ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದರ ಏರಿಕೆ

ಬೆಂಗಳೂರು : ಕೆಎಸ್ ಆರ್ ಟಿಸಿ, ಬಿಎಂಟಿಸಿ , ಎನ್ ಡಬ್ಲ್ಯುಕೆಆರ್ ಟಿಸಿ ಮತ್ತು ಕೆಕೆಆರ್ ಟಿಸಿ ಸೇರಿ ನಾಲ್ಕೂ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಆ ಮೂಲಕ ಬೆಲೆ ಹೆಚ್ಚಳದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬರೆ ಎಳೆದಿದೆ. ಕೆಎಸ್ ಆರ್ಟಿಸಿಯಲ್ಲಿ ಟಿಕೆಟ್ ದರ 9 ರೂಪಾಯಿ ಏರಿಕೆ ಆಗಲಿದೆ. ಬಿಎಂಟಿಸಿ ಬಸ್ ಗೆ ಸ್ಟೇಜ್ ಗೆ ಇದ್ದ 6 ರೂಪಾಯಿಯನ್ನು 10 ರೂಪಾಯಿಗೆ ಹೆಚ್ಚಿಸಲಾಗಿದೆ. ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇಕಡಾವಾರು ಲೆಕ್ಕದಲ್ಲಿ ಹೆಚ್ಚಿಸದೆ, ಸ್ಟೇಜ್‌ಗಳ ಆಧಾರದ ಮೇಲೆ ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಬೈರತಿ ಸುರೇಶ್ ಪ್ರಕಟಿಸಿದರು. ಸಾಮಾನ್ಯ ಬಸ್ ಗಳಲ್ಲಿ ಗರಿಷ್ಠ ಪ್ರಯಾಣ ದರ ಗರಿಷ್ಟ 9 ರೂಪಾಯಿ ಹೆಚ್ಚಳವಾಗಲಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಸುದ್ದಿಗೋಷ್ಠಿ ನಡೆಸಿ , ಡೀಸೆಲ್ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.ಹತ್ತಿರದ ಪ್ರಯಾಣ : 2 ಕಿ.ಮೀ. ವರೆಗಿನ ಪ್ರಯಾಣಕ್ಕೆ 4 ರೂ., 2 ಕಿ.ಮೀ. ನಿಂದ 4 ಕಿ.ಮೀ. ವರೆಗಿನ ಪ್ರಯಾಣಕ್ಕೆ 6 ರೂ. ರಷ್ಟು ಹೆಚ್ಚಳ ಮಾಡಲಾಗಿದೆ. ನಿಗಮಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ಸಾಲದ ಹೊರೆಯೇ ದರ ಪರಿಷ್ಕರಣೆಗೆ ಪ್ರಮುಖ ಕಾರಣ ಎಂದು ವಿವರಿಸಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳು ಒಟ್ಟಾರೆಯಾಗಿ ಸುಮಾರು 10,200 ಕೋಟಿ ರೂ. ನಷ್ಟ ಹೊಂದಿದ್ದು, 9,912.10 ಕೋಟಿಯಷ್ಟು ಬಾಕಿ ಹಾಗೂ ಹೊಣೆಗಾರಿಕೆಗಳನ್ನು ಹೊತ್ತುಕೊಂಡಿವೆ.
ಸಂಬಂಧಿತ ಸುದ್ದಿಗಳು

ಅಮೆರಿಕ ಮಧ್ಯಂತರ ಚುನಾವಣೆ : ಕಾಂಗ್ರೆಸ್ನ ಉಭಯ ಸದನಗಳಲ್ಲಿ ಡೆಮೋಕ್ರಾಟ್ಗಳಿಗೆ ಭಾರೀ ಜಯ
ವಾಷಿಂಗ್ಟನ್ : ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ವಿರೋಧ ಪಕ್ಷವಾದ ಡೆಮೋಕ್ರಾಟಿಕ್ ಪಾರ್ಟಿ ಐತಿಹಾಸಿಕ ಜಯಗಳಿಸಿದ್ದು, ಯುಎಸ್ ಕಾಂಗ್ರ…
◷ 04/11/2026
ಐತಿಹಾಸಿಕ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಯ್ಲಿ
ಆಂಕ್ಲೆಂಡ್ : ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆ…
◷ 04/11/2026
50ದಿನ ಪೂರೈಸಿದ ಅಮೆರಿಕಾ ಅಮೆರಿಕಾ2
ಬೆಂಗಳೂರು : ಹಿರಿಯ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ‘ಅಮೆರಿಕಾ ಅಮೆರಿಕಾ 2’ 50 ದಿನ…
◷ 04/11/2026
ನ್ಯೂಜಿಲೆಂಡ್ 185 ರನ್ ಗಳಿಗೆ ಆಲೌಟ್: ಅರ್ಷದೀಪ್ ಸಿಂಗ್ ಗೆ 4 ವಿಕೆಟ್, ಭಾರತಕ್ಕೆ ಸುಲಭ ಗುರಿ
ಆಂಕ್ಲೆಂಡ್ : ಈಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ತಂಡವ…
◷ 04/11/2026
