ದೇವಾಲಯಗಳು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯವನ್ನು ಬೆಸೆಯುವ ಕೇಂದ್ರ : ಅಡಗೂರು ಎಚ್.ವಿಶ್ವನಾಥ್ ಅಭಿಮತ

ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದೇವಾಲಯಗಳು ಕೇವಲ ಪೂಜಾ ಕೇಂದ್ರಗಳಲ್ಲ, ಅವು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯವನ್ನು ಬೆಸೆಯುವ ಕೇಂದ್ರಗಳಾಗಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ತಮ್ಮ ಅನುದಾನದಡಿ ಜೀರ್ಣೋದ್ಧಾರಗೊಂಡಿರುವ ಶ್ರೀರಾಮಾಂಜನೇಯಸ್ವಾಮಿ ದೇವಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಯಿಂದ ಜನರಲ್ಲಿ ಒಗ್ಗಟ್ಟು ಮೂಡುತ್ತದೆ. ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಗ್ರಾಮಸ್ಥರೆಲ್ಲರೂ ಕೈಜೋಡಿಸಿರುವುದು ಶ್ಲಾಘನೀಯ. ಮುಂದೆಯೂ ಕ್ಷೇತ್ರದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ಅವರು ಭರವಸೆ ನೀಡಿದರು. ಗಂಧನಹಳ್ಳಿ ಗ್ರಾಮದಲ್ಲಿ ಧಾರ್ಮಿಕ ವಿಧಿವಿಧಾನಗಳ ಸಂಭ್ರಮ ಮನೆ ಮಾಡಿತ್ತು, ಜೀರ್ಣೋದ್ಧಾರಗೊಂಡ ದೇವಾಲಯದ ಉದ್ಘಾಟನೆಯ ಪ್ರಯುಕ್ತ ಮುಂಜಾನೆ ಯಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅರ್ಚಕರ ವೃಂದದಿಂದ ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಹೋಮ, ಕಳಸ ಸ್ಥಾಪನೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ದೇವಾಲಯವನ್ನು ತಳಿರು ತೋರಣ ಮತ್ತು ವಿವಿಧ ಬಗೆಯ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಪೂಜಾ ಕೈಂಕರ್ಯಗಳ ನಂತರ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಗಂಧನಹಳ್ಳಿ ಮುಖಂಡರಾದ ಜಿ.ಪಿ.ದೇವರಾಜ್, ಬೈಪಾಸ್ ಸ್ವಾಮಣ್ಣ, ಪಿಟ್ಟೆ ರಾಜಣ್ಣ, ಆರ್ಚಕ ಧರ್ಮ, ಟಿಎಪಿಸಿಎಂಎಸ್ ಮಾಜಿ ನಿರ್ಧೆಶಕ ಜಿ.ಎನ್.ರಾಜೇಗೌಡ, ಸಿದ್ದರಾಮು(ಕರಿಯಪ್ಪ) , ತಾ.ಪಂ.ಮಾಜಿ ಸದಸ್ಯ ಮಂಜುನಾಥ್, ದೊಡ್ಡ ಯಜಮಾನ್ ಎನ್.ರಘು, ಕುಬೇರ, ಗ್ರಾ.ಪಂ.ಮಾಜಿ ಸದಸ್ಯ ಸತೀಶ್, ಜಿ.ಹೆಚ್.ನಾಗರಾಜ್, ಒಂಟಿಮನೆ ಸುಬ್ಬೇಗೌಡ, ಜಿ.ಬಿ.ಮಂಜುನಾಥ್, ಕುಳ್ಳಪ್ಪ, ಮಠದಣ್ಣ ರಾಮೇಗೌಡ, ಕುರಿಕುಳ್ಳಯ್ಯ ರಾಮೇಗೌಡ ಕಲಾವಿದ ಬ್ಯಾಡರಹಳ್ಳಿ ಶ್ರೀನಿವಾಸ್, ಮಾರಗೌಡನಹಳ್ಳಿ ಕಾಂತರಾಜು, ಹನಸೋಗೆ ಲಕ್ಷ್ಮಣನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಂಬಂಧಿತ ಸುದ್ದಿಗಳು

ದೆಹಲಿ ಮೃಗಾಲಯದಲ್ಲಿ ಜೀವವೈವಿಧ್ಯದ ಅನಾವರಣ
ನವದೆಹಲಿ : ಇಲ್ಲಿನ ರಾಷ್ಟ್ರೀಯ ಪ್ರಾಣಿ ಉದ್ಯಾನವನದಲ್ಲಿ (ದೆಹಲಿ ಮೃಗಾಲಯ) ಆಯೋಜಿಸಲಾಗಿದ್ದ 22ನೇ 'ಸಂಡೇ ಬರ್ಡ್ ವಾಕ್ @ ಎನ್ಝಡ್ಪ…
◷ 27/11/2026
ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ನವದೆಹಲಿ : ಕ್ಷೇತ್ರ ಪುನರ್ವಿಂಗಡಣೆಗೆ (Delimitation) ಸಂಬಂಧಿಸಿದ ಹೊಸ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾ…
◷ 27/11/2026
ಎಸ್ಐಟಿ ರಚನೆ ಮಾಡಿದ್ದೇ ಕ್ಲೀನ್ ಚಿಟ್ ಕೊಡಿಸಿಕೊಳ್ಳಲು ಎಂಬುದು ಸಾಬೀತಾಗಿದೆ :
ಬೆಂಗಳೂರು : ಕಾಂಗ್ರೆಸ್ ಪಕ್ಷವು ಇತಿಹಾಸವನ್ನು ಅಳಿಸುವ ಕೆಲಸ ಮಾಡುತ್ತಿದೆ. ಯಾವುದೇ ವಿಚಾರಣೆ (ಎನ್ಕ್ವೈರಿ) ಅಥವಾ ತನಿಖೆ ನಡೆಯದೆಯ…
◷ 27/11/2026
ವಾರದ ಅಂತ್ಯದ ವಹಿವಾಟಿನಲ್ಲಿ ಷೇರುಪೇಟೆಗೆ ಕುಸಿತದ ಬಿಸಿ ; ಸೆನ್ಸೆಕ್ಸ್ 989 ಅಂಕ ಕುಸಿತ, ನಿಫ್ಟಿ ಶೇ. 1ಕ್ಕಿಂತ ಹೆಚ್ಚು ಇಳಿಕೆ
ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಕಚ್ಚಾ ತೈಲ (ಕ್ರೂಡ್ ಆಯಿಲ್) ಬೆಲೆ ಏರಿಕೆಯಾಗಿದ್ದು, ಇದರ ನ…
◷ 27/11/2026
