ಮೈಸೂರು: ಲೇಖಕ ರವಿ ಹಂಜ್ ತಮ್ಮ ಕೀಳು ಪ್ರಚಾರಕ್ಕಾಗಿ ಮಹಾತ್ಮರನ್ನು ಕೆಟ್ಟದಾಗಿ ಟೀಕಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.ಅವರು ಮೈಸೂರಿನಲ್ಲಿ  ಬಸವೇಶ್ವರ ಕುರಿತ ವಿವಾದಿತ ಪುಸ್ತಕ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಬಸವಣ್ಣನ ಕಾರಣಕ್ಕೆ ಸಾವಿರಾರು ಮಠ ಹುಟ್ಟಿವೆ.ಮಠಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಉಳಿದಿದೆ.ಸರಕಾರಕ್ಕೆ ಸವಾಲು ಹಾಕುವ ರೀತಿ ಮಠಗಳು ಕೆಲಸ ಮಾಡುತ್ತಿವೆ.ಮಹಾತ್ಮರ ಬಗ್ಗೆ ಕೀಳಾಗಿ ಮಾತಾಡುವ, ಬರೆಯುವವರ ವಿರುದ್ದಕಾನೂನಿನ ಕುಣಿಕೆ ಬಿಗಿ ಮಾಡಬೇಕು.2007 ರಲ್ಲಿ  ಬಸವಣ್ಣನ ಹುಟ್ಟಿನ ಮೂಲದ  ಪ್ರಶ್ನೆ ಮಾಡಿ ಅವಮಾನ ಮಾಡಿದ್ದರು.ಬಸವಣ್ಣ ಎಲ್ಲಾ ಜಾತಿಗೂ ಆದರ್ಶ ಎಂದರು.ನಮ್ಮ ದೇವಾನು ದೇವತೆಗಳನ್ನು ಅವಮಾನಿಸುವುದು ಕೆಲವರಿಗೆ ಅಭ್ಯಾಸ ಆಗಿದೆ.ಮೈಸೂರಲ್ಲಿ ಕೆಲವರು ರಾಕ್ಷಸನನ್ನು ದೈವ ಎಂದು ಬಿಂಬಿಸುವ ಕೆಲಸ ಮಾಡುತ್ತಾರೆ.ಮುಸ್ಲಿಂ ಧರ್ಮದ ಬಗ್ಗೆ ಈ ರೀತಿ ಮಾತಾಡಿದರೆ ಅಲ್ಲಿ ಕುತ್ತಿಗೆ ಕಡಿಯುತ್ತಾರೆ. ಕ್ರೈಸ್ತರ ಬಗ್ಗೆ ಮಾತಾಡಿದರೆ ಅಮೆರಿಕದಿಂದಲೂ ಖಂಡನೆ ಬರುತ್ತದೆ.ಹಿಂದೂ ಧರ್ಮ ಒಂದು ರೀತಿ ಹೇಳೋರು ಇಲ್ಲ ಕೇಳೋರು ಇಲ್ಲ ಎಂಬಂತೆ ಆಗಿದೆ.ನಮ್ಮ‌ ಧರ್ಮದಲ್ಲಿನ ಕೆಲ  ಅವಿವೇಕಿಗಳೆ ಈ ನಮ್ಮ ನಂಬಿಕೆಗಳಿಗೆ ಅವಮಾನ ಮಾಡುತ್ತಿದ್ದಾರೆ.ಈ ಕುರಿತ ಹೊಸ ಕಾನೂನು ರಚನೆ ಆಗಬೇಕು. ಬಸವಣ್ಣನಿಗೆ ಹೇಳೋರು ಇಲ್ಲ. ಕೇಳುವವರು ಯಾರು ಇಲ್ಲ ಎಂಬ ಕೆಲವರ ಅಹಂಗೆ ಹೊಡೆತ ಕೊಡಬೇಕಿದೆ ಎಂದರು.