ಮಂಡ್ಯ :  ತಮಿಳುನಾಡಿಗೆ   ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ನೀರಿಲ್ಲ ಎನ್ನುತ್ತಲೇ ರಾಜಾರೋಷವಾಗಿ ತಮಿಳುನಾಡಿಗೆ  ನೀರು   ರಾಜ್ಯ ಸರ್ಕಾರ ನೀರು ಹರಿಸುತ್ತಿದೆ ಎಂದು ರೈತರು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರದ  ಭಂಡತನದ ನಿರ್ಧಾರಕ್ಕೆ  ಜಿಲ್ಲೆಯ ಕೆಆರ್‌ ಎಸ್ ಜಲಾಶಯ‌ ಬರಿದಾಗುತ್ತಿದೆ. ಕೆಆರ್‌ ಎಸ್‌  ಡ್ಯಾಂಗೆ ಒಳ ಹರಿವು ಸಂಪೂರ್ಣ ಕಡಿಮೆ ಯಾಗಿದ್ದರೂ ತಮಿಳುನಾಡಿಗೆ ನಿರಂತರ ನೀರನ್ನು ಹರಿಸಲಾಗುತ್ತಿದೆ. ಪ್ರತಿನಿತ್ಯ 3 ಸಾವಿರ ಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ತಮಿಳುನಾಡಿಗೆ   ರಾಜ್ಯ ಸರ್ಕಾರ ಹರಿಸುತ್ತಿದೆ. ಡ್ಯಾಂ ಒಳ ಹರಿವಿನ ಪ್ರಮಾಣವು 500 ಕ್ಯೂಸೆಕ್ ಇದ್ದರೂ ಕೂಡ ತಮಿಳುನಾಡಿಗೆ   ನೀರು ಹರಿದು ಹೋಗುತ್ತಿದೆ. ಸದ್ಯ ಕೆಆರ್‌ ಎಸ್‌ ಡ್ಯಾಂ ನ ನೀರಿನ‌ ಮಟ್ಟ 100 ಅಡಿಗೆ ಕುಸಿತಗೊಂಡಿದೆ. ಡ್ಯಾಂನ ನೀರಿನ ಮಟ್ಟ ಕುಸಿತವಾಗಿದ್ದರೂ ನಿರಂತರವಾಗಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಸರ್ಕಾರದ ನೀರು ಬಿಡುತ್ತಿರುವ  ನಿರ್ಧಾರಕ್ಕೆ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಮಾತನಾಡಿ ಸರ್ಕಾರ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಕಾರಣ ಕಾವೇರಿ ನದಿ ಬರಿದಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಬೆಳೆಗೆ ನೀರು ಬೇಕು, ಕುಡಿಯಲು ನೀರು ಬೇಕು. ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ, ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ. ಸ್ವಲ್ಪನಾದ್ರೂ ಕರುಣೆ, ಅನುಕಂಪ ಇದ್ದರೆ ಕರ್ನಾಟಕದ ರೈತರನ್ನು ಉಳಿಸಿ, ಕುಡಿಯುವ ನೀರನ್ನು ಉಳಿಸಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾವೇರಿ ಹೋರಾಟ, ಧರಣಿ, ಚಳವಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡ ನಂಜುಂಡೇಗೌಡ  ಮಾತನಾಡಿ ಏನೇ ಆಗಲಿ ಮಂಡ್ಯ ರೈತರನ್ನು ಸರಿಯಾಗಿ ಬಲಿ ಹಾಕಬೇಕು ಎಂದು ಸರ್ಕಾರ ನಿರ್ಧರಿಸಿದೆ. ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನೀರು ಬಿಡುವ ಉದ್ಧಟತನ ತೋರಿಸುತ್ತಿರಲಿಲ್ಲ. ಮಂಡ್ಯ ರೈತರಿಗೆ ಡಿಸೆಂಬರ್ ಬೆಳೆಗೂ ನೀರು ಇರಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿ ಆಯ್ಕೆ ಮಾಡಿರುತ್ತೇವೆ. ಅವರೇ ವಿಷ ಕೊಟ್ಟರೆ, ಹೆತ್ತತಾಯಿಯೇ ಮಕ್ಕಳಿಗೆ ವಿಷಯ ಕೊಟ್ಟರೆ ಆ ಪರಿಸ್ಥಿತಿಯನ್ನು ಈ ಕಾಂಗ್ರೆಸ್ ಸರ್ಕಾರ ಕುಡಿಯುವ ನೀರಿಗೆ ಮಾಡ್ತಿದೆ ಎಂದು ಆರೋಪಿಸಿದರು.