ಹಾಸನಾಂಬ ದೇವಿ ದರ್ಶನ ಪಡೆದ ಸಚಿವ ಹೆಚ್.ಡಿ.ಕೆ ದಂಪತಿ

ಹಾಸನ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ದಂಪತಿ ಸಮೇತರರಾಗಿ ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ.ಬಳಿಕ ಅವರು ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಲ್ಲಿನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಲಂಚದ ಬಾಂಬ್ ಸಿಡಿಸಿದ್ದಾರೆ. ಇದೇ ವೇಳೆ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಪ್ ಚಾಟ್ ರಿಲೀಸ್ ಮಾಡಿದ್ದಾರೆ. ಡಿಸಿ ಕೆ.ಎಸ್ ಲತಾಕುಮಾರಿ ಪಿಎ ಶಶಿಕಿರಣ್ ಲಂಚ ಕೇಳಿ ಕ್ರಶರ್ ಮಾಲೀಕನ ಜೊತೆ ಮಾಡಿದ್ದು ಎನ್ನಲಾದ ವ್ಯಾಟ್ಸಪ್ ಚಾಟ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಕೇಂದ್ರ ಸಚಿವರು, 10 ರೂಪಾಯಿ ಲಂಚ ಕೇಳಿದ್ರೆ ನನಗೆ ಫೋನ್ ಮಾಡಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಇಲ್ಲಿನ ಸಚಿವರು ಕೊಡೋದು ಧರ್ಮ ಅಂತಾರೆ. ಇಂತಹದ್ದಕ್ಕೆ ಕಡಿವಾಣ ಹಾಕಿದ್ರೆ ನಾನೇ ಸನ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.ರಾಜ್ಯದ ಸಿಎಂಗೆ ಹೇಳ್ತಿನಿ, ಇದೊಂದು ಜಿಲ್ಲೆ ಅಲ್ಲ ಎಲ್ಲಾ ಕಡೆ ಇದೇ ವಾತಾವರಣ ಇದೆ. ಪ್ರತಿ ಶನಿವಾರ ಪ್ರಜಾ ಸೇವಾ ಕಾರ್ಯಕ್ರಮಕ್ಕೆ ಲಕ್ಷಾಂತರ ಹಣ ಖರ್ಚು ಮಾಡ್ತಾ ಇದ್ದೀರಿ. ಹಾಗಿದ್ರೆ ಅಲ್ಲಿ ಕೊಡುವ ಅರ್ಜಿಯ ಕಥೆ ಏನು? ಈ ಫೋನ್‌ಗಳನ್ನು ಸೀಜ್ ಮಾಡಿ ತನಿಖೆ ಮಾಡ್ತಿರಾ ಸಲೀಂ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.ಈ ದಾಖಲೆಯನ್ನು ಯಾರೋ ಅಧಿಕಾರಿನೇ ಕೊಟ್ಟಿದ್ದಾರೆ. ಮೂರು ಕ್ರಷರ್ ವಿಚಾರದಲ್ಲಿ ಈ ಚರ್ಚೆ ನಡೆದಿದೆ. ಸಿಎಂ ಹಾಸನಾಂಬ ದರ್ಶನ ಮಾಡಿ ಒಳ್ಳೆಯ ಮಾತು ಆಡ್ತಾರೆ. ಇಲ್ಲಿ ನಡೆಯುತ್ತಿರುವ ವಿಚಾರದಲ್ಲಿ ಕಡಿವಾಣ ಹಾಕ್ತಾರಾ ಕೇಳಿ? ಇಂತಹ ವಿಚಾರ ಮಾತಾಡಿ ಮಾತಾಡಿ ನನಗೇ ಬೇಸರ ಆಗಿದೆ.ಯಾರೂ ಅನ್ಯತಾ ಭಾವಿಸಬೇಡಿ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅದನ್ನು ಜನರ ಮುಂದೆ ಇಟ್ಟಿದ್ದೇನೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸಂಬಂಧಿತ ಸುದ್ದಿಗಳು

ಹಾಸನಾಂಬೆಯ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್
ಹಾಸನ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನವನ್ನು ಪಡೆ…
◷ 08/11/2026
ಬಸ್ತಾರ್ನಲ್ಲಿ ಭದ್ರತಾಪಡೆಗಳೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ
ಬಸ್ತಾರ್ : ಛತ್ತೀಸ್ಗಢದ ಬಸ್ತಾರ್ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬ ಆಚರಿಸಿ…
◷ 08/11/2026
100ನೇ ವರ್ಷಕ್ಕೆ ಕಾಲಿಟ್ಟ ಬಿಜೆಪಿ ಮುಖಂಡ ಲಾಲ್ ಕೃಷ್ಣ ಅಡ್ವಾಣಿ : ಶುಭ ಕೋರಿದ ಮೋದಿ
ನವದೆಹಲಿ : ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ತಮ್ಮ ಜೀವನದ 100ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ, ಪ್ರಧಾನಿ ನರೇ…
◷ 08/11/2026
ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದೆ : ಪ್ರಿಯಾಂಕ್ ಖರ್ಗೆ ಆರೋಪ
ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಐಟಿ-ಬಿಟ…
◷ 07/11/2026
