ಮೈಸೂರು : ಒಬ್ಬ ಸಿಎಂ ಮೇಲೆಯೇ ನಂಬಿಕೆ ಇಲ್ಲ ಅಂದ್ರೆ ಹೇಗೆ‌. ಅದ್ಕೆ ನಾನೇನು ಮಾಡಕ್ಕಾಗಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.ಮೈಸೂರಿನಲ್ಲಿ ಇಂದು ಆಶಾ ಕಾರ್ಯಕರ್ತೆಯರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಬ್ಲ್ಯಾಕ್ ಮೇಲ್ ನಮ್ಮ ಬಳಿ ನಡೆಯಲ್ಲ. ಬ್ಲಾಕ್ ಮೇಲ್ ಮಾಡಿ ನಮ್ಮನ್ನು ಹೆದರಿಸುತ್ತೇವೆ ಅಂದುಕೊಂಡ್ರೆ ಅದೆಲ್ಲಾ ಆಗುವುದಿಲ್ಲ.ಲಿಖಿತವಾಗಿ ನಾನು ಏನನ್ನೂ ಬರೆದುಕೊಡಲು ಆಗುವುದಿಲ್ಲ. ಲಿಖಿತವಾಗಿ ಯಾರಿಗೆ ಬರೆದುಕೊಡಬೇಕು.ಆಶಾ ಕಾರ್ಯಕರ್ತೆಯರ ನೇಮಕವಾಗಿರುವುದು ಕೇಂದ್ರ ಸರ್ಕಾರದಿಂದ.ಕೇಂದ್ರದ ಬಳಿ ಲಿಖಿತವಾಗಿ ಕೇಳಿದ್ದಾರಾ ಎಂದು ಪ್ರಶ್ನಿಸಿದರು.ಒಬ್ಬರಿಗೆ ಲಿಖಿತವಾಗೆ ಬರೆದುಕೊಟ್ರೆ ಇನ್ನೂ ಎಲ್ಲರೂ ಅದನ್ನೇ ಶುರು ಮಾಡುತ್ತಾರೆ. ಇನ್ನೂ 17 ಇಲಾಖೆಯಲ್ಲಿ ಇದೇ ಪರಿಸ್ಥಿತಿ ಇದೆ. ಅವರೆಲ್ಲಾ ಲಿಖಿತವಾಗಿ ಕೇಳಿದರೆ ನಾವೇನು ಮಾಡಬೇಕು. ಆಶಾ ಕಾರ್ಯಕರ್ತೆಯರ ಬೇಡಿಕೆ ಸರಿಯಾಗಿ ಇದೆ. ಅದರ ನಂಬಿಕೆ ಮೇಲೆ ಜಗತ್ತು ನಡೆಯುತ್ತಿದೆ.ನನ್ನ ಮೇಲೆ ಆಶಾ ತಾಯಂದಿರು ನಂಬಿಕೆ ಇಡಬೇಕು. ನಾನು ಕೂಡ ಅವರ  ಮನವೊಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಇನ್ನೇನು ಮಾಡಲು ಸಾಧ್ಯ ಹೇಳಿ.ಕ್ಯಾಬಿನೆಟ್ ನಲ್ಲೂ ಚರ್ಚೆ ಮಾಡುತ್ತೇವೆ‌. ಅಧಿವೇಶನದಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಪ್ರತಿಭಟನೆ ಕೈ ಬಿಡಿ‌ ಎಂದು ಮನವಿ ಮಾಡಿದರು.