ಉರುಳಿಗೆ ಸಿಲುಕಿದ್ದ ಚಿರತೆ

ಶಿರಸಿ: ದುರುಳರು ಹಾಕಿದ್ದ ಉರುಳಿಗೆ ಸುಮಾರು ನಾಲೈದು ವರ್ಷ ವಯಸ್ಸಿನ ಚಿರತೆಯೊಂದು ಸಿಲುಕಿಕೊಂಡ ಘಟನೆ ಬನವಾಸಿ ಸಮೀಪದ ಬೆಂಗಳೆ-ಗುಡ್ಡಾಪುರ ಮಾರ್ಗದ ಮಧ್ಯೆ ನಡೆದಿದೆ. ಉರುಳಿಗೆ ಚಿರತೆ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಧೈರ್ಯದಿಂದ ಚಿರತೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲೇ ಪಕ್ಕದ ಬಲೆಗೆ ಸಿಲುಕಿ ಮತ್ತೆ ಚಿರತೆ ಸಂಕಷ್ಟ ಅನುಭವಿಸುವಂತಾಗಿದೆ. ವಿಷಯ ತಿಳಿದ ಬನವಾಸಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ಜತೆ ಸೇರಿ ಚಿರತೆಯ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸಂಬಂಧಿತ ಸುದ್ದಿಗಳು

2027 ಜನವರಿ 26ರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ
ಮೈಸೂರು: ಮೈಸೂರು ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲ…
◷ 25/11/2026
ಸ್ವದೇಶಿ ಎಐ ಮಾಡೆಲ್ ‘ಚ್ಯಾರಿಯೆಟ್-1’ (Chariot-1) ಲೋಕಾರ್ಪಣೆ: 10 ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಣೆ
ನವದೆಹಲಿ : ಭಾರತದಲ್ಲಿ ಸ್ವದೇಶಿ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಚ್ಯಾರಿಯೆಟ್-1’ (…
◷ 25/11/2026
ಟೋಕಿಯೊದ ನಗರಾಭಿವೃದ್ಧಿ ಮಾದರಿಯ ಅಧ್ಯಯನ: ರಾಜ್ಯದ ನಗರಗಳ ಭವಿಷ್ಯದ ಅಭಿವೃದ್ಧಿಗೆ ಹೊಸ ಚಿಂತನೆ!
ಟೋಕಿಯೋ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ನನ್ನನ್ನು ಒಳಗೊಂಡ ಕರ್ನಾಟಕದ ನಿಯೋಗವು ಟೋಕಿಯೊದ ಪ್ರಸಿದ್ಧ Toky…
◷ 25/11/2026
ಡಿಸೆಂಬರ್ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಚಿವ ಕೃಷ್ಣಬೈರೇಗೌಡ ಸೂಚನೆ
ಬೆಂಗಳೂರು : ಡಿಸೆಂಬರ್ ಒಳಗೆ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸೂಚ…
◷ 25/11/2026
