ನವದೆಹಲಿ: ಭಾರತೀಯ ರೈಲ್ವೆಯು ಅಕ್ಟೋಬರ್ 2026 ರಲ್ಲಿ ಸಾರ್ವಕಾಲಿಕ ದಾಖಲೆಯ 145.07 ಮಿಲಿಯನ್ ಟನ್ (MT) ಸರಕು ಸಾಗಣೆ (Freight Loading) ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಅಕ್ಟೋಬರ್ 2025 ರಲ್ಲಿ ದಾಖಲಾಗಿದ್ದ 133.93 ಮಿಲಿಯನ್ ಟನ್‌ಗೆ ಹೋಲಿಸಿದರೆ ಇದು ಶೇಕಡಾ 8.32 ರಷ್ಟು ಹೆಚ್ಚಳ ಕಂಡಿದೆ.ರೈಲ್ವೆಯ ಈ ಬೆಳವಣಿಗೆಯು ದೇಶದ ಆರ್ಥಿಕ ಚಟುವಟಿಕೆಗಳು ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಲಭಿಸಿರುವ ಬಲವಾದ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾನ್ಯ ಮತ್ತು ಕಲ್ಲಿದ್ದಲು ಸಾಗಣೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಆಹಾರ ಧಾನ್ಯಗಳು: ಶೇಕಡಾ 26.3 ರಷ್ಟು ಹೆಚ್ಚಳ, ದೇಶೀಯ ಕಲ್ಲಿದ್ದಲು: ಶೇಕಡಾ 16 ರಷ್ಟು ಹೆಚ್ಚಳ, ಕ್ಲಿಂಕರ್ (ಸಿಮೆಂಟ್ ಕಚ್ಚಾವಸ್ತು): ಶೇಕಡಾ 10.4 ರಷ್ಟು ಹೆಚ್ಚಳ,ದೇಶೀಯ ಕಂಟೈನರ್‌ಗಳು: ಶೇಕಡಾ 6.3 ರಷ್ಟು ಹೆಚ್ಚಳ,ಕಬ್ಬಿಣದ ಅದಿರು: ಶೇಕಡಾ 5 ರಷ್ಟು ಹೆಚ್ಚಳ,ಖನಿಜ ತೈಲ: ಶೇಕಡಾ 1.9 ರಷ್ಟು ಹೆಚ್ಚಳ,ಉಕ್ಕು (Finished Steel): ಶೇಕಡಾ 0.5 ರಷ್ಟು ಹೆಚ್ಚಳವಾಗಿದೆ.ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಸಾಗಣೆಯನ್ನು ಹೆಚ್ಚಿಸಲಾಗಿದ್ದು, ಅಕ್ಟೋಬರ್ 2026 ರಲ್ಲಿ ಪ್ರತಿದಿನ ಸರಾಸರಿ 469.8 ಕಲ್ಲಿದ್ದಲು ರೇಕ್‌ಗಳನ್ನು (Recks) ಪೂರೈಸಲಾಗಿದೆ. ಅಕ್ಟೋಬರ್ 2025 ರಲ್ಲಿ ಇದು 393.2 ರೇಕ್ ಇತ್ತು (ಶೇ. 19.5 ರಷ್ಟು ಹೆಚ್ಚಳ).ಏಪ್ರಿಲ್-ಅಕ್ಟೋಬರ್ ನಡುವೆ 978.78 ಮಿಲಿಯನ್ ಟನ್ ಸಾಧನೆಪ್ರಸಕ್ತ ಹಣಕಾಸು ವರ್ಷದ ಮೊದಲ 7 ತಿಂಗಳಲ್ಲಿ (ಏಪ್ರಿಲ್‌ನಿಂದ ಅಕ್ಟೋಬರ್ 2026) ಭಾರತೀಯ ರೈಲ್ವೆ ಒಟ್ಟು 978.78 ಮಿಲಿಯನ್ ಟನ್ ಸರಕನ್ನು ಸಾಗಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿನ 935.10 ಮಿಲಿಯನ್ ಟನ್‌ ಗೆ ಹೋಲಿಸಿದರೆ ಇದು ವರ್ಷದಿಂದ ವರ್ಷಕ್ಕೆ (YoY) ಶೇಕಡಾ 4.67 ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ.ಅಕ್ಟೋಬರ್‌ನಲ್ಲಿ 64.72 ಕೋಟಿ ಪ್ರಯಾಣಿಕರ ಸಂಚಾರಅಕ್ಟೋಬರ್ 2026 ರಲ್ಲಿ  64.72 ಕೋಟಿ ಪ್ರಯಾಣಿಕರು ರೈಲ್ವೆ ಸೇವೆ ಬಳಸಿದ್ದಾರೆ (ಕಳೆದ ವರ್ಷ ಅಕ್ಟೋಬರ್‌ನಲ್ಲಿ 63.52 ಕೋಟಿ).ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ: ಒಟ್ಟು 443.8 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ (ಕಳೆದ ವರ್ಷ 431.4 ಕೋಟಿ).ನಗರ ಹೊರವಲಯದ (Non-suburban) ಪ್ರಯಾಣಿಕರ ವಿಭಾಗದಲ್ಲಿ ಶೇ. 4.2 ಮತ್ತು ನಗರ ಪ್ರದೇಶದ (Suburban) ವಿಭಾಗದಲ್ಲಿ ಶೇ. 1.7 ರಷ್ಟು ಬೆಳವಣಿಗೆ ದಾಖಲಾಗಿದೆ. ಸಾಮರ್ಥ್ಯ ವಿಸ್ತರಣೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವ ಮೂಲಕ ಭಾರತೀಯ ರೈಲ್ವೆಯು ತನ್ನ ಸಾರಿಗೆ ಜಾಲವನ್ನು ಬಲಪಡಿಸುತ್ತಿದ್ದು, ದೇಶದ ಆರ್ಥಿಕ ಪ್ರಗತಿಗೆ ವೇಗ ನೀಡುತ್ತಿದೆ.