Saturday, April 19, 2025
Google search engine

Homeಅಪರಾಧತುಮಕೂರು: ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ-ಮಗಳು ಸಾವು

ತುಮಕೂರು: ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ-ಮಗಳು ಸಾವು

ತುಮಕೂರು: ಖಾಸಗಿ ಬಸ್​ ಡಿಕ್ಕಿ ಹೊಡೆದು ತಾಯಿ ಹಾಗು ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕು ರಾಮಶೆಟ್ಟಿಹಳ್ಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರ ಅಂಡರ್ ಪಾಸ್​ ಬಳಿ ನಡೆದಿದೆ.

ತಾಯಿ ಕಮಲಮ್ಮ (42) ಮತ್ತು ಮಗಳು ವೀಣಾ (16) ಮೃತರು.

ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮಗಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಗೀತಾಂಜನೇಯ ಹೆಸರಿನ ಖಾಸಗಿ ಬಸ್​ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮತ್ತೊಬ್ಬ ಪಾದಚಾರಿ ತಲೆಗೂ ತೀವ್ರ ಪೆಟ್ಟು ಬಿದ್ದಿದ್ದು, ಹೆಚ್ಚಿನ ಚಿಕಿತ್ಸೆಗೆ ತಿಪಟೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಸಂಬಂಧಿಕರು ಮೃತದೇಹಗಳನ್ನು ತೆಗೆಯಲು ಬಿಡದೇ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಈ ಹಿಂದೆ ಹಲವು ಬಾರಿ ಗ್ರಾಮಸ್ಥರು ಅಂಡರ್​ಪಾಸ್ ಬೇಕೆಂದು ಹೋರಾಟ ನಡೆಸಿದ್ದರು. ಆದರೆ ಇಲ್ಲಿವರೆಗೂ ಸುಮಾರು ಐವರು ಇದೇ ಸ್ಥಳದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಿಪಟೂರು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular