ಬೆಂಗಳೂರು :  ಮುಖ್ಯಮಂತ್ರಿ  ಡಿ.ಕೆ ಶಿವಕುಮಾರ್ ಅವರದ್ದು ಹೂವಿನಂತಹ ಹೃದಯ, ಬಂಡೆ ಹೃದಯ ಅಲ್ಲ, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಮಾಡುತ್ತಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  ತಿಳಿಸಿದರು.ಆಶಾ ಕಾರ್ಯಕರ್ತೆಯರ ಪ್ರತಿಭಟನೆ   ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು  ಆಶಾ ಕಾರ್ಯಕರ್ತೆಯರು ಒಂದು ವಾರದಿಂದ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಆಶಾ ಕಾರ್ಯಕರ್ತೆಯರ ಶ್ರಮದ ಬಗ್ಗೆ ನಾವೆಲ್ಲರು ನಾನು ಸೇರಿದಂತೆ ಬಾಯಿ ಮಾತಿನ ಅನುಕಂಪದಲ್ಲೇ ಮಾತಾಡುತ್ತೇವೆ.  ಅವರ ನಿತ್ಯದ ಶ್ರಮ ಹೆಚ್ಚಿದೆ. ನಾನು ಅವರನ್ನು ದೆಹಲಿಗೆ ಕರೆಸಿ ಧರ್ಮೇಂದ್ರ ಪ್ರಧಾನ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿಸಿದ್ದೆ. ಅವರ ಬೇಡಿಕೆ ಈಡೇರಿಕೆ ನಮ್ಮೆಲ್ಲರ ಕರ್ತವ್ಯ. ತಿಂಗಳಿಗೆ 7-8 ಸಾವಿರ ಕೊಡುತ್ತೇವೆ, ಆ ಹಣದಿಂದ ಅವರು ಬದುಕಲು ಸಾಧ್ಯವಿಲ್ಲ ವೆಂದು ಹೇಳಿದರು.ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಮಾತು ಈಡೇರಿಸುವಲ್ಲಿ ಬಹಳ ಮೇಲೆ ಇದೆ. ಈ ಸರ್ಕಾರ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ ಅಂತ ಜಪ ಮಾಡುತ್ತಿದೆ. ಲಕ್ಷಾಂತರ ಬಾರಿ ಇದನ್ನು ಹೇಳಿದ್ದಾರೆ. ಇವರು ಪ್ರಣಾಳಿಕೆಯಲ್ಲಿ 15 ಸಾವಿರ ಘೋಷಣೆ ಮಾಡಿದ್ದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಜಾಸ್ತಿ ಮಾಡಿ ಎಂದು ಹೇಳುತ್ತಿದ್ದಾರೆ. ಸರ್ಕಾರಕ್ಕೆ ಏನು ಸಮಸ್ಯೆ ಇಲ್ಲ. ಸರ್ಕಾರ ಅತ್ಯಂತ ಸದೃಢವಾಗಿ ಇರುವ ಸರ್ಕಾರ ಇದು. ಸಿಎಂ ಡಿಕೆ ಶಿವಕುಮಾರ್ ಗೆ  ಇರುವ ಅನುಭವದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಯಲ್ಲಿ ಸಮರ್ಥರು ಇದ್ದಾರೆಂದು ತಿಳಿಸಿದರು.ಭಾರತ್ ಜೋಡೋ ಸಂಘಕ್ಕೆ 1 ಸಾವಿರ ಕೋಟಿ ಘೋಷಣೆ ಮಾಡಿದ ಸಿಎಂ ಅವರಿಗೆ ಆಶಾ ಕಾರ್ಯಕರ್ತೆಯರ ಬೇಡಿಕೆ ಯಾವ ಲೆಕ್ಕ? ಚಳಿಯಲ್ಲಿ ಮಕ್ಕಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಾ ಇದ್ದಾರೆ. ಸಿಎಂ ಅವರದ್ದು ಹೂವಿನಂತ ಹೃದಯ. ಬಂಡೆ ಹೃದಯ ಅಲ್ಲ, ಆ ಹೃದಯ ಇಷ್ಟು ಹೊತ್ತಿಗೆ ಕಲಕಬೇಕಿತ್ತು. ಹೃದಯ ಕಲಕಿ ಘೋಷಣೆ ಆಗಬೇಕಿತ್ತು. ಜಪಾನ್ ಗೆ ಹೋಗಿದ್ದಾರೆ. ಅದಕ್ಕೆ ಮುಂದೂಡಿಕೆ ಮಾಡಿರಬಹುದು.ಅಲ್ಲಿಂದ ಬಂದ ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಮಾಡುತ್ತಾರೆ ಎನ್ನುವುದು ನನ್ನ ಅಭಿಪ್ರಾಯ ಎಂದರು.