ಬೆಂಗಳೂರು :   ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಟನಲ್‌ ರಸ್ತೆ ವಿಚಾರವಾಗಿ  ಮಹತ್ವದ ಘೋಷಣೆಯನ್ನು ಮಾಡಿದ್ದು, ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂಬ ಆತಂಕಗಳಿಗೆ    ತೆರೆ ಎಳೆದಿದ್ದಾರೆ.ಲಾಲ್‌ಬಾಗ್ ಹೊರಭಾಗದಲ್ಲಿ ಟನಲ್ ರಸ್ತೆ ನಿರ್ಮಿಸಲು ಅಲೈನ್‌ಮೆಂಟ್ (ಮಾರ್ಗ ವಿನ್ಯಾಸ) ಬದಲಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಸ್ತುತ ಸಮೀಕ್ಷೆ (ಸರ್ವೆ) ನಡೆಯುತ್ತಿದ್ದು, ಪರ್ಯಾಯ ಎರಡು ರಸ್ತೆಗಳ ಹುಡುಕಾಟದಲ್ಲಿ ಸರ್ಕಾರ ತೊಡಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಲಾಲ್‌ಬಾಗ್ ಹೊರಭಾಗದಲ್ಲಿ ಟನಲ್ ರಸ್ತೆ ನಿರ್ಮಿಸಲು ಅಲೈನ್‌ಮೆಂಟ್ (ಮಾರ್ಗ ವಿನ್ಯಾಸ) ಬದಲಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಸ್ತುತ ಸಮೀಕ್ಷೆ (ಸರ್ವೆ) ನಡೆಯುತ್ತಿದ್ದು, ಪರ್ಯಾಯ ಎರಡು ರಸ್ತೆಗಳ ಹುಡುಕಾಟದಲ್ಲಿ ಸರ್ಕಾರ ತೊಡಗಿದೆ ಎಂದು ಸಚಿವರು ತಿಳಿಸಿದ್ದಾರೆ.