ಮೈಸೂರು :  ಮೈಸೂರಿನಲ್ಲಿ ಇಂದು ಬಿಜೆಪಿ ಮೈಸೂರು ವಿಭಾಗದ ವತಿಯಿಂದ ಟೌನ್ ಹಾಲ್ ಆವರಣದಲ್ಲಿ  ಏರ್ಪಡಿಸಲಾಗಿದ್ದ ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ ಬೃಹತ್ ಸಮಾವೇಶ ಕಾರ್ಯಕ್ರಮ ಹಾಗೂ ಪಾದಯಾತ್ರೆ ನಡೆಯಿತು.ಕಾರ್ಯಕ್ರಮದಲ್ಲಿ ಪಾಲ್ಗೊಂಡ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ ದೇಶದ ಪ್ರಗತಿಯನ್ನು ಸಹಿಸದ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.ಪ್ರತಿಭಟನೆ ಮಾಡಿ ಗೊಂದಲದ ಮೂಲಕ ಅರಾಜಕತೆ ಸೃಷ್ಟಿಸುವ ಕೆಲಸವಾಗುತ್ತಿದೆ. ದೇಶದಲ್ಲಿ ಅಧಿಕಾರಕ್ಕೆ ಬರದ ಕಾಂಗ್ರೆಸ್‌ ದೇಶದಲ್ಲಿ ಗೊಂದಲ ಸೃಷ್ಟಿಸಿ, ಯುವಕರನ್ನು ಬೀದಿಗೆ ತರತಕ್ಕ ಕೆಲಸ ಮಾಡಿ, ಹೇಗಾದರೂ ಮಾಡಿ ಕೇಂದ್ರ ಸರ್ಕಾರವನ್ನು ಉರುಳಿಸಬೇಕು.ಯಾವ ರೀತಿ ಬಾಂಗ್ಲಾದಲ್ಲಿ ಆಯ್ತು, ಶ್ರೀಲಂಕಾದಲ್ಲಿ ಆಯ್ತು, ಯಾವ ರೀತಿ ಬೇರೆ ಬೇರೆ ದೇಶಗಳಲ್ಲಿ ಇವತ್ತು ಅರಾಜಕತೆ ಸೃಷ್ಟಿಯಾಗುತ್ತಿದೆ. ಅದೇ ರೀತಿ ಕಾಂಗ್ರೆಸ್‌ ಪಕ್ಷ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ರಾಹುಲ್‌ ಗಾಂಧಿಯ ಷಡ್ಯಂತ್ರವನ್ನು ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಜನಜಾಗೃತಿ ಮೂಡಿಸುತ್ತಿದೆ ಎಂದರು.  ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ,  ಸಿ.ಟಿ ರವಿ,ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ   ರವಿ ಕುಮಾರ್, ಮಾಜಿ ಸಚಿವ ಎನ್. ಮಹೇಶ್,ಬಿಜೆಪಿ ನಗರಾಧ್ಯಕ್ಷರಾದ   ನಾಗೇಂದ್ರ, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸುಬ್ಬಣ್ಣ,   ಇಂದ್ರೇಶ್, ಶಾಸಕ ಟಿ.ಎಸ್ ಶ್ರೀವತ್ಸ,   ಸೀಮೆಂಟ್ ಮಂಜು,  ಹೆಚ್.ಕೆ ಸುರೇಶ್, ವಿಧಾನ ಪರಿಷತ್‌ ಸದಸ್ಯರಾದ   ರಘು ಕೌಟಿಲ್ಯ,   ಸುಜಾ ಕುಶಾಲಪ್ಪ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ , ರಾಜ್ಯ ಕಾರ್ಯದರ್ಶಿ  ಡಾ. ಲಕ್ಷ್ಮಿ  ಅಶ್ವಿನ್ ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್,  ನಿರಂಜನ್ ಕುಮಾರ್,   ಕೆ.ಜಿ ಬೋಪಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ,   ಸಿದ್ದರಾಜು, ತೋಂಟದಾರ್ಯ, ರಮೇಶ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ   ಡಾ. ಅನಿಲ್ ಥಾಮಸ್, ವಿಭಾಗ ಪ್ರಭಾರಿ    ಸ್ವಾಮಿ ಮರುಳಾಪುರ, ಸಹ ಪ್ರಭಾರಿ ಈ.ಸಿ ನಿಂಗರಾಜ್ ಗೌಡ, ಮೈಸೂರು ವಿಭಾಗದ ಮಂಡಲ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು, ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು,ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.