ಸಕಾಲದಲ್ಲಿ ನೀರಿಲ್ಲದಿದ್ದರೆ ನಾವು ಸಾಲಗಾರರಾಗುತ್ತೇವೆ : ನದಿಗಿಳಿದು ರೈತರ ಪ್ರತಿಭಟನೆ

ಮಂಡ್ಯ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸ್ನಾನಘಟ್ಟದ ಬಳಿ ಕಾವೇರಿ ನದಿಗಳಿದು ರೈತರು ಪ್ರತಿಭಟನೆ ನಡೆಸಿದರು.ರೈತ ಮುಖಂಡ ನಂಜುಂಡೇಗೌಡ ನೇತೃತ್ವದಲ್ಲಿ ನದಿಗಳಿದು ಪ್ರತಿಭಟನೆ ನಡೆಸಿದ ರೈತರು ಪದೇ ಪದೇ ನೀರು ಬಿಡವಂತೆ ಆದೇಶ ನೀಡುತ್ತಿರುವ ಪ್ರಾಧಿಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮಲ್ಲೇ ನೀರು ಇಲ್ಲ ತಮಿಳುನಾಡಿಗೆ ನೀರು ಹರಿಸಲು ಆದೇಶ ಕೊಡ್ತೀರಾ ಎಂದು ಪ್ರಾಧಿಕಾರವನ್ನು ಪ್ರಶ್ನಿಸಿದರು. ರಾಜ್ಯದ ಬರದ ವಸ್ತುಸ್ಥಿತಿ ಮನವರಿಕೆ ಮಾಡಿಕೊಡದ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಈ ಬಾರಿ ನೀರು ಹರಿಸದಂತೆ ಆಗ್ರಹಿಸಿದರು. ಜಿಲ್ಲೆಯ ಜನರಿಗೆ ಕುಡಿಯುವ ನೀರು ,ರೈತರ ಬೆಳೆಗೆ ಮತ್ತು ಜಾನುವಾರುಗಳಿಗೆ ಮೊದಲು ನೀರು ಕೊಡುವಂತೆ ಒತ್ತಾಯಿಸಿದರು.ಈ ಸಂದರ್ಭ ಮಾತನಾಡಿದ ರೈತರು ಮೈಸೂರು ಮಹಾರಾಜರು, ಮಹಾರಾಣಿಯವರು ಒಡವೆ ಅಡವಿಟ್ಟುನಮ್ಮ ಬದುಕನ್ನು ಹಸನು ಮಾಡಲು ಪ್ರಯತ್ನಿಸಿದರು. ಆದರೆ ಇವತ್ತಿನ ಜನಪ್ರತಿನಿಧಿಗಳು ತಮ್ಮ ಮಕ್ಕಳು, ಮೊಮ್ಮಕ್ಕಳು ಇನ್ನೂ ಐದು ತಲೆಮಾರು ಕುಳಿತು ತಿನ್ನುವಷ್ಟು ದುಡ್ಡು ಮಾಡುತ್ತಿದ್ದಾರೆಯೇ ಹೊರತು ಪ್ರಜಾಪ್ರಭುತ್ವದಲ್ಲಿ ಜನರ ಪರವಾದ ಆಡಳಿತ ಇಲ್ಲ. ನೀರಿನ ಸಂರಕ್ಷಣೆ ಕುರಿತು ಯಾವ ಕಾರಣಕ್ಕೂ ಓಡಾಡಿಲ್ಲ, ಈ ರಾಜ್ಯ ಸರ್ಕಾರ ನಮಗೆ ವಿಷ ಕೊಟ್ಟಿದೆ. ವಿಷ ಕೊಟ್ಟರೂ ನಾವು ಸುಮ್ಮನಿದ್ದರೆ ನಮ್ಮದು ಸತ್ತಂತ ಬದುಕು. ನಮಗೆ ಅನ್ಯಾಯವಾಗಿದೆ ಎಂದು ಕಾವೇರಿ ಜಲಾನಯನದ ಪ್ರದೇಶಗಳ ಎಲ್ಲರ ಪರವಾಗಿ ಧ್ವನಿ ಎತ್ತುವುದು , ಮುಂದಿನ ದಿನಗಳಲ್ಲಿ ಜನ ಸ್ವಯಂ ಪ್ರೇರಣೆಯಿಂದ ಬೀದಿಗೆ ಬರಬೇಕು. ಬೀದಿಗೆ ಬಂದಿಲ್ಲ ಅಂದರೆ ನಾವೆಲ್ಲ ಕಬ್ಬು ಬೆಳೆದಿದ್ದೇವೆ, ಬೇಸಾಯ ಮುಗಿಸಿದ್ದೇವೆ, ಸಕಾಲದಲ್ಲಿ ನೀರಿಲ್ಲ ಅಂದ್ರೆ ಬಂಡವಾಳ ಎಲ್ಲ ಹೋಗತ್ತೆ, ನಾವು ಸಾಲಗಾರರಾಗುತ್ತೇವೆ. ನಮ್ಮ ಮನೆ ಜಪ್ತಿ ಮಾಡಲು ಇದೇ ಎಂಎಲ್ ಎಗಳು ಬರುತ್ತಾರೆ. ಬ್ಯಾಂಕ್ ನವರು ನೋಟಿಸ್ ಕೊಡ್ತಾರೆ. ಇಂತಹ ಅನಾನುಕೂಲತೆಯನ್ನು ಇಂದಿನ ಆಡಳಿತ ಸೃಷ್ಟಿಸಿದೆ ಎಂದು ಆರೋಪಿಸಿದರು.
ಸಂಬಂಧಿತ ಸುದ್ದಿಗಳು

ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದೆ : ಪ್ರಿಯಾಂಕ್ ಖರ್ಗೆ ಆರೋಪ
ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಐಟಿ-ಬಿಟ…
◷ 07/11/2026
`ಭಾರತ್ ರೈಸ್’ ಹೆಚ್ಚುವರಿ ಹಂಚಿಕೆ
ನವದೆಹಲಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ `ಭಾರತ್ ರೈಸ್’ ಅನ್ನು ಹೆಚ್ಚುವರಿ ಹಂಚಿಕೆ ಮಾಡಿದ್ದು, …
◷ 07/11/2026
ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ 4 ರನ್ ಗಳ ರೋಚಕ ಗೆಲುವು
ನವದೆಹಲಿ : ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ 4 ರನ್ ಗಳ ರೋಚಕ ಗೆಲುವು ಸ…
◷ 07/11/2026
ಪಂಜಿನ ಮಹತ್ವದ ಕುರಿತು ವಿಶೇಷ ಜಾಗೃತಿ
ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಜೈಹಿಂದ್ ಕಟ್ಟೆಯಲ್ಲಿ ದೀಪಾವಳಿ ಹಬ್ಬ ಮತ್ತು ವಿಶೇಷವಾ…
◷ 07/11/2026
