ಸರ್ಕಾರವನ್ನು ಹೆದರಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಬಾರದು : ಸಿಎಂ ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ಸರ್ಕಾರವನ್ನು ಹೆದರಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡಬಾರದು. ಅಷ್ಟು ಹಠ ಇರಬಾರದು. ಹೆಣ್ಣುಮಕ್ಕಳು ಮನೆಯ ಕಣ್ಣು ಎಂಬ ಅರಿವು ನನಗಿದೆ. ಹೋರಾಟವನ್ನು ತಾಳ್ಮೆಯಿಂದ ವಾಪಸ್ ತೆಗೆದುಕೊಳ್ಳಿ ಎಂದು ಸಿಎಂ ಡಿಕೆ ಶಿವಕುಮಾರ್ ಆಶಾ ಕಾರ್ಯಕರ್ತೆಯರ ಬಳಿ ಮನವಿ ಮಾಡಿದ್ದಾರೆ.ಇಂದು ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಜೊತೆಗೆ ಆಶಾ ಕಾರ್ಯಕರ್ತೆಯರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಶುಕ್ರವಾರ ಸಂಜೆ ನಾನು ಬಂದ ಮೇಲೆ ಮಾತಾಡುತ್ತೇನೆ. ಕೆಲವರು ಬಂದು ರಾಜಕಾರಣ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಯಾಕೆ ಮಾತನಾಡುತ್ತಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದ ಮೇಲೆ ನಾವು ಮಾಡಿದ್ದೇವೆ, ಈಗಲೂ ಮಾಡುತ್ತೇವೆ ಎಂದರು. ಆಶಾ ಕಾರ್ಯಕರ್ತೆಯರನ್ನು ಶುಕ್ರವಾರ ಸಂಜೆ ಭೇಟಿ ಮಾಡುತ್ತೇನೆ. ಈಗಲೂ ಅವರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಪ್ರತಿಷ್ಠೆ ಬಿಡಿ. ಸರ್ಕಾರವನ್ನು ಹೆದರಿಸಬಾರದು, ಮನವಿ ಮಾಡಲಿ. ಹೆಣ್ಣು ಕುಟುಂಬದ ಕಣ್ಣು. ಇಷ್ಟೊಂದು ಹಠ ಏಕೆ? ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ. ದಯವಿಟ್ಟು ಪ್ರತಿಭಟನೆ ವಾಪಸ್ ಪಡೆದುಕೊಳ್ಳಿ. ಖಾದರ್, ನರೇಂದ್ರ ಸ್ವಾಮಿ ಹೇಳಿಕೆಗಳು ತಪ್ಪು. ಅದೆಲ್ಲ ಸರಿಯಲ್ಲ. ನಮಗೆ ಎಲ್ಲರೂ ಬೇಕು. ನಮ್ಮ ಮೇಲೆ ಆಶಾ ಕಾರ್ಯಕರ್ತೆಯರು ವಿಶ್ವಾಸ ಇಡಲಿ. ನಾವು ಅವರ ಸಮಸ್ಯೆ ಪರಿಹಾರ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದರು.ಆನೆ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆನೆಗಳನ್ನು ಅಷ್ಟು ಸಲೀಸಾಗಿ ಕಂಟ್ರೋಲ್ ಮಾಡೋಕಾಗಲ್ಲ. ಚಿಕ್ಕಮಗಳೂರು ಶಾಸಕರು ಕೇಳೋದು ತಪ್ಪಲ್ಲ. ಏಕಾಏಕಿ ನಾವು ಏನೂ ನಿರ್ಧಾರ ಮಾಡಕಾಗಲ್ಲ. ಮನೆ, ತೋಟಗಳಿಗೆ ಆನೆ ನುಗ್ಗುತ್ತವೆ. ನಾನು ಅಧಿಕಾರಿಗಳು, ಮಂತ್ರಿಗಳ ಜೊತೆ ಮಾತಾಡುತ್ತೇನೆ ಎಂದು ತಿಳಿಸಿದರು.
ಸಂಬಂಧಿತ ಸುದ್ದಿಗಳು

ದೇವಾಲಯಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯವನ್ನು ಬೆಸೆಯುವ ಕೇಂದ್ರ : ಅಡಗೂರು ಎಚ್.ವಿಶ್ವನಾಥ್ ಅಭಿಮತ
ವಿನಯ್ ದೊಡ್ಡಕೊಪ್ಪಲುಕೆ.ಆರ್.ನಗರ : ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ, ಅವು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯವನ್ನ…
◷ 26/11/2026
ಸಂವಿಧಾನವು ನಮ್ಮೆಲ್ಲರ ನ್ಯಾಯದ ಆಧಾರ ಮತ್ತು ಪ್ರಜಾಪ್ರಭುತ್ವದ ಶಕ್ತಿ : ಸಿಎಂ ಡಿ.ಕೆ. ಶಿವಕುಮಾರ್
ಮೈಸೂರಿನಲ್ಲಿ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ
◷ 26/11/2026
ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ; ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಎನ್. ಚಲುವರಾಯಸ್ವಾಮಿ
ಮೈಸೂರು: ಸಂವಿಧಾನ ಉಳಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆ ಮತ್ತು ಸಾಮಾನ್ಯ ಪ್ರಜೆಯ ಮತಕ್ಕೆ ಬೆಲೆ ಇರುತ್ತದೆ. ಸಂವಿ…
◷ 26/11/2026
ಕರ್ನಾಟಕದ ಮಾದರಿಯಲ್ಲಿ ದೇಶಾದ್ಯಂತ ಸಂವಿಧಾನ ದಿನಾಚರಣೆ ನಡೆಸಿ : ಪ್ರಧಾನಿ ಮೋದಿಗೆ ಡಿಸಿಎಂ ಡಾ. ಜಿ. ಪರಮೇಶ್ವರ ಒತ್ತಾಯ
ಸಂವಿಧಾನವನ್ನು ಹೊಗಳುತ್ತಿರುವವರ ಮಾತುಗಳಿಗಿಂತ ಅವರ ನಡೆಗಳ ಬಗ್ಗೆ ಎಚ್ಚರಿಕೆ ಇರಲಿ
◷ 26/11/2026
