ಮಂಡ್ಯ: ರಾಜ್ಯದ ಸಿಎಂ ಭೂಮಿ ಕೊಟ್ಟಾಗಿದೆ ಎಂದು ಹೇಳಿದ್ದಾರೆ. ಉಡಾಫೆ ಉತ್ತರ ಕೊಟ್ಟುಕೊಂಡು ಸರ್ಕಾರ ಮಾಡ್ತಿದ್ದಾರೆ. ಭೂಮಿ ಕೊಡುವ ಬಗ್ಗೆ ಸರ್ಕಾರದ ಪ್ರಕ್ರಿಯೆ ಮಾಡಬೇಕು. ಅದನ್ನು ಬಿಟ್ಟು ಕೊಟ್ಟಾಗಿದೆ ಎಂದು ಮಾತಾಡುವುದಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.  ಮಂಡ್ಯದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನವರಿ ತಿಂಗಳಿಂದ ಈ ಬೆಳವಣಿಗೆ ನಡೆಯುತ್ತಿದೆ. ಎಆರ್‌ಎಐ ಸಂಸ್ಥೆ ಅವರು ಮೊದಲಿಂದ ರೆಕ್ಟ್ ಆ್ಯಂಗಲ್ ಬೇಕು ಅಂತ ಕೇಳ್ತಾ ಇದ್ರು. ಎಆರ್‌ಎಐ ಮಾಡುವುದು ಬೂಟಾಟಿಕೆ ಅಲ್ಲ.ನಿನ್ನೆ ಚಂದ್ರಬಾಬು ನಾಯ್ಡು 25% ಜಿಟಿಪಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ನಾನು ಎಆರ್‌ಎಐ ಬಗ್ಗೆ ಸಾಕಷ್ಟು ಬಾರಿ ಸಭೆ ಮಾಡಿದ್ದೇನೆ.ಹಿಂದಿನ ಸಿಎಂಗೂ ಸಹ ಪತ್ರ ಬರೆದಿದ್ದೇನೆ.ಸಿದ್ದರಾಮಯ್ಯ ಅವರು ಬಜೆಟ್‌ನಲ್ಲೂ 100 ಎಕರೆ ಬಗ್ಗೆ ಮಂಡನೆ ಮಾಡಿದ್ರು.ಆದ್ರೆ ಇವರು ಎಲ್ಲವನ್ನೂ ದೂಡುತ್ತಿದ್ದಾರೆ.ಮಂಡ್ಯಗೆ ಎಐಆರ್‌ಎ ಬೇಡಾ ಅಂದ್ರೆ ಬೇಕು ಅನ್ನೋರು ಕ್ಯೂನಲ್ಲಿ ಇದ್ದಾರೆ.ಬೇಡಾ ಅಂದ್ರೆ ಇವರು ಹೇಳಲಿ.ಎಆರ್‌ಎಐ ಸೆಂಟರ್ ಸ್ಥಾಪನೆಯಿಂದ ಸಾಕಷ್ಟು ಬೆಳವಣಿಗೆ ಆಗುತ್ತದೆ.ಗೊತ್ತಿಲ್ಲ ಅಂದ್ರೆ ಪೂನಾಗೆ ಹೋಗಿ ನೋಡಲಿ.ಇದರಿಂದ ಇಂಡಸ್ಟ್ರಿಗಳ ಸ್ಥಾಪನೆ ಆಗುತ್ತವೆ. ARAI ಘಟಕ ಸ್ಥಾಪನೆಯಿಂದ ಹೊಸ ವಾಹನಗಳ  ಟೆಸ್ಟಿಂಗ್‌ ಬರುತ್ತವೆ.ಎಆರ್‌ಎಐ ಜೊತೆಗೆ ಬೇರೆ ಕಾರ್ಖಾನೆ ಸ್ಥಾಪನೆ ಆಗಲಿ ಅಂತ 500 ಎಕರೆ ಭೂಮಿ ಕೇಳಿದ್ದೆ.ಅದನ್ನೆ ಮಂಡ್ಯ ಶಾಸಕರು ಮೊದಲು 100 ಎಕರೆ ಅಂದ್ರು ಈಗ 500 ಎಕರೆ ಅಂತ ವಿವಾದ ಮಾಡ್ತಿದ್ದಾರೆ ಎಂದರು.ಮಂಡ್ಯದಲ್ಲಿ ಏನು ಮಾಡಿದ್ದಾನೆ ಸಾಕ್ಷಿ ಗುಡ್ಡೆ ಕೊಡಲಿ ಅಂತಾರೆ.ಮೊದಲು ನೀವು ಜಾಗ  ಕೊಡಿ, ನಾನು ಸಾಕ್ಷಿ ಗುಡ್ಡೆ ಕೊಡ್ತೀನಿ.ನನಗೆ ಇವರು ಈಗ 100 ಎಕರೆಯನ್ನೇ ಕೊಡಲಿ ಸಾಕು.ಮುಂದೆ ಚುನಾವಣೆ ಬರುತ್ತೆ.ಆಗ ಜನ ಆಶೀರ್ವಾದ ಮಾಡ್ತಾರೆ.ನಮ್ಮ ಸರ್ಕಾರ ಬರುತ್ತೆ, ಆಗ ನಾವೇ ಮಾಡ್ತೀವಿ. ಐಟಿ ಹಬ್ ಮಾಡಿದ್ದು ಎಸ್.ಎಂ.ಕೃಷ್ಣ ಅಂತಾರೆ.ದೇವೇಗೌಡರು ಸಿಎಂ ಆಗಿದ್ದಾಗ ತೆರಿಗೆ ವಿನಾಯಿತಿ ಕೊಟ್ರು.ದೇವೇಗೌಡರು ಮಾಡಿದ ಕೆಲಸ ಯಾರು ಹೇಳಲ್ಲ.ಟೊಯೋಟಾ ಎಲ್ಲಾ ತಂದಿದ್ದು ಯಾರು.ದೇವೇಗೌಡರು ಸೂಟು ಬೂಟು ಹಾಕೊಂಡು ಹೋಗಲ್ಲ.ಇವನ್ಯಾರೋ‌ ಹಳ್ಳಿ ಗುಗ್ಗು, ಗಮಾರ್ ಅಂತಾರೆ ಇವರು‌ ಎಂದು ಕಿಡಿಕಾರದರು.ನಾವು ಯಾವ ರೈತನ್ನೂ ಎತ್ತಿಕಟ್ಟಿಲ್ಲ.ಜಿಲ್ಲಾಧಿಕಾರಿ 100 ಎಕರೆ ಸರ್ಕಾರಿ ಜಾಗ ಇದೆ ಅಂತ ಹೇಳಿದ್ದಾರೆ.ರೈತರನ್ನು ಯಾಕೆ ಎತ್ತಿಕಟ್ಟಲಿ. ಕೈಗಾರಿಕೆ ಬರಬೇಕು ಅನ್ನೋದೆ ನಮ್ಮ ಆಸೆ.ತುಮಕೂರಿಗೆ ನೀರು ಬಿಡ್ಸಿ ಕುಮಾರಸ್ವಾಮಿ ತಲೆ ಬೋಳಿಸ್ತಿವಿ ಅಂದ್ರು.ತುಮಕೂರಿಗೆ ನೀರು ಹೋಗ್ತಿದೆ ಹಿಡಿಯೋಕಾಗ್ತಿಲ್ಲ.ಸ್ಮಾರ್ಟ್ ಸಿಟಿನಾದ್ರು ಮಾಡಲಿ, ಚಂದ್ರಲೋಕಾನಾದ್ರು ಇಳಿಸಿಕೊಳ್ಳಲಿ, ಹಿಡಿದುಕೊಂಡಿರೋರು ಯಾರು.ಸರ್ಕಾರ ಜಮೀನು ಕೊಟ್ಟಿದ್ದೀವಿ ಕೊಟ್ಟಿದ್ದೀವಿ ಅಂತಾರೆ ಎಂದರು. ಕೇಂದ್ರದ ಬರಪರಿಹಾರಕ್ಕೆ ಸಿಎಂ ಡಿಕೆಶಿ ದೆಹಲಿ ಚಲೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಮಾಡಲಿ ತಪ್ಪೇನಿಲ್ಲ.ಇಲ್ಲಿಂದಲೇ ನಡೆದುಕೊಂಡು ಹೋಗಲಿ. ಭಾರತ್ ಜೋಡೋ ರೀತಿ ಇಲ್ಲಿಂದಲೇ ಪಾದಯಾತ್ರೆ ಹೋಗಿ ಎಂದು ವ್ಯಂಗ್ಯವಾಡಿದರು. ಬರಪರಿಹಾರ ಕೊಡೋದು ರಾಜ್ಯ ಸರ್ಕಾರದ ಕರ್ತವ್ಯ. ಅವರು ಮಾಡಕ್ಕಾಗಲ್ಲ ನಮ್ಮ ಮೇಲೆ ಹಾಕ್ತಾರೆ ಎಂದರು.