ಸುನೀಲ್ ಗವಾಸ್ಕರ್ ಅವರ 50 ವರ್ಷಗಳ ಹಳೆಯ ದಾಖಲೆ ಸರಿಗಟ್ಟಿದ ಕೆ.ಎಲ್. ರಾಹುಲ್ : ಇತಿಹಾಸ ಸೃಷ್ಟಿ

ನವದೆಹಲಿ : ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಕಳೆದ 12 ವರ್ಷಗಳಿಂದ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ರಾಹುಲ್, 2026ರಲ್ಲಿ ನ್ಯೂಜಿಲೆಂಡ್ ನೆಲದಲ್ಲಿ ತಮ್ಮ ಮೊದಲ ರೆಡ್-ಬಾಲ್ ಪಂದ್ಯವನ್ನು ಆಡಿದರು. ನ್ಯೂಜಿಲೆಂಡ್ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲೇ ಶತಕ ಸಿಡಿಸಿ ದಿಗ್ಗಜ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ನ್ಯೂಜಿಲೆಂಡ್ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಕೇವಲ ಮೂರನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಕೆ.ಎಲ್. ರಾಹುಲ್ ಪಾತ್ರರಾಗಿದ್ದಾರೆ. ಇವರಿಗಿಂತ ಮೊದಲು ಸುನೀಲ್ ಗವಾಸ್ಕರ್ ಮತ್ತು ಸುರಿಂದರ್ ಅಮರನಾಥ್ ಮಾತ್ರ ಈ ಸಾಧನೆ ಮಾಡಿದ್ದರು. ಗವಾಸ್ಕರ್ ಮತ್ತು ಅಮರನಾಥ್ 1976ರಲ್ಲಿ ಈ ದಾಖಲೆ ಬರೆದಿದ್ದರು.
50 ವರ್ಷಗಳ ಬರಕ್ಕೆ ತೆರೆ
ಕಳೆದ ಐವತ್ತು ವರ್ಷಗಳಲ್ಲಿ ಯಾವುದೇ ಭಾರತೀಯ ಬ್ಯಾಟ್ಸ್ಮನ್ ನ್ಯೂಜಿಲೆಂಡ್ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಗವಾಸ್ಕರ್ ಮತ್ತು ಅಮರನಾಥ್ ಅವರ ಐವತ್ತು ವರ್ಷಗಳ ನಂತರ ಅಂತಿಮವಾಗಿ ರಾಹುಲ್ ಈ ಸಾಧನೆ ತೋರಿದ್ದಾರೆ. ಗವಾಸ್ಕರ್ 1976ರಲ್ಲಿ ಆಕ್ಲೆಂಡ್ನಲ್ಲಿ ಆಡುತ್ತಾ 116 ರನ್ ಗಳಿಸಿದ್ದರು. ಅದೇ ಪಂದ್ಯದಲ್ಲಿ ಸುರಿಂದರ್ ಅಮರನಾಥ್ 124 ರನ್ ಬಾರಿಸಿದ್ದರು. ಇದು ಇಬ್ಬರೂ ಬ್ಯಾಟ್ಸ್ಮನ್ಗಳಿಗೆ ನ್ಯೂಜಿಲೆಂಡ್ನಲ್ಲಿ ಮೊದಲ ಟೆಸ್ಟ್ ಪಂದ್ಯವಾಗಿತ್ತು.ಸುನೀಲ್ ಗವಾಸ್ಕರ್: 116 ರನ್ (1976 - ಆಕ್ಲೆಂಡ್), ಸುರಿಂದರ್ ಅಮರನಾಥ್: 124 ರನ್ (1976 - ಆಕ್ಲೆಂಡ್), ಕೆ.ಎಲ್. ರಾಹುಲ್: 136 ರನ್ (2026 - ವೆಲ್ಲಿಂಗ್ಟನ್)
ರೋಹಿತ್ ಶರ್ಮಾ ಹಿಂದಿಕ್ಕಿದ ರಾಹುಲ್
ಇದೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿಚಾರದಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ರಾಹುಲ್ ಇದುವರೆಗೆ 123 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 4,424 ರನ್ ಗಳಿಸಿದ್ದಾರೆ. ಇದೇ ಇನ್ನಿಂಗ್ಸ್ನಲ್ಲಿ ಅವರು ರೋಹಿತ್ ಶರ್ಮಾ ಅವರನ್ನು ಮೀರಿಸಿದರು. ರೋಹಿತ್ ತಮ್ಮ 67 ಪಂದ್ಯಗಳ ಟೆಸ್ಟ್ ವೃತ್ತಿಜೀವನದಲ್ಲಿ 4,301 ರನ್ ಗಳಿಸಿದ್ದರು.ಪಂದ್ಯದ ವಿಚಾರಕ್ಕೆ ಬಂದರೆ, ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 368 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಎರಡನೇ ದಿನದ ಆಟದ ಅಂತ್ಯದ ವೇಳೆಗೆ ಭಾರತ ಕೇವಲ ಒಂದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ರಾಹುಲ್ ಮೂರನೇ ದಿನ ತಮ್ಮ ಶತಕ ಪೂರೈಸಿದರು. ಅವರಿಗೆ ಸಾಥ್ ನೀಡಿದ ದೇವದತ್ತ ಪಡಿಕ್ಕಲ್ 80 ರನ್ಗಳ ಕೊಡುಗೆ ನೀಡಿದರು. ಇವರಲ್ಲದೆ ನಾಯಕ ಶುಭ್ಮನ್ ಗಿಲ್ ಕೂಡ ಅರ್ಧಶತಕ ದಾಖಲಿಸಿದ್ದಾರೆ.
ಸಂಬಂಧಿತ ಸುದ್ದಿಗಳು

ಗಿಲ್-ಪಂತ್ ಜೊತೆಯಾಗಿ ಇತಿಹಾಸ ನಿರ್ಮಾಣ : WTCನಲ್ಲಿ 3000 ರನ್ ಗಡಿ ದಾಟಿದ ಭಾರತೀಯ ಜೋಡಿ, ಪಂತ್ ಮೊಟ್ಟಮೊದಲ ವಿಕೆಟ್ ಕೀಪರ್
ವೆಲ್ಲಿಂಗ್ಟನ್ : ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತದ ಶುಭಮನ್ ಗಿಲ್ ಮ…
◷ 21/11/2026
ಹಾಂಗ್ ಕಾಂಗ್ ಓಪನ್ ಸೆಮಿಫೈನಲ್ ಗೆ ಲಗ್ಗೆಯಿಟ್ಟ ಸಾತ್ವಿಕ್-ಚಿರಾಗ್ ಜೋಡಿ ; ಚೀನಾ ಜೋಡಿಗೆ ಸೋಲು
ಹಾಂಗ್ ಕಾಂಗ್ : ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಶುಕ್ರವಾರ ನಡೆ…
◷ 20/11/2026
ಟಿ20 ಕ್ರಿಕೆಟ್ನಲ್ಲಿ ಇತಿಹಾಸ ಸೃಷ್ಟಿಸಿದ ಯುಜ್ವೇಂದ್ರ ಚಹಲ್
ಇಂದೋರ್ : ಭಾರತದ ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಟಿ20 ಕ್ರಿಕೆಟ್ನಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಚು…
◷ 19/11/2026
ಸಿಎಸ್ ಕೆ ಟೀಮ್ ಮೆಂಟರ್ ಆಗಿ ಧೋನಿ!
ಚೆನ್ನೈ : ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಕ್ರಿಕೆಟಿಗ ಎಂ.ಎಸ್. ಧೋನಿ ನಿವೃತ್ತರಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಹೊ…
◷ 17/11/2026
