13 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ಪವನ್ ಕಲ್ಯಾಣ್!

ಹೈದ್ರಾಬಾದ್ : ಖ್ಯಾತ ಚಲನಚಿತ್ರ ನಟ, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಕೊನಿಡೇಲಾ ಅವರ ಮೂರನೇ ಮದುವೆಯೂ ಕೊನೆಗೊಂಡಿದೆ. ಪವನ್ ಕಲ್ಯಾಣ್ ತಮ್ಮ ಪತ್ನಿ ಅನ್ನಾ ಕೊನಿಡೇಲಾರಿಂದ ಬೇರ್ಪಡುವುದಾಗಿ (ವಿಚ್ಛೇದನ) ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸೋಮವಾರ ತಡರಾತ್ರಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ, 13 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರೂ ಬೇರ್ಪಡುತ್ತಿರುವುದಾಗಿ ತಿಳಿಸಿದ್ದಾರೆ.ಸೋಮವಾರ ತಡರಾತ್ರಿ ಕಲ್ಯಾಣ್ ಅವರ ಇನ್‌ಸ್ಟಾಗ್ರಾಮ್ ಪುಟ ಹಾಗೂ ಜನಸೇನಾ ಪಕ್ಷದ ಅಧಿಕೃತ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾದ ಜಂಟಿ ಹೇಳಿಕೆಯಲ್ಲಿ, ಈ ನಿರ್ಧಾರವನ್ನು "ಪರಸ್ಪರ ತಿಳುವಳಿಕೆ ಮತ್ತು ಗೌರವದಿಂದ" ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಮುಂದೆಯೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ."ನಮ್ಮ ಮದುವೆ ಬಂಧ ಕೊನೆಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಹಾಗೂ ನಮ್ಮ ಪ್ರೀತಿಯ ಮಕ್ಕಳಿಗೆ ಬದ್ಧರಾದ ಪೋಷಕರಾಗಿ ಮುಂದುವರಿಯುತ್ತೇವೆ. ಅವರ ಸಂತೋಷ ಮತ್ತು ಒಳಿತೇ ಯಾವಾಗಲೂ ನಮ್ಮ ಆದ್ಯತೆಯಾಗಿರುತ್ತದೆ," ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. "ಜೀವನದ ಈ ವೈಯಕ್ತಿಕ ಬದಲಾವಣೆಯ ಹಂತದಲ್ಲಿ, ನಿಮ್ಮ ತಿಳುವಳಿಕೆ, ಪ್ರೀತಿ ಮತ್ತು ನಮ್ಮ ಖಾಸಗಿತನಕ್ಕೆ (ಪ್ರೈವೆಸಿ) ಗೌರವವನ್ನು ನಾವು ನಿರೀಕ್ಷಿಸುತ್ತೇವೆ. ಈ ಇಡೀ ಪ್ರಯಾಣದಲ್ಲಿ ನಮ್ಮೊಂದಿಗೆ ನಿಂತ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು," ಎಂದು ತಿಳಿಸಿದ್ದಾರೆ.ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೇಲಾ ಹೆಸರಿನಲ್ಲಿ ಬಿಡುಗಡೆಯಾದ ಈ ಹೇಳಿಕೆಯಲ್ಲಿ ಬೇರ್ಪಡಲು ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಅಲ್ಲದೆ ಕಾನೂನಾತ್ಮಕ ವಿಚ್ಛೇದನದ ಪ್ರಕ್ರಿಯೆ ಅಥವಾ ಮಕ್ಕಳ ಕಸ್ಟಡಿಯ ಕುರಿತಾಗಿಯೂ ಯಾವುದೇ ವಿವರಗಳನ್ನು ನೀಡಿಲ್ಲ.
ಸಂಬಂಧಿತ ಸುದ್ದಿಗಳು

1000 ಕೋಟಿಯತ್ತ ದಾಪುಗಾಲಿಟ್ಟ `ರಾಮಾಯಣ ಭಾಗ1’
ಮುಂಬೈ : ಸ್ಯಾಂಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ನಿತೇಶ್ ತಿವಾರಿ ನಿರ್ದೇಶನದ `ರಾಮಾಯಣ’ ಬಾಕ್ಸ್ ಆಫೀಸ್ ಭರ್ಜರಿ…
◷ 12/11/2026
ಶಂಕರ್ ನಾಗ್ ಸದಾ ಕಾಲ ಕನ್ನಡಿಗರ ಹೃದಯದಲ್ಲಿ ನೆಲೆಸಿರುತ್ತಾರೆ : ಸುರೇಶ್. ಎನ್. ಋಗ್ವೇದಿ
ಚಾಮರಾಜನಗರ : ಕನ್ನಡ ಚಲನಚಿತ್ರ ರಂಗದ ಶ್ರೇಷ್ಠ ನಟರಾಗಿ, ನಿರ್ದೇಶಕರಾಗಿ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ಚಾಪನ್ನು ಮೂಡ…
◷ 09/11/2026
500 ಕೋಟಿ ರೂ. ಗಡಿ ದಾಟಿ ಹೊಸ ದಾಖಲೆ ಬರೆದ ‘ರಾಮಾಯಣ: ಭಾಗ-1’
ಮುಂಬೈ : ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ-1’ ಚಿತ್ರವು ಬಾಕ್ಸ್ ಆಫೀಸ್ ನ್ನು ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ಆರಂಭದಲ್…
◷ 09/11/2026
ಷರತ್ತುಗಳನ್ನು ಅನ್ವಯಿಸಿ ನಟ ದರ್ಶನ್ ಬೇಡಿಕೆಗೆ ಕೋರ್ಟ್ ಅಸ್ತು
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 15 ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲ…
◷ 07/11/2026
