ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನೇಮಕವಾದ ನರಸಿಂಹರಾಜುಗೆ ಅಭಿನಂದನೆ

ವಿನಯ್ ದೊಡ್ಡಕೊಪ್ಪಲುಕೆ.ಆರ್.ನಗರ: ಮೈಸೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ರಾಜ್ಯ ಸರ್ಕಾರದಿಂದ ನೇಮಕವಾದ ಪುರಸಭೆಯ ಮಾಜಿ ಅಧ್ಯಕ್ಷ ನರಸಿಂಹರಾಜು ಅವರನ್ನು ಮಾರುತಿ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಸೋಮವಾರ ರಾತ್ರಿ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸನ್ಮಾನಿಸಿ ಅಭಿನಂದಿಸಿದರು.ಶ್ರೀ ಮಾರುತಿ ಯುವಕರ ಸಂಘದ ಗೌರವಾಧ್ಯಕ್ಷ ಹಾಗೂ ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಸ್.ಯೋಗಾನಂದ ಮಾತನಾಡಿ ಸರ್ಕಾರ ನಮ್ಮ ಬಡಾವಣೆಯ ನಿವಾಸಿಗಳಾದ ನರಸಿಂಹರಾಜು ಅವರಿಗೆ ನಿಗಮ ಮಂಡಳಿ ಸ್ಥಾನ ಕಲ್ಪಿಸಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದರು. ಪುರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ನಮ್ಮ ಬಡಾವಣೆ ಹಾಗೂ ಪಟ್ಟಣದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ ಅಲ್ಲದೆ ಇವರು ಅಂದಿನಿಂದಲೂ ಕೂಡ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಂತೆ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದು ಪಕ್ಷಾತೀತವಾಗಿ ನಮ್ಮ ಬಡಾವಣೆಯ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದರು.ನಮ್ಮ ಬಡಾವಣೆಯಲ್ಲಿ ಪ್ರತಿವರ್ಷ ನಡೆಯುವ ಹನುಮೋತ್ಸವ ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ನಮ್ಮಗಳ ಜತೆ ಬೆಂಬಲವಾಗಿ ನಿಂತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿರುವುದರಿಂದ ನಾವುಗಳು ಯಾವುದೇ ಪಕ್ಷ ಭೇದವಿಲ್ಲದೆ ಇಂದು ಮಾರುತಿ ಯುವಕರ ಸಂಘದಿಂದ ಅವರನ್ನು ಅಭಿನಂದಿಸುವ ಕಾರ್ಯ ಮಾಡುತ್ತಿದ್ದು ಅವರ ಸೇವೆ ಹಾಗೂ ಅವರು ನೇಮಕವಾಗಿರುವ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ನಮ್ಮ ತಾಲೂಕಿಗೆ ಹೆಸರು ತಂದು ಕೊಡಲಿ ಎಂದು ಆಶಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ನರಸಿಂಹರಾಜು ನಮ್ಮ ಬಡಾವಣೆಯಲ್ಲಿ ನಾವು ಎಂದಿಗೂ ಎಲ್ಲ ಜನರ ಪರವಾಗಿ ನಿಂತಿರುವುದರಿಂದಲೇ ಜನ ನನಗೆ ಆರ್ಶೀವಾದ ಮಾಡಿದ್ದು ಅದರಿಂದಲೇ ಪುರಸಭಾ ಸದಸ್ಯನಾಗಿ ಹಾಗೂ ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿರುತ್ತೇನೆ. ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಮತ್ತು ನಮ್ಮ ಕ್ಷೇತ್ರದ ಜನಪ್ರಿಯ ಶಾಸಕರಾದ ಡಿ.ರವಿಶಂಕರ್ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ದೊಡ್ಡಸ್ವಾಮೇಗೌಡರ ಶಿಪ್ಪಾರಸ್ಸು ಹಾಗೂ ಆಶೀರ್ವಾದದೊಂದಿಗೆ ನನಗೆ ಇಂದು ಸರ್ಕಾರ ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸದಸ್ಯನಾಗಿ ನಿಗಮ ಮಂಡಳಿ ಸ್ಥಾನ ಮಾನ ಕೊಟ್ಟಿದ್ದು ಅವರಿಗೆ ಯಾವುದೇ ರೀತಿ ಚ್ಯುತಿ ಬಾರದಂತೆ ನಡೆದುಕೊಂಡು ನಮ್ಮ ಬಡಾವಣೆ ಹಾಗೂ ಜನರ ಅಭಿವೃದ್ಧಿ ಹಾಗೂ ಕಷ್ಟಸುಖಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಶಿವುನಾಯಕ್, ಮಾಜಿ ಸದಸ್ಯರಾದ ಶಂಕರ್ ಸ್ವಾಮಿ, ವಿನಯ್, ಮಾರುತಿ ಯುವಕರ ಸಂಘದ ಖಜಾಂಚಿ ಕೆಂಚಿಮಂಜು, ಪ್ರಚಾರ ಸಮಿತಿ ಅಧ್ಯಕ್ಷ ಧರ್ಶನ್, ಸದಸ್ಯ ಮಹೇಂದ್ರ, ಬೆನಕರಾಜು, ಭರತ, ಹರೀಶ, ಪುನೀತ, ಕನಕ, ಶ್ರೀನಿವಾಸ್, ತೇಜು, ಲವ, ಅಂಗಡಿಲೋಕೇಶ್, ಮಹಿ, ಶರತ್ ಕುಮಾರ್ ಇನ್ನಿತರರು ಹಾಜರಿದ್ದರು.
ಸಂಬಂಧಿತ ಸುದ್ದಿಗಳು

‘ಬೇಡ್ತಿ-ವರದಾ ನದಿ ಜೋಡಣೆ ಯೋಜನೆ’ಯ ಪ್ರಗತಿ ಪರಿಶೀಲನಾ ಸಭೆ
ಬೆಂಗಳೂರು: ‘ಬೇಡ್ತಿ-ವರದಾ ನದಿ ಜೋಡಣೆ ಯೋಜನೆ’ಯ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು ಬೆಂಗಳೂರಿನ ಕೆಬಿಜೆಎನ್ಎಲ್ ಕೇಂದ್ರ ಕಚೇರಿಯಲ್…
◷ 17/11/2026
ಅರ್ಜುನ ಸ್ಮಾರಕಕ್ಕೆ ನಿರಾಕ್ಷೇಪಣಾ ಪತ್ರ : ಸಮಾಲೋಚನೆ
ಮೈಸೂರು : ಮೈಸೂರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಅರ್ಜುನ ಸ್ಮಾರಕಕ್ಕೆ ನಿರಾಕ್ಷೇಪಣಾ ಪತ್ರ (NOC) ದೊ…
◷ 17/11/2026
ಮಹಿಳೆಯರಿಗೆ ನಿಜವಾದ ಪಾಲುದಾರಿಕೆ ದೊರೆಯಬೇಕು : ಡಿಸಿಎಂ ಡಾ.ಜಿ.ಪರಮೇಶ್ವರ್
ಬೆಂಗಳೂರು: ಇಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾಮನ್ವೆಲ್ತ್ ಮಹಿಳಾ ಸಂಸದೀಯಪಟುಗಳ ಭಾರತ ಪ್ರಾದೇಶಿಕ ವ…
◷ 17/11/2026
ಕೇಂದ್ರದ ವಿರುದ್ಧದ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ದತೆ ನಡೆಸಿದ ರಾಜ್ಯ?
ಬೆಂಗಳೂರು : ರಾಜ್ಯಕ್ಕೆ ನೀಡಬೇಕಾದ ಅನುದಾನ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ಎರಡನೇ ಬಾರಿ ಕೇಂದ್ರದ ವಿರುದ್ಧದ ಸುಪ್ರೀಂಕೋರ್ಟ್…
◷ 17/11/2026
