ಮೈಸೂರು :  ಮೈಸೂರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಅರ್ಜುನ ಸ್ಮಾರಕಕ್ಕೆ ನಿರಾಕ್ಷೇಪಣಾ ಪತ್ರ (NOC) ದೊರೆತಿರುವ ಹಿನ್ನೆಲೆಯಲ್ಲಿ, ಮುಂದಿನ ಹಂತದ ಪ್ರಕ್ರಿಯೆಗಳ ಕುರಿತು ನರಸಿಂಹರಾಜ ಕ್ಷೇತ್ರದ ಶಾಸಕ   ತನ್ವೀರ್ ಸೇಠ್ ಅವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಂಸದ ಯದುವೀರ್‌ ಒಡೆಯರ್ ಸಮಾಲೋಚನೆ ನಡೆಸಿ,  ಸಲಹೆಗಳನ್ನು ಸ್ವೀಕರಿಸಿದರು.