ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸಚಿವ ಟಿ. ರಘುಮೂರ್ತಿ ಭೇಟಿ

ಮೈಸೂರು: ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಟಿ. ರಘುಮೂರ್ತಿ ಅವರು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿದರು. ಸಂಸ್ಥೆಯ ಉಪನಿರ್ದೇಶಕರು ಹಾಗೂ ಸಿಬ್ಬಂದಿವರ್ಗದವರು ಸಚಿವರನ್ನು ಹಾರ್ದಿಕವಾಗಿ ಬರಮಾಡಿಕೊಂಡರು.ಸಂಸ್ಥೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಸಂಸ್ಥೆಯ ಪ್ರಗತಿ ಪರಿಶೀಲನೆ ಆರಂಭಿಸಿದ ಸಚಿವರು ಸಂಸ್ಥೆಯ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಹಾಗೂ ಭಗವಾನ್ ಬಿರ್ಸಾಮುಂಡಾರವರ ಭಾವಚಿತ್ರಗಳಿಗೆ ಹಾಗೂ 77ನೇ ಸಂವಿಧಾನ ದಿನಾಚರಣೆಯ ಪ್ರಯುಕ್ತ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ವಿಸ್ತೃತವಾಗಿ ಸಂಸ್ಥೆಯ ಪ್ರಗತಿಪರಿಶೀಲನಾ ಸಭೆ ಆರಂಭಿಸಿದ ಸಚಿವರು, ಕರ್ನಾಟಕ ರಾಜ್ಯಬುಡಕಟ್ಟು ಸಂಸ್ಥೆಯಲ್ಲಿ ನಡೆಯುತ್ತಿರುವ ಕುಲಶಾಸ್ತ್ರೀಯ, ಮೌಲ್ಯಮಾಪನ ಅಧ್ಯಯನಗಳು, ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳ ವಸ್ತುಸ್ಥಿತಿಯನ್ನು ಕುರಿತು ಉಪನಿರ್ದೇಶಕ ಎಚ್.ಎಸ್.ಗಿರಿಜಾಂಬರವರಿಂದ ಹಾಗೂ ಸಂಶೋಧನಾಧಿಕಾರಿ ಡಾ.ಕೃಷ್ಣಮೂರ್ತಿ ಕೆ ವಿಯವರಿಂದ ಮಾಹಿತಿ ಪಡೆದುಕೊಂಡರು. ನಂತರ ಸಂಸ್ಥೆಯ ಸಿಬ್ಬಂದಿಗಳ ಜೊತೆ ಸಂವಾದವನ್ನು ನಡೆಸಿದ ಸಚಿವರು ಕೈಗೊಂಡಿರುವ ಅಧ್ಯಯನಗಳು ಮತ್ತು ಸಂಶೋಧನೆಗಳು ಯಾವ ರೀತಿ ಬುಡಕಟ್ಟು ಸಮುದಾಯಗಳಿಗೆ ಉಪಯುಕ್ತವಾಗಬೇಕೆಂಬ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಿದರು.ಇದೇ ಸಂದರ್ಭದಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯು ಸ್ಥಾಪಿಸಲು ಉದ್ದೇಶಿಸಿರುವ ಬುಡಕಟ್ಟು ವಸ್ತುಸಂಗ್ರಹಾಲಯಕ್ಕೆ ಅಗತ್ಯವಾಗಿ ಬೇಕಾದ ಭೂ ಮಂಜೂರಾತಿಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ಶೀಘ್ರವಾಗಿ ಭೂಮಿಯನ್ನು ಮಂಜೂರು ಮಾಡಿಸಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದರು.ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಬೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಮಪ್ಪನವರು ಹಾಗೂ ಜಿಲ್ಲಾ ITDP ಅಧಿಕಾರಿಗಳಾದ ಭಾರತಿಯವರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸಂಬಂಧಿತ ಸುದ್ದಿಗಳು

ಭಾವಚಿತ್ರಕ್ಕೆ ಟೇಪ್ ಅಂಟಿಸಿದ ಪ್ರಕರಣ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ
ಮಂಡ್ಯ : ಕೆಡಿಪಿ ಸಭೆಯಲ್ಲಿ ಹೆಚ್ಡಿಕೆ ನಾಮಪಲಕ ತೆರವು ಹಾಗೂ ಮಿಮ್ಸ್ ಆಸ್ಪತ್ರೆಯ ಹೆಚ್ಡಿಕೆ ಮತ್ತು ಪ್ರಧಾನಿ ಭಾವಚಿತ್ರಕ್ಕೆ ಟೇಪ್ …
◷ 27/11/2026
ಕಾರು–ಬೈಕ್ ನಡುವೆ ಅಪಘಾತ : ಮೂವರಿಗೆ ಗಾಯ
ಕೊಳ್ಳೇಗಾಲ: ಕೊಳ್ಳೇಗಾಲ–ಮೈಸೂರು ಮುಖ್ಯರಸ್ತೆಯ ಕಿನಕಳ್ಳಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿ…
◷ 27/11/2026
ಭಾರತದ ವಿರುದ್ಧ ಮೊದಲ ದಿನ ನ್ಯೂಜಿಲೆಂಡ್ 246 ರನ್
ನವದೆಹಲಿ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿದ್ದು, ಮೊದಲ ದಿನದಾಟ…
◷ 27/11/2026
ಬಿಜಿಎಸ್ ಉತ್ಸವ–2026ನ್ನು ಉದ್ಘಾಟಿಸಿದ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಕೆಂಗೇರಿಯ ಬಿಜಿಎಸ್ ಗ್ರೌಂಡ್ನಲ್ಲಿ ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ 18ನೇ ಬಿಜಿಎಸ್ ಸಂಸ…
◷ 27/11/2026
