ಆಶಾ ಕಾರ್ಯಕರ್ತೆಯರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಅವರು ನಡೆಸಿದ ಸಂಧಾನ ಸಭೆ ಯಶಸ್ವಿ

ಬೆಂಗಳೂರು: ಆಶಾ ಕಾರ್ಯಕರ್ತೆಯರ ಜೊತೆ ಸಿಎಂ ಡಿ.ಕೆ ಶಿವಕುಮಾರ್ ಅವರು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. 2,000 ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡುವ ಸಿಎಂ ಭರವಸೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು 12 ದಿನಗಳ ಹೋರಾಟ ಮಾಡಿದ್ದರು, 15 ಸಾವಿರಕ್ಕೆ ಮನವಿ ಮಾಡಿದ್ದರು. ರಾಜ್ಯದಿಂದ ಈಗ 5, ಕೇಂದ್ರದಿಂದ 2 ಸಾವಿರ, ಪ್ರೋತ್ಸಾಹ ಧನ 1 ಸಾವಿರ ಬರುತ್ತಿದೆ. ಕೆಲಸ ಆಧಾರಿತ ಇನ್ಸೆಂಟಿವ್ ಸಹ ಬರುತ್ತಿದೆ. ಮೂರು ವರ್ಷದಿಂದ ಹೆಚ್ಚಳ ಆಗಿಲ್ಲ. ಅನೇಕ ಬೇಡಿಕೆ ಇಟ್ಟಿದ್ದಾರೆ.ಕೇಂದ್ರ ಸಹ ಇವರ ಬಗ್ಗೆ ಸಹನೆ ವಹಿಸಬೇಕು. ಹಿಂದೆ 50:50 ಅನುಪಾತ ಇತ್ತು. ಆದರೆ ಕೇಂದ್ರ 2 ಸಾವಿರದ ಮೇಲೆ ಹೆಚ್ಚಿಸಿಲ್ಲ. ನಾವು ಭರವಸೆ ಕೊಟ್ಟಿದ್ದೆವು. ಸುದೀರ್ಘ ಚರ್ಚೆ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ನನ್ನನ್ನು ಕರಗಿಸಿ ಮನಸು ಸೆಳೆದಿದ್ದಾರೆ.2 ಸಾವಿರ ಹೆಚ್ಚಳ ಮಾಡಲು ತೀರ್ಮಾನ ಅಗಿದೆ. ಈಗ ಏನಿದೆ ಅದರ ಮೇಲೆ 2 ಸಾವಿರ ಹೆಚ್ಚಳವಾಗಿದ್ದು, ಜನವರಿ 2027 ರಿಂದ ಹೆಚ್ಚಳ ಅನ್ವಯವಾಗಲಿದೆ. ಮುಂದೆ ಅವರ ಸಹಕಾರ ಇರಲಿದೆ ಎಂದರು.ಮಧ್ಯದಲ್ಲಿ ಕೆಲವರು ರಾಜಕಾರಣಕ್ಕೆ ಬಳಸಿಕೊಳ್ಳಲು ಪ್ರಯತ್ನ ಮಾಡಿದರು. ಇವರು ಯಾರಿಗೂ ಬಗ್ಗಲಿಲ್ಲ. ಕೆಲವರು ಇವರ ಥರದ ಬಟ್ಟೆ ಹಾಕಿಕೊಂಡು ಬಂದು ಇವರ ಜತೆ ಸೇರಿಕೊಂಡಿದ್ದರು. ಅವರನ್ನು ಇವರು ಪತ್ತೆ ಮಾಡಿದ್ದಾರೆ. ಇವರಿಗೆ ಜಯ ಸಿಕ್ಕಿದೆ, ಒಟ್ಟಿಗೆ ಕೆಲಸ ಮಾಡೋಣ ಎಂದರು.ಸಂಧಾನ ಸಕ್ಸಸ್ ಆಗುತ್ತಿದ್ದಂತೆ ಸಿಎಂ ಹಿಂದೆ ನಿಂತು ಆಶಾ ಕಾರ್ಯಕರ್ತೆಯರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಸಿಎಂಗೆ ಶಾಲು ಹೊದಿಸಿ ಸನ್ಮಾನ ಸಹ ಮಾಡಿದ್ದಾರೆ. ಸಂಧಾನ ಸಕ್ಸಸ್ ಆಗುತ್ತಿದ್ದಂತೆ, ಆಶಾ ಕಾರ್ಯಕರ್ತೆಯರು ಹೋರಾಟವನ್ನು ಕೈಬಿಟ್ಟಿದ್ದಾರೆ.
ಸಂಬಂಧಿತ ಸುದ್ದಿಗಳು

ಹಂಪಾಪುರ ಕೊನೆ ಭಾಗದ ವಿವಿಧ ಗ್ರಾಮಗಳ ನಾಲೆಯ ಕೊನೆ ಹಂತಕ್ಕೆ ನಾಳೆಯೊಳಗೆ ನೀರು ಹರಿಸಿ ಇಲ್ಲದಿದ್ದಲ್ಲಿ ಮಂಗಳವಾರ ಕೆ.ಆರ್.ನಗರ ಪಟ್ಟಣ ಬಂದ್ಗೆ ಕರೆ : ರೈತರ ಎಚ್ಚರಿಕೆ
ವಿನಯ್ ದೊಡ್ಡಕೊಪ್ಪಲು ಕೆ.ಆರ್.ನಗರ : ತಾಲೂಕಿನ ಹಂಪಾಪುರ ಕೊನೆಭಾಗದ ವಿವಿಧ ಗ್ರಾಮಗಳ ನಾಲೆಯ ಕೊನೆಹಂತಕ್ಕೆ ನೀರುಹರಿಸಿ ಕೈಗೆ ಬಂದಿರು…
◷ 28/11/2026
ನನಗೆ ಸಿಕ್ಕಿರುವ ಅಧಿಕಾರ ನಿಮ್ಮದು; ನನ್ನದು ಮಾನವ ಜಾತಿ ಮಾತ್ರ : ಕನಕಪುರದ ಅಭಿನಂದನಾ ಸಮಾರಂಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್
ರಾಮನಗರ: ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕನಕಪುರದ ಮುನ್ಸಿಪಲ್ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಕಾರ್ಯಕ…
◷ 28/11/2026
ವಾರಣಾಸಿಯಲ್ಲಿ 5ನೇ ಆವೃತ್ತಿಯ ‘ಕಾಶಿ ತಮಿಳು ಸಂಗಮಂ’ಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಚಾಲನೆ
ವಾರಣಾಸಿ : ಉತ್ತರ ಪ್ರದೇಶದ ವಾರಾಣಸಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಐದನೇ ಆವೃತ್ತಿಯ …
◷ 28/11/2026
ಭಾರತದ ‘ವಿಕಸಿತ ಭಾರತ’ ಪಯಣದಲ್ಲಿ ಡೆನ್ಮಾರ್ಕ್ ಪ್ರಮುಖ ಪಾಲುದಾರ : ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್
ನವದೆಹಲಿ : 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ ಭಾರತ) ನಿರ್ಮಿಸುವ ಪಯಣದಲ್ಲಿ ಡೆನ್ಮಾರ್ಕ್ ಅ…
◷ 28/11/2026
