಜವೂ ನಮ್ಮನ್ನು ಲಕ್ಷಾಂತರ ಕಣ್ಣುಗಳಿಂದ ನೋಡುತ್ತದೆ' ಎಂದು ಅವರು ಸದಾ ಹೇಳುತ್ತಿದ್ದರು" ಎಂದರು.ಇದೇ ವೇಳೆ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರನ್ನೂ ಪ್ರಧಾನಿ ಸ್ಮರಿಸಿದರು. "ಕಲಾ ಲೋಕ ಮತ್ತು ಯೋಗ ಸಾಧನೆ ಎರಡಕ್ಕೂ ಅಪಾರ ಕೊಡುಗೆ ನೀಡಿದ ಕರ್ನಾಟಕದ ಅನೇಕ ಯೋಗ ಪ್ರೇಮಿಗಳಲ್ಲಿ ಡಾ. ರಾಜ್‌ಕುಮಾರ್ ಕೂಡ ಒಬ್ಬರು" ಎಂದು ಹೇಳಿದರು.ಸ್ಪರ್ಧಾತ್ಮಕ ಕ್ರೀಡೆಯಾಗಿ ಯೋಗಾಸನ:ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಪ್ರಧಾನಿ, "ದೇಶವು ಗುಲಾಮಗಿರಿಯಲ್ಲಿದ್ದಾಗ ಸ್ವಾಮಿ ವಿವೇಕಾನಂದರಂತಹ ರಾಷ್ಟ್ರ ಋಷಿಗಳು ಭಾರತದ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ ಯುವಕರಿಗೆ ಯೋಗದ ಮಾರ್ಗ ತೋರಿಸಿದರು. ಕಳೆದ 12 ವರ್ಷಗಳಲ್ಲಿ ಭಾರತವು ತನ್ನ ಸಂಸ್ಕೃತಿ ಮತ್ತು ಜ್ಞಾನ-ವಿಜ್ಞಾನವನ್ನು ಆತ್ಮವಿಶ್ವಾಸದಿಂದ ಜಗತ್ತಿನ ಮುಂದಿಟ್ಟಿದೆ. ಇದರ ಫಲವಾಗಿ ಇಂದು ಇಡೀ ವಿಶ್ವವೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ" ಎಂದರು."ಭಾರತದಲ್ಲಿ ಯೋಗಾಸನವನ್ನು ಈಗ ಸ್ಪರ್ಧಾತ್ಮಕ ಕ್ರೀಡೆಯಾಗಿಯೂ ಗುರುತಿಸಲಾಗಿದೆ. 'ಖೇಲೋ ಇಂಡಿಯಾ' ಮತ್ತು 'ನ್ಯಾಷನಲ್ ಗೇಮ್ಸ್'ನಂತಹ ಕ್ರೀಡಾಕೂಟಗಳಲ್ಲಿ ಯೋಗಾಸನಕ್ಕೆ ಸ್ಥಾನ ಕಲ್ಪಿಸಲಾಗಿದೆ. ಇಂದು ಯೋಗವು ಭಾರತವನ್ನು ಅರಿಯುವ ಒಂದು ಹೆಬ್ಬಾಗಿಲಾಗಿದೆ. ಕತಾರ್ ರಾಜಮನೆತನ ಸೇರಿದಂತೆ ಅನೇಕ ವಿದೇಶಿ ಗಣ್ಯರೂ ಯೋಗದತ್ತ ಆಕರ್ಷಿತರಾಗುತ್ತಿದ್ದಾರೆ" ಎಂದು ಪ್ರಧಾನಿ ಮೋದಿ ತಿಳಿಸಿದರು.
ಸಂಬಂಧಿತ ಸುದ್ದಿಗಳು

ಮೇಕೆದಾಟು ಯೋಜನೆಗೆ ಅನುಮತಿ ಕೊಡಿ, ಕಸ್ತೂರಿರಂಗನ್ ವರದಿ ಹಿಂಪಡೆಯಿರಿ : ಪ್ರಧಾನಿ ಮುಂದೆ ರಾಜ್ಯದ ಬೇಡಿಕೆಗಳನ್ನಿಟ್ಟ ಸಿಎಂ ಡಿ. ಕೆ. ಶಿವಕುಮಾರ್
ಮೈಸೂರು : "ಮೇಕೆದಾಟು ಜಲಾಶಯ ಯೋಜನೆಗೆ ಅಗತ್ಯ ಅನುಮತಿ ನೀಡಬೇಕು. ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನು ಹಿ…
◷ 13/11/2026
ಮನೆ ಮನೆಗೆ ಗ್ಯಾರಂಟಿ ಸಮೀಕ್ಷೆ : ಮೃತಪಟ್ಟವರ ಹೆಸರಿನಲ್ಲಿಯೂ ಸೌಲಭ್ಯ ಪಡೆಯುತ್ತಿರುವ ಬಗ್ಗೆ ಪರಿಶೀಲನೆ
ಮೈಸೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿದೆಯೋ ಇಲ್ಲವೇ ಎಂಬುದನ್ನು ಖಚ…
◷ 13/11/2026
ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯ ಉದ್ಘಾಟಿಸಿದ ನಮೋ!
ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದು ನಗರದಲ್ಲಿ ದೇಶದ ಮೊದಲ ಎಲ್ ಇಡಿ ತಂತ್ರಜ್ಞಾನದ ತಾರಾಲಯವನ್ನು ಉದ್ಘಾಟಿಸಿದರು.ಬಳಿಕ ಮಾ…
◷ 13/11/2026
ಪಿಎಂ ಸ್ವಾಗತಿಸಿದ ಸಿಎಂ
ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣ…
◷ 13/11/2026
