ಬೆಂಗಳೂರು :   ಡಿಸೆಂಬರ್‌ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.2,300 ಕಿ.ಮೀ. ಬಾಕಿ ಇರುವ ರಸ್ತೆಯ ದುರಸ್ತಿ ಡಾಂಬರೀಕರಣಕ್ಕೆ ಜನವರಿ, ಫೆಬ್ರವರಿ ಡೆಡ್‌ಲೈನ್ ಕೊಡಲಾಗಿತ್ತು. ಇದುವರೆಗೆ 4,200 ಕೋಟಿ ಅನುದಾನ ಬಿಡುಗಡೆಯಾಗಿದೆ‌. ವಾರ್ಡ್-1 ಅಭಿಯಾನ ನಡೆಯುತ್ತಿದ್ದು, ಈಗಾಗಲೇ ಗುಂಡಿ ಮುಚ್ಚೋಕೆ ವಾರ್ಡ್‌ಗೆ 75 ಲಕ್ಷ ಮೀಸಲಾಗಿಡಲಾಗಿದೆ. ಡಿಸೆಂಬರ್ ಒಳಗೆ ಮತ್ತೆ ಗುಂಡಿ ಮುಚ್ಚೋಕೆ ಡೆಡ್‌ಲೈನ್ ಕೊಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ರಸ್ತೆ ಕಾಮಗಾರಿ ವಿಳಂಬಕ್ಕೆ ತರಾಟೆಯನ್ನು ತೆಗೆದುಕೊಂಡರು. ರಾಜಕಾಲುವೆ ಒತ್ತುವರಿಯೂ ಆಗಿದೆ. ಹಲವೆಡೆ ರಾಜಕಾಲುವೆಯೇ ಇಲ್ಲ ಅಂತ ಸ್ವತಃ ಸಚಿವರೇ ಶಾಕ್‌ನಿಂದ ಹೇಳಿದರು. 22 ಎಕರೆ ಒತ್ತುವರಿ ಗಮನಕ್ಕೆ ಬಂದಿದ್ದು, ಈಗಾಗಲೇ ತೆರವಿಗೂ ಸೂಚಿಸಿದ್ದೇನೆ ಎಂದರು.