ಬೆಂಗಳೂರು :  ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಕನಿಷ್ಠ 750 ರೂ. ಆದರೂ ಬೆಲೆ ಕೊಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  ಸಿಎಂ ಡಿಕೆ ಶಿವಕುಮಾರ್  ಅವರನ್ನು ಆಗ್ರಹಿಸಿದ್ದಾರೆ.ಜೆಪಿ ಭವನದಲ್ಲಿ  ಮಾತಾಡಿದ ಅವರು, ಈ ಸರ್ಕಾರದವರು 2500 ರೂ. ಕೊಡೋಕೆ 18 ಷರತ್ತು ಹಾಕಿದ್ದಾರೆ. ಇದಕ್ಕೆ ಇವರಿಗೆ ಪೆನ್ನು ಪೇಪರ್ ಕೊಡಬೇಕಾ? ರೈತರು ಅರ್ಥ ಮಾಡಿಕೊಳ್ಳಬೇಕು ಎಂದು   ಕಿಡಿಕಾರಿದರು. ರೈತರು, ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ ನಿದ್ದೆ ಕೆಟ್ಟು ಮಾಡಿದರು.ಆದರೆ  ರಿಸಲ್ಟ್ ಶೂನ್ಯ. ರೈತರ ಬಗ್ಗೆ ಕನಿಕರ ಇದ್ದರೆ ಕೇಂದ್ರದ ಮೇಲೆ ಹೇಳಬೇಡಿ. ತಮಿಳುನಾಡಿನಲ್ಲಿ   ಸರ್ಕಾರ ಟನ್‌ಗೆ 700 ರೂ. ಕೊಡುತ್ತಿದೆ. ರಾಜ್ಯ ಸರ್ಕಾರ ಕನಿಷ್ಠ ಟನ್ 750 ರೂ ಕೊಡಬೇಕು ಎಂದು ಕಿಡಿಕಾರಿದ್ದಾರೆ.ಕಬ್ಬು ಬೆಳಗಾರರು   ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಜೊತೆ ಮಾತಾಡಲು ಸಿಎಂ ಹೋದರು, ಆದರೆ  ಸರ್ಕಾರದ ಬಳಿ ಹಣ ಇಲ್ಲ ಅಂದರು. ನಾನು ಸಿಎಂ ಆಗಿದ್ದಾಗ ಹೊಲದಲ್ಲಿ ಕಬ್ಬು ಒಣಗಿ ಹೋಗಿತ್ತು. ಆಗ ಸಹಾಯ ಧನ 25 ಸಾವಿರ ರೂ. ನೀಡಿದ್ದೆ. ಯಾರು ರೈತರ ಪರ ಅಂತ ರೈತರು ಅರ್ಥ ಮಾಡಿಕೊಳ್ಳಬೇಕು. ಕಬ್ಬು ಬೆಳೆಗಾರರಿಗೆ ಹಣ ಬಿಡುಗಡೆ ಮಾಡಿದೆ. ರೈತರ ಸಾಲಮನ್ನಾ ಮಾಡಿದೆ. ರಾಜ್ಯದ ಬಜೆಟ್ ಕಡಿಮೆ ಇದ್ದರೂ ಸಾಲಮನ್ನಾ ಮಾಡಿದ್ದೆ ಎಂದು ತಿಳಿಸಿದ್ದಾರೆ.