ಬಸ್ತಾರ್‌ನಲ್ಲಿ ಭದ್ರತಾಪಡೆಗಳೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ಬಸ್ತಾರ್ : ಛತ್ತೀಸ್‌ಗಢದ ಬಸ್ತಾರ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಪ್ರಧಾನಿ, ದೇಶದ ರಕ್ಷಣೆಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದರು. ಅಲ್ಲದೇ, ಭದ್ರತಾ ಸಿಬ್ಬಂದಿಯೆಲ್ಲರೂ ತಮ್ಮ ಕುಟುಂಬದ ಸದಸ್ಯರಿದ್ದಂತೆ ಎಂದು ಹೇಳಿದರು.ದೇಶಾದ್ಯಂತ ಹಾಗೂ ವಿದೇಶಗಳಲ್ಲಿರುವ ಕೋಟ್ಯಂತರ ಭಾರತೀಯರು ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ದೇಶ ಕಾಯುತ್ತಿರುವ ಯೋಧರೊಂದಿಗೆ ಹಬ್ಬ ಆಚರಿಸಲು ತಾವು ಆಗಮಿಸಿರುವುದಾಗಿ ತಿಳಿಸಿದರು.ದೇಶದ ಗಡಿಗಳಲ್ಲಿ ಹಾಗೂ ದೇಶದ ಒಳಭಾಗದಲ್ಲಿ ರಾಷ್ಟ್ರದ ರಕ್ಷಣೆ ಮಾಡುತ್ತಿರುವ ಭದ್ರತಾ ಸಿಬ್ಬಂದಿಯೆಲ್ಲರೂ ತಮ್ಮ ಕುಟುಂಬದ ಭಾಗವಾಗಿದ್ದಾರೆ. ಇಂದು ದೇಶದಾದ್ಯಂತ ಹಾಗೂ ಜಗತ್ತಿನ ಪ್ರತಿಯೊಂದು ಮೂಲೆಗಳಲ್ಲೂ ಕೋಟ್ಯಂತರ ಭಾರತೀಯರು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ದೂರದ ಊರುಗಳಿಂದಲೂ ಜನರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಕುಟುಂಬದವರು ಹಾಗೂ ಪ್ರೀತಿಪಾತ್ರರು ಒಂದೆಡೆ ಸೇರಿ ಸಂಭ್ರಮಿಸುವ ವಿಶೇಷ ಸಂದರ್ಭವಿದು. ನಾನೂ ಕೂಡ ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ದೇಶದ ಗಡಿಗಳಲ್ಲಿ ಹಾಗೂ ದೇಶದ ಒಳಗೆ ರಾಷ್ಟ್ರವನ್ನು ರಕ್ಷಿಸುತ್ತಿರುವವರು, ದೇಶದ ಕಾವಲುಗಾರರು ಹಾಗೂ ಭಾರತಮಾತೆಯ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರಾದ ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು ಎಂದು ತಿಳಿಸಿದರು.ಈ ಬಾರಿ ಬಸ್ತಾರ್‌ನ ಕಾಡುಗಳಲ್ಲಿ ದೀಪಾವಳಿ ಆಚರಿಸಲು ನಾನು ಬಂದಿದ್ದೇನೆ. ಒಂದು ಕಾಲದಲ್ಲಿ ನಕ್ಸಲಿಸಂನ ಸಮಸ್ಯೆ ತೀವ್ರವಾಗಿದ್ದ ಪ್ರದೇಶವಿದು. ಆದರೆ, ನಿಮ್ಮ ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಇದೇ ಪ್ರದೇಶದಲ್ಲಿ ಇಂದು ನಕ್ಸಲಿಸಂನ ಪ್ರಭಾವ ಅಂತ್ಯಗೊಂಡಿದ್ದು, ಅಭಿವೃದ್ಧಿಯ ಹೊಸ ಅಲೆ ಆರಂಭವಾಗಿದೆ ಎಂದು ಬಣ್ಣಿಸಿದರು.
ಸಂಬಂಧಿತ ಸುದ್ದಿಗಳು

ಪಂಜಿನ ಮಹತ್ವದ ಕುರಿತು ವಿಶೇಷ ಜಾಗೃತಿ
ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಜೈಹಿಂದ್ ಕಟ್ಟೆಯಲ್ಲಿ ದೀಪಾವಳಿ ಹಬ್ಬ ಮತ್ತು ವಿಶೇಷವಾ…
◷ 07/11/2026
ಮಾತಾ ಅಮೃತಾನಂದಮಯಿ ಆಶೀರ್ವಾದ ಪಡೆದ ಸಿಎಂ
ಬೆಂಗಳೂರು : ಆಧ್ಯಾತ್ಮದ ನೆಲೆ, ಶಾಂತಿ ಮತ್ತು ಸೇವೆಯ ಸಂದೇಶ ಸಾರುವ ಬೆಂಗಳೂರಿನ ಜ್ಞಾನಭಾರತಿಯ ಮಾತಾ ಅಮೃತಾನಂದಮಯಿ ಮಠದಲ್ಲಿ ಇಂದು ಆ…
◷ 06/11/2026
ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಅಯೋಧ್ಯೆಯ ಸಾಂಸ್ಕೃತಿಕ ಗುರುತಿಗೆ ಹೊಸ ಗೌರವ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅಯೋಧ್ಯೆ/ಲಕ್ನೋ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಡಬಲ್ ಇಂಜಿನ್ ಸರ್ಕಾರವು ಅಯೋಧ್ಯೆಯ ಸಾಂಸ್ಕೃತಿಕ ಗುರುತಿಗೆ…
◷ 04/11/2026
ಕೇಂದ್ರ ಸರ್ಕಾರ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದೆ : ಪ್ರಿಯಾಂಕ್ ಖರ್ಗೆ ಆರೋಪ
ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಐಟಿ-ಬಿಟ…
◷ 07/11/2026
