ದ್ವಿಪಕ್ಷೀಯ ಸಂಬಂಧ ಸುಧಾರಣೆಯ ಗುರಿ: ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರ ಮೊದಲ ಅಧಿಕೃತ ಭಾರತ ಭೇಟಿ

ನವದೆಹಲಿ : ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ತಮ್ಮ ಮೊದಲ ಅಧಿಕೃತ ದ್ವಿಪಕ್ಷೀಯ ಭೇಟಿಗಾಗಿ ನವದೆಹಲಿಗೆ ಆಗಮಿಸಿದ್ದಾರೆ. ನವೆಂಬರ್ 22 ಮತ್ತು 23 ರಂದು ನಿಗದಿಯಾಗಿರುವ ಈ ಪ್ರವಾಸದಲ್ಲಿ, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಕಠ್ಮಂಡು ಮತ್ತು ನವದೆಹಲಿ ನಡುವಿನ ಸಂಬಂಧದ ದಿಕ್ಕಿನ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಇದ್ದ ಅನಿಶ್ಚಿತತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.ಜನ್-ಝಡ್ (Gen-Z) ನೇತೃತ್ವದ ಪ್ರತಿಭಟನೆಗಳ ನಂತರ ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡು ಅಧಿಕಾರಕ್ಕೆ ಬಂದ ಶಾ, ಆರಂಭದಲ್ಲಿ ಸಾಂಪ್ರದಾಯಿಕವಲ್ಲದ ರಾಜತಾಂತ್ರಿಕ ನಡೆ ಅನುಸರಿಸಿದ್ದರು. ವಿದೇಶಿ ರಾಯಭಾರಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗುವ ಬದಲು ಸಾಮೂಹಿಕವಾಗಿ ಭೇಟಿಯಾಗುವ ಅವರ ನಿರ್ಧಾರ ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಜೊತೆಗೆ ಕೆಲವು ದ್ವಿಪಕ್ಷೀಯ ವಿಷಯಗಳಲ್ಲಿ ಅವರ ಸರ್ಕಾರದ ನಿಲುವು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು.ಆರಂಭಿಕ ಭಿನ್ನಾಭಿಪ್ರಾಯಗಳ ನಡುವೆಯೂ ತೆರೆಮರೆಯಲ್ಲಿ ರಾಜತಾಂತ್ರಿಕ ಮಾತುಕತೆಗಳು ನಿರಂತರವಾಗಿ ನಡೆದಿದ್ದವು. ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಭಾರತಕ್ಕೆ ಭೇಟಿ ನೀಡಿದ್ದರೆ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಕಠ್ಮಂಡುವಿಗೆ ತೆರಳಿ ಉನ್ನತ ಮಟ್ಟದ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದರು. ಜೂನ್‌ನಲ್ಲಿ ಆಡಳಿತಾರೂಢ ರಾಷ್ಟ್ರೀಯ ಸ್ವತಂತ್ರ ಪಕ್ಷದ (RSP) ಅಧ್ಯಕ್ಷ ರಬಿ ಲಮಿಚಾನೆ ನವದೆಹಲಿಗೆ ಭೇಟಿ ನೀಡಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.ಇದೀಗ ಶಾ ಅವರ ದೆಹಲಿ ಭೇಟಿ ನೇಪಾಳದಲ್ಲೂ ತೀವ್ರ ಕುತೂಹಲ ಕೆರಳಿಸಿದೆ. ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಿ ಪರಸ್ಪರ ವಿಶ್ವಾಸವನ್ನು ಮರುಸ್ಥಾಪಿಸಲು ಈ ಭೇಟಿಯನ್ನು ಬಳಸಿಕೊಳ್ಳುವಂತೆ ನೇಪಾಳದ ವಿರೋಧ ಪಕ್ಷಗಳ ನಾಯಕರು ಶಾ ಅವರಿಗೆ ಸಲಹೆ ನೀಡಿದ್ದಾರೆ. ಉಭಯ ದೇಶಗಳ ನಡುವಿನ 'ವಿಶ್ವಾಸದ ಕೊರತೆ'ಯನ್ನು ನೀಗಿಸುವುದೇ ಶಾ ಅವರ ಪ್ರಮುಖ ಗುರಿಯಾಗಬೇಕು ಎಂದು ಮಾಜಿ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಲಿ ಒತ್ತಿ ಹೇಳಿದ್ದಾರೆ.
ಸಂಬಂಧಿತ ಸುದ್ದಿಗಳು

ತುಳಸಿ ಗಿಡವು ಪವಿತ್ರತೆಯ ಸಂಕೇತ : ಸುರೇಶ್. ಎನ್ .ಋಗ್ವೇದಿ
ಚಾಮರಾಜನಗರ : ತುಳಸಿ ಗಿಡವು ಪವಿತ್ರತೆಯ ಸಂಕೇತ. ಭಾರತೀಯ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಅಪಾರ ಗೌರವ, ಭಕ್ತಿ, ನಂಬಿಕೆ ಮತ್ತು ಮ…
◷ 22/11/2026
ಆರೋಗ್ಯ ಮಾಹಿತಿ ತಲುಪಿಸುವಲ್ಲಿ ಬಹುಭಾಷಾ ಎಐ (AI) ಮಹತ್ವದ ಪಾತ್ರ : ಭಾಷಿಣಿ ಸಿಇಒ ಅಮಿತಾಬ್ ನಾಗ್
ನವದೆಹಲಿ : ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನವನ್ನು ಸುಧಾರಿಸುವ ಮೂಲಕ, ವೈದ್ಯಕೀಯ ದಾಖಲೆಗಳನ್ನು ಸರಳಗೊಳಿಸುವ ಮೂಲಕ ಹಾಗೂ ಆರೋ…
◷ 22/11/2026
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ₹22,400 ಕೋಟಿ ನೆರವು ನೀಡುವಂತೆ ಮನವಿ : ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿಕೆ
ಬೆಂಗಳೂರು : ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು ರಾಜ್ಯದ ರೈತರ ಹಿತದೃಷ್ಟಿಯ…
◷ 22/11/2026
ಡಿಸೆಂಬರ್ 12ಕ್ಕೆ ಗಂಗಾ ಜಲ ಒಪ್ಪಂದ ಅಂತ್ಯ: ಢಾಕಾದಲ್ಲಿ ಭಾರತ-ಬಾಂಗ್ಲಾದೇಶ ಮಹತ್ವದ ಸಭೆ
ನವದೆಹಲಿ : ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಹಂಚಿಕೆಯ ನದಿಗಳ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಢಾಕಾದ…
◷ 22/11/2026
