ಹಾವೇರಿ :  ಇಂದು  ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್‌ ಅವರು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗಮಧ್ಯೆ ಕುರುಬ ಸಮುದಾಯದ ಕುರಿಗಾಹಿಗಳೊಂದಿಗೆ ಆತ್ಮೀಯವಾಗಿ ಸಮಯ ಕಳೆದರು.  ನಂತರ ಕುರಿಗಾಹಿಗಳ ಕಷ್ಟ-ಸುಖ, ಕುರಿ ಸಾಕಾಣಿಕೆಯಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಕುರಿಗಾಹಿಗಳು ಮುಖ್ಯಮಂತ್ರಿಗಳಿಗೆ ಪ್ರೀತಿಯಿಂದ ಕುರಿಮರಿಯನ್ನು ಉಡುಗೊರೆಯಾಗಿ ನೀಡಿ, ಕಂಬಳಿ ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ    ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ   ಪ್ರಕಾಶ್‌ ಕೋಳಿವಾಡ,  ಶ್ರೀನಿವಾಸ್‌ ಮಾನೆ,   ಬಸವರಾಜ ನೀಲಪ್ಪ ಶಿವಣ್ಣನವರ್‌ ಇದ್ದರು.