ಬೆಂಗಳೂರು : ಇಂದು ಗೃಹಕಚೇರಿ ಕೃಷ್ಣಾದಲ್ಲಿ   ಸರ್ಕಾರದ ಹೆಮ್ಮೆಯ ಗೃಹಲಕ್ಷ್ಮಿ ಯೋಜನೆಯ   ಫಲಾನುಭವಿಗಳೊಂದಿಗೆ ಸಿಎಂ ಡಿ.ಕೆ.ಸಿವಕುಮಾರ್ ಮುಕ್ತವಾಗಿ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ   ಗೃಹಲಕ್ಷ್ಮಿ ಫಲಾನುಭವಿಗಳು ತಾವೇ ಸ್ವತಃ ಕೈಯಿಂದಲೇ ಪ್ರೀತಿಯಿಂದ ತಯಾರಿಸಿದ ಸಣ್ಣ ಆಟಿಕೆಯ ತೊಟ್ಟಿಲು ಹಾಗೂ ದೀಪವನ್ನು ಸಿಎಂಗೆ ನೀಡಿದರು. ಅವರ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಹಾದಿಯಲ್ಲಿನ ಪ್ರಯತ್ನಗಳನ್ನು ಕಂಡು ನನ್ನ ಮನಸ್ಸಿಗೆ ಸಂತೋಷವಾಯಿತು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಸಿಎಂ ಇದೇ ವೇಳೆ ತಿಳಿಸಿದರು. ಸಂವಾದದ ಬಳಿಕ ದೀಪಾವಳಿ ಹಬ್ಬದ ಈ ಶುಭ ಸಂದರ್ಭದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗೌರವಪೂರ್ವಕವಾಗಿ ಬಾಗಿನ ನೀಡಿದರು.ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ   ಎಚ್.ಎಂ. ರೇವಣ್ಣ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ್ಯೆ   ಜಿ. ಪದ್ಮಾವತಿ, ನನ್ನ ಅಪರ ಮುಖ್ಯ ಕಾರ್ಯದರ್ಶಿ   ತುಷಾರ್ ಗಿರಿನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ಇಲಾಖೆಯ ನಿರ್ದೇಶಕ ಡಾ. ಮಹೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.