ಪ್ರಧಾನಿ ಎದುರು ಹಾಡುವ ಮೂಲಕ ಗಮನ ಸೆಳೆದ ಬಾಲಕಿ

ನವದೆಹಲಿ: ಭಾರತ ಟಿ20 ಕ್ರಿಕೆಟ್ ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಮತ್ತವರ ಪತ್ನಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿಯವರ ಎದುರು ಪುಟ್ಟ ಬಾಲಕಿಯೋರ್ವಳು ʼಮೊರದಗಲದ ಕಿವಿಯವನೇ ಡೊಳ್ಳುಬ್ಬಿದ ಪೊಡೆಯನೆ,ಕಿರಿಕಿರಿದಿಹ ಕಣ್ಣವನೇ ಬಾರ ಬಾʼ ಎಂದು ಹಾಡಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅದಕ್ಕೆ ಚಪ್ಪಾಳೆ ತಟ್ಟುತ್ತಿರುವುದು ಗಮನ ಸೆಳೆದಿದೆ. ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, “ದೀಪಾವಳಿಯ ಶುಭ ವಾತಾವರಣದಲ್ಲಿ ಶ್ರೀರಾಮ ಮತ್ತು ಸರಯೂ ಆಗಮನವಾಗಿದೆ. ಇದು ಈ ಬಾರಿಯ ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಪವಿತ್ರ ಹಾಗೂ ದೈವಿಕವಾಗಿಸಿದೆ” ಎಂದು ಬರೆದುಕೊಂಡಿದ್ದಾರೆ.ಭೇಟಿಯ ಸಂದರ್ಭದಲ್ಲಿ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಗೆಲುವಿನ ಸಂದರ್ಭದಲ್ಲಿ ತಮಗೆ ಲಭಿಸಿದ್ದ ಚಿನ್ನದ ಪದಕವನ್ನು ಸೂರ್ಯಕುಮಾರ್ ಧರಿಸಿದ್ದರು. ಪ್ರಧಾನಿ ಮೋದಿ ಆ ಪದಕವನ್ನು ಕೈಯಲ್ಲಿ ಹಿಡಿದು ಕಣ್ತುಂಬಿಕೊಂಡು, ಭಾರತ ತಂಡದ ಐತಿಹಾಸಿಕ ಗೆಲುವಿನ ಕ್ಷಣವನ್ನು ಸೂರ್ಯಕುಮಾರ್ ಅವರೊಂದಿಗೆ ಮೆಲುಕು ಹಾಕಿದರು.ಈ ಸಂದರ್ಭ ಪುಟಾಣಿ ಮಕ್ಕಳೊಂದಿಗೆ ಸುಂದರ ಕ್ಷಣಗಳನ್ನು ಕಳೆದರು.
ಸಂಬಂಧಿತ ಸುದ್ದಿಗಳು

ಜೀವ ವೈವಿಧ್ಯವನ್ನು ಉಳಿಸಲು ಉರಗ ಅತ್ಯವಶ್ಯ: ಮ.ನ. ಪ್ರಸನ್ನ ಕುಮಾರ್ ಹೇಳಿಕೆ
ಮದ್ದೂರು : ಉರಗಗಳು ಭೂಮಿಯ ಮೇಲಿನ ಪ್ರಮುಖ ಜೀವಿಗಳಲ್ಲಿ ಒಂದಾಗಿದ್ದು ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಮತ್ತು ಜೀವ ವೈವಿಧ್ಯ…
◷ 06/11/2026
ಬೋಳುಗುಡ್ಡ ಕ್ಯಾಂಪ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಗುಂಡ್ಲುಪೇಟೆ : ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬೋಳುಗುಡ್ಡ ಕ್ಯಾಂಪ್ಗ…
◷ 06/11/2026
ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ತಪ್ಪಿದೆ : ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ
ಕೊಪ್ಪಳ : ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತದ ಮೇಲೆ ಹಿಡಿತ ತಪ್ಪಿದ್ದು, ಹಣಕಾಸು ನಿರ್ವಹಣೆ ಮಾಡಲು ಸಾ…
◷ 06/11/2026
ರಾಹುಲ್ ಗಾಂಧಿಯಿಂದ ಅರಾಜಕತೆ ಸೃಷ್ಟಿಸಲು ಅನಗತ್ಯ ಯತ್ನ : ಗೌರವ್ ಭಾಟಿಯಾ ವಾಗ್ದಾಳಿ
ಮಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದಲ್ಲಿ ಅನಗತ್ಯವಾಗಿ ಅರಾಜಕತೆ ಸೃಷ್ಟಿಸಲು ಯತ್ನಿಸಿ ವಿಫಲರಾಗಿದ್ದಾರೆ ಎಂದು ಬ…
◷ 06/11/2026
