ಕೊಳ್ಳೇಗಾಲ: ಕೊಳ್ಳೇಗಾಲ–ಮೈಸೂರು ಮುಖ್ಯರಸ್ತೆಯ ಕಿನಕಳ್ಳಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.ಅಪಘಾತದಲ್ಲಿ ಬೈಕ್ ಸವಾರ ಕೆ. ಹೊಸೂರು ಗ್ರಾಮದ ರಂಗಸ್ವಾಮಿ (ದಾಸ್ ನಾಯಕ ಅವರ ಪುತ್ರ) ಅವರಿಗೆ ತಲೆ, ಮುಖ, ಕೈ ಹಾಗೂ ಕಾಲುಗಳಿಗೆ  ಗಾಯಗಳಾಗಿವೆ. ಇಂಡಿಕಾ ವಿಸ್ಟಾ ಕಾರಿನ ಚಾಲಕ ರಘು ಹಾಗೂ ಅವರ ಪತ್ನಿ ಸೌಭಾಗ್ಯ ಅವರಿಗೂ ಕೈಗಳಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ಸ್ಥಳಕ್ಕೆ ಆಗಮಿಸಿದ 108 ಆಂಬುಲೆನ್ಸ್ ಮೂಲಕ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.ಅಪಘಾತದ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.