ಪಂಜಿನ ಮಹತ್ವದ ಕುರಿತು ವಿಶೇಷ ಜಾಗೃತಿ

ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಜೈಹಿಂದ್ ಕಟ್ಟೆಯಲ್ಲಿ ದೀಪಾವಳಿ ಹಬ್ಬ ಮತ್ತು ವಿಶೇಷವಾದ ಪಂಜಿನ ಮಹತ್ವದ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ದೀಪಾವಳಿ ಮತ್ತು ಪಂಜಿನ ಮಹತ್ವದ ಕುರಿತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್. ಎನ್. ಋಗ್ವೇದಿ ದೀಪಾವಳಿ ಹಬ್ಬದ ನರಕ ಚತುರ್ದಶಿಯಿಂದ ಬಲಿಪಾಡ್ಯಮಿ ದಿನದವರೆಗೆ ಪ್ರತಿ ಮನೆಮನೆಗಳಲ್ಲೂ ಪಂಜಿನ ಮೂಲಕ ದೀಪಾವಳಿ ಆಚರಣೆ ಮಾಡುವುದು ಕರ್ನಾಟಕದ ವಿಶೇಷವಾಗಿದೆ. ಪಂಜು ಕೆಲವು ಕಡೆ ಕಾಶೀಕಡ್ಡಿ, ಕಾಸಿ ಕಡ್ಡಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪಂಜು ದೀಪಾವಳಿಯ ಸಂಜೆಯ ಹೊತ್ತು ಮನೆಯ ಮುಂಭಾಗ ಹಚ್ಚಿ ಇಡುವ ಸಂಪ್ರದಾಯವಿದೆ. ದನ ಕರುಗಳನ್ನು ತೊಳೆಯುವ ಕೊಟ್ಟಿಗೆ, ಗದ್ದೆ, ಮನೆಯ ಮುಂಭಾಗ ಪ್ರದರ್ಶಿಸಿ ಬಲೀಂದ್ರ ಚಕ್ರವರ್ತಿಯನ್ನು ಕೂಗಿ ಬೆಳಕನ್ನು ತೋರಿಸುವ ಸುಂದರ ಜನಪದ ಸಂಸ್ಕೃತಿಯೇ ಪಂಜು ಹಚ್ಚುವ ಹಬ್ಬವಾಗಿದೆ. ಸಾಮಾನ್ಯವಾಗಿ ಬಳಸುವ ತೆರಣ ಕಡ್ಡಿ , ಚಿಮ್ಮಿದಲೆ ಕಡ್ಡಿ , ಊರುಪಕಡ್ಡಿ, ಸುಜ್ಜಲು ಕಡ್ಡಿ , ಕಕ್ಕ ಕಡ್ಡಿ, ಸಿಗೆಕಡ್ಡಿ, ಚಿನ್ನವರಿಕೆ ಕಡ್ಡಿ, ಕಕ್ಕ ರೋಲೆ ಕಡ್ಡಿ , ಭೀಮನ ಕಡ್ಡಿ ಹೀಗೆ ವಿವಿಧ ಆಯುರ್ವೇದ ಗುಣವನ್ನು ಹೊಂದಿರುವ, ಬೆಟ್ಟಗುಡ್ಡಗಳಲ್ಲಿ, ಕುರುಚಲು ಪ್ರದೇಶಗಳಲ್ಲಿ ಬೆಳೆಯುವ ಕಡ್ಡಿ. ವಿಶೇಷವಾದ ಮಾನವನ ಆರೋಗ್ಯಕ್ಕೆ ಉತ್ತಮವಾದ ಗಾಳಿಯನ್ನು ನೀಡುವ ಈ ಎಲ್ಲಾ ಆಯುರ್ವೇದ ಕಡ್ಡಿಗಳು ಉರಿದಾಗ ಅದರಿಂದ ಹೊರಬರುವ ಹೊಗೆಯಿಂದ ಪರಿಸರವು ಶುದ್ದವಾಗಿ ಮಾನವನ ಅನೇಕ ರೋಗಗಳು ವಾಸಿಯಾಗುವ ನಂಬಿಕೆ ಇದೆ. ನರಗಳ ದೌರ್ಬಲ್ಯದ ನಿವಾರಣೆ, ಮೂಳೆ ಕೀಲು ನೋವು ನಿವಾರಣೆ, ದೇಹದ ಶಕ್ತಿ ಸಮರ್ಥನೆ, ಪರಿಸರವನ್ನು ಶುದ್ಧಗೊಳಿಸುವ ಆಯುರ್ವೇದ ಗುಣ ಹೊಂದಿರುವ ಕಡ್ಡಿ. ಮೂರು ದಿನಗಳ ಕಾಲ ನಿರಂತರವಾಗಿ ಸಂಜೆ ಹೊತ್ತು ಹತ್ತಿಸಿ ಸಂಭ್ರಮಿಸುವ ಸಂಪ್ರದಾಯ ಇದಾಗಿದೆ. ಕತ್ತಲೆಯನ್ನು ದೂಡಿ ಬೆಳಕನ್ನು ನೀಡುವ ಜ್ಞಾನದ ಜ್ಯೋತಿಯಾಗಿ ಸಂಭ್ರಮಿಸುವ ದೀಪಾವಳಿಯ ಪಂಜಿನ ಮಹತ್ವವನ್ನು ಅರಿತು ಸಂಭ್ರಮಿಸಬೇಕು. ಹಸಿರು ಪಟಾಕಿಯನ್ನು ಬಳಸಬೇಕು ಎಂದರು.ಪೆಂಜಿನ ಕಡ್ಡಿಗಳ ಕುರಿತು ಮಾತನಾಡಿದ ಕೊಂಗಳಪ್ಪ ಈ ಕಡ್ಡಿಗಳು ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯ ಯಶಸ್ವಿಯಾಗಲಿ.ಪ್ರತಿಯೊಂದು ಕಾರ್ಯದಲ್ಲೂ ನಮ್ಮ ಪೂರ್ವಿಕರು ವಿಶೇಷವಾಗಿ ಅಧ್ಯಯನ ಮತ್ತು ಪ್ರಯೋಜನಕಾರಿಯಾದ ಪ್ರಕೃತಿದತ್ತವಾದ ಉಪಕಾರವನ್ನು ಮಾಡಿದ್ದಾರೆ. ಎಲ್ಲರೂ ಬಳಸಿ ಪೂಜಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು.ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಬಸವಣ್ಣ , ಪವಿತ್ರ, ಪಲ್ಲವಿ ಸದಸ್ಯರಾದ ಮಹದೇವ ಪ್ರಸಾದ್, ಸಂಜು ಇದ್ದರು.
ಸಂಬಂಧಿತ ಸುದ್ದಿಗಳು

ಮಾತಾ ಅಮೃತಾನಂದಮಯಿ ಆಶೀರ್ವಾದ ಪಡೆದ ಸಿಎಂ
ಬೆಂಗಳೂರು : ಆಧ್ಯಾತ್ಮದ ನೆಲೆ, ಶಾಂತಿ ಮತ್ತು ಸೇವೆಯ ಸಂದೇಶ ಸಾರುವ ಬೆಂಗಳೂರಿನ ಜ್ಞಾನಭಾರತಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಇಂದು ಆ…
◷ 06/11/2026
ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಅಯೋಧ್ಯೆಯ ಸಾಂಸ್ಕೃತಿಕ ಗುರುತಿಗೆ ಹೊಸ ಗೌರವ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅಯೋಧ್ಯೆ/ಲಕ್ನೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಡಬಲ್ ಇಂಜಿನ್ ಸರ್ಕಾರವು ಅಯೋಧ್ಯೆಯ ಸಾಂಸ್ಕೃತಿಕ ಗುರುತಿಗೆ…
◷ 04/11/2026
ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದೆ : ಪ್ರಿಯಾಂಕ್ ಖರ್ಗೆ ಆರೋಪ
ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಐಟಿ-ಬಿಟ…
◷ 07/11/2026
ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾಗೆ 4 ರನ್ ಗಳ ರೋಚಕ ಗೆಲುವು
ನವದೆಹಲಿ : ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ 4 ರನ್ ಗಳ ರೋಚಕ ಗೆಲುವು ಸ…
◷ 07/11/2026
