ಮಂಡ್ಯ :  ಜಮೀನಲ್ಲಿ ಉರುಳಿಗೆ ಸಿಲುಕಿದ್ದ ಚಿರತೆ ಮರಿಯನ್ನು ರಕ್ಷಣೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆರೆ‌ಮೇಗಲ ದೊಡ್ಡಿ ಗ್ರಾಮದಲ್ಲಿ ನಡೆದಿದೆ.ಕಾಡು ಹಂದಿಯ ಬೇಟೆಗೆಂದು ಹಾಕಿದ್ದ ಉರುಳಿಗೆ   ಚಿರತೆ ಮರಿ ಸಿಲುಕಿತ್ತು. ಉರುಳಿಗೆ ಸಿಲುಕಿ ಹೊರ ಬರಲಾಗದೆ   ಒಂದು ವರ್ಷ ಪ್ರಾಯದ ಗಂಡು ಚಿರತೆ ಪರದಾಡುತ್ತಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿರತೆ ಸೆರೆ ಕಾರ್ಯಾಚರಣೆ ಪಡೆ ಮೂಲಕ ಅರವಳಿಕೆ ಮದ್ದು ನೀಡಿ ಚಿರತೆ ಮರಿ ರಕ್ಷಣೆ ಮಾಡಲಾಗಿದೆ. ಗಾಯಗೊಂಡಿದ್ದ ಚಿರತೆ ಮರಿಗೆ ಚಿಕಿತ್ಸೆಗಾಗಿ ಕೂರ್ಗಳ್ಳಿ ಪುನರ್ ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.