ಮಂಡ್ಯ :  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ  ಕಾಂಗ್ರೆಸಿಗರ ಸಿಟ್ಟು ತಣಿದಂತೆ ಕಾಣಿಸುತ್ತಿಲ್ಲ. ಮೊನ್ನೆ ಮದ್ದೂರು ಕೈ ಶಾಸಕ ಕದಲೂರು ಉದಯ್ ಅವರು  ಜಿ.ಪಂ.ನಲ್ಲಿ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ನಾಮಪಲಕ ತೆರವುಗೊಳಿಸಿದ್ದರು. ಇದೀಗ ಮಂಡ್ಯ ಮಿಮ್ಸ್ ಆಸ್ಪತ್ರೆಯ ಕಾಮಗಾರಿ ಮಾಹಿತಿ ಫಲಕದಲ್ಲಿ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾವಚಿತ್ರಕ್ಕೆ ಪೋಸ್ಟರ್ ಟೇಪ್ ಅಂಟಿಸಿದ್ದಾರೆ.ಮಂಡ್ಯ ಕೈ ಶಾಸಕನ ಅಣತಿ ಮೇರೆಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾವಚಿತ್ರದ ಪೋಸ್ಟರ್ ಗೆ  ಟೇಪ್ ಅಂಟಿಸಿ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಧಾನಿ ಮೋದಿ, ಕುಮಾರಸ್ವಾಮಿ ಭಾವಚಿತ್ರಕ್ಕೆ   ಕಿಡಿಗೇಡಿಗಳು ಮುಖ ಕಾಣದಂತೆ ಟೇಪ್ ಅಂಟಿಸಿದ್ದಾರೆ.ಕಾಂಗ್ರೆಸ್ ನಾಯಕರ ಸೂಚನೆಯಂತೆ ಟೇಪ್ ಹಾಕಿರುವ ಆರೋಪ ಕೇಳಿ ಬಂದಿದೆ. ಮೊನ್ನೆಯಷ್ಟೆ ಕೆಡಿಪಿ ಸಭೆಯಲ್ಲಿ  ಶಾಸಕ ಕದಲೂರು ಉದಯ್‌ ಕೆಲಸಕ್ಕೆ ಬಾರದ ಎಂದು ಬಹಿರಂಗವಾಗಿಯೇ ಟೀಕಿಸಿ ಅಧಿಕಾರಿಗಳಿಂದ ನಾಮಫಲಕ ತೆಗೆಸಿದ್ದರು.  ಇದೀಗ ಮಂಡ್ಯ ಮಿಮ್ಸ್ ಫಲಕದಲ್ಲಿ ಪ್ರಧಾನಿ ಮೋದಿ, ಹೆಚ್‌ಡಿಕೆ ಫೋಟೋಗೆ ಟೇಪ್ ಅಂಟಿಸಿದ್ದಾರೆ. ​ಕಾಮಗಾರಿಯ ನಾಮಫಲಕದಲ್ಲಿ ಮೋದಿ, ಹೆಚ್‌ಡಿಕೆ ಫೋಟೋಗೆ ಟೇಪ್ ಅಂಟಿಸಲಾಗಿದೆ. ಮಿಮ್ಸ್ ಆವರಣದಲ್ಲಿದ್ದ ಕಾಮಗಾರಿ ಫಲಕದಲ್ಲಿದ್ದ ಮೋದಿ, ಹೆಚ್‌ಡಿಕೆ ಚಿತ್ರ  ಮರೆಮಾಚಿಸಲು ಟೇಪ್ ಅಂಟಿಸಲಾಗಿದೆ. ​ಕುಮಾರಸ್ವಾಮಿ ಅವರ 3 ಕೋಟಿ ಸಿಎಸ್‌ಆರ್ ಅನುದಾನದಲ್ಲಿ  ವಿವಿಧ ಕಾಮಗಾರಿಗಳು ನಡೆಯುತ್ತಿದೆ. ​ಫಲಕದಲ್ಲಿದ್ದ ಪ್ರಧಾನಿ ಮೋದಿ-ಹೆಚ್ಡಿಕೆ ಹೆಸರಿಗೆ ಟೇಪ್ ಅಂಟಿಸಿದ್ದಾರೆ.  ​ಕಾಂಗ್ರೆಸ್ ಮುಖಂಡರ ಆಕ್ಷೇಪದ ಹಿನ್ನೆಲೆಯಲ್ಲಿ ಮುಚ್ಚಲು ಸೂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ​ಟೇಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸಿಗರ ಕೃತ್ಯಕ್ಕೆ ಜಿಲ್ಲೆಯಲ್ಲಿ   ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ.