ಮಂಡ್ಯ : ಕೆಡಿಪಿ ಸಭೆಯಲ್ಲಿ ಹೆಚ್ಡಿಕೆ ನಾಮಪಲಕ ತೆರವು ಹಾಗೂ ಮಿಮ್ಸ್ ಆಸ್ಪತ್ರೆಯ ಹೆಚ್ಡಿಕೆ  ಮತ್ತು ಪ್ರಧಾನಿ ಭಾವಚಿತ್ರಕ್ಕೆ ಟೇಪ್‌ ಅಂಟಿಸಿದ್ದನ್ನು ಖಂಡಿಸಿದ ಮಾಜಿ ಶಾಸಕ ಸುರೇಶ್‌ಗೌಡ  ಪ್ರಕರಣಕ್ಕೆ ಸಂಬಂಧಿಸಿದಂತೆ  ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರಲ್ಲದೇ,ಜಿಲ್ಲಾಧಿಕಾರಿ ಕಚೇರಿ ಹಾಗೂ ಎಸ್ಪಿ ಕಚೇರಿಗೆ ಮುತ್ತಿಗೆ ಎಚ್ಚರಿಕೆಯನ್ನೂ ನೀಡಿದರು.ಮಂಡ್ಯದಲ್ಲಿ  ಸುದ್ದಿಗೋಷ್ಠಿ ನಡೆಸಿ   ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ದಳಪತಿಗಳು ಕಾಂಗ್ರೆಸ್ ಅವರು ಸಂವಿಧಾನ ದಿನಾಚರಣೆಯನ್ನು ಆಚರಣೆ ಅಷ್ಟೇ ಮಾಡ್ತಾರೆ. ಆದರೆ ಸಂವಿಧಾನದಂತೆ ಇವರು ನಡೆಯಲ್ಲ. ಮಂಡ್ಯದಲ್ಲಿ ಸಂವಿಧಾನ ಮೀರಿದ ವ್ಯಕ್ತಿಗಳು ಇದಾರೆ.ಅಹಂಕಾರ, ಧಿಮಾಕು, ಅಧಿಕಾರದ ಮದದಲ್ಲಿ ಇದ್ದಾರೆ. ಕೆಡಿಪಿ ಸಭೆಯಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ಮಾತಾಡಿದ್ದಾರೆ. ಮಿಮ್ಸ್ ಆಸ್ಪತ್ರೆಯಲ್ಲಿ ಭಾವ ಚಿತ್ರಕ್ಕೆ ಟೇಪ್ ಹಾಕಿ ಅವಮಾನ ಮಾಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ಹೆಸರು ಹಾಕಿದ್ರೆ ಕೆಲಸಕ್ಕೆ ಬಾರದವರು ಅಂತಾರೆ. ಕುಮಾರಸ್ವಾಮಿ ಅವರು ಕೆಲಸಕ್ಕೆ ಬಾರದವರು. ರಾಜ್ಯದಲ್ಲಿ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಸಾರಾಯಿ ನಿಷೇಧ ಮಾಡಿದವರು‌, ರೈತರ ನೆರವಿಗೆ ಹೋದವರು ಇದೇ ಕೆಲಸಕ್ಕೆ ಬಾರದವರು. ಕುಮಾರಸ್ವಾಮಿ ಅವರು ಏನಾದ್ರು ಕೆಲಸ ಮಾಡಿದ್ರೆ ನಮಗೆ ಕುತ್ತು ಬರುತ್ತೆ ಅಂತ ಹೀಗೆ ಮಾಡ್ತಾ ಇದ್ದಾರೆ.ಮಿಮ್ಸ್‌ನಲ್ಲಿ ಮೋದಿ, ಕುಮಾರಸ್ವಾಮಿ ಅವರ ಭಾವಚಿತ್ರ ಮುಚ್ಚುತ್ತೀರಾ. ಈ ರೀತಿ ಮಾಡಿದವರ ವಿರುದ್ಧ ಜಿಲ್ಲಾಡಳಿತ ಏಕೆ ಕ್ರಮ ತೆಗೆದುಕೊಂಡಿಲ್ಲ.ಶಾಸಕರ ವರ್ತನೆ ಬದಲು ಮಾಡಿಕೊಳ್ಳಬೇಕು‌. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮಿಮ್ಸ್ ಪ್ರಕರಣ ಮಾಡಿದವರಿಗೆ ಕ್ರಮ ತೆಗೆದುಕೊಳ್ಳಬೇಕು.ಇಲ್ಲವಾದ್ರೆ ನಾವು 7 ತಾಲೂಕಿನ ಜನರೊಂದಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕಾಂಗ್ರೆಸ್ ಅವರು ಸರ್ಕಾರಿ ಹಣದಲ್ಲಿ ಪಕ್ಷದ ಕಾರ್ಯಕ್ರಮ ಮಾಡುತ್ತಾರೆ. ಆಗ ಇವರಿಗೆ ಯಾವುದು ನೆನಪಿಗೆ ಬರಲ್ವಾ?ನಾವು ಸಿಎಸ್‌ಆರ್ ಫಂಡ್ ನಲ್ಲಿ ಮಾಡಿದ್ರೆ ತಡೆದುಕೊಳ್ಳಲ್ಲ.ಫೋಟೋ ಹೆಸರು ಎಲ್ಲವನ್ನೂ ಟೇಪ್ ಹಾಕ್ತಾರೆ. ಈ ಕೃತ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು  ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು. ಸಾರ್ವಜನಿಕರು ಖಂಡಿಸಿದ್ರು ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ನಾವು ಶಾಸಕರಾಗಿದ್ದೀವಿ ಇದನ್ನು ಖಂಡಿಸ್ತೇವೆ, ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಸಭೆ ಪ್ರಾರಂಭಕ್ಕೂ ಮುನ್ನ ಫೋಟೊ ತೆಗೆಸಲು ಅವರು ಯಾರು? ಜಿಲ್ಲಾ ಮಂತ್ರಿ ಬರುವ ಮುಂಚೆ‌ ಈ ಕೆಲಸ ಮಾಡ್ತಾರೆ ಅಂದ್ರೆ ತಮಾಷೆನ? ಸರ್ಕಾರ ಅವರ ಅಪ್ಪನದಲ್ಲ.  ಜನರ ಸೇವೆಗೆ ಜನರು ಗೆಲ್ಲಿಸಿರೋದು, ಸರ್ವಾಧಿಕಾರಿ‌ ಕೆಲಸ ಮಾಡಲು ಅಲ್ಲ. ಜಿಲ್ಲಾಧಿಕಾರಿ ಗಳಿಗೆ ಅಂತಿಮವಾಗಿ ಹೇಳಿದ್ದೀವಿ. ಸರ್ಕಾರದ ಹಣದಲ್ಲಿ ಮುಖ್ಯಮಂತ್ರಿ ಯಿಂದ ಮಂಡ್ಯದಲ್ಲಿ ಪಕ್ಷದ ಕಾರ್ಯಕ್ರಮ ಮಾಡಿದ್ದೀರ.‌ನಾಗಮಂಗಲದಲ್ಲಿ  ಕಾರ್ಖಾನೆಗಳಿಂದ ಫಂಡ್ ತಂದು ಆಟೋ ನಿಲ್ದಾಣಕ್ಕೆ ಕೆಲಸ ಮಾಡ್ತಿದ್ರು ಇವರು ಜಾಗ ಕೊಡ್ತಿಲ್ಲ ಎಂದು ವಾಗ್ದಾಳಿ ನಡೆಸಿದರು